Karnataka

ಈ ಬಾರಿಯೂ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾದಿಸಿದ್ದಾರೆ

ಬೆಂಗಳೂರು: ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿದ್ದು, ಶೇ. 79.16 ರಷ್ಟು ಫಲಿತಾಂಶ ಹೊರಬಂದಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಗ್ರಾಮೀಣ ಪ್ರತಿಭೆಗಳಿಂದ ಉತ್ತಮ ಸಾಧನೆ ಮಾಡಿದ್ದಾರೆ.
ಶೇ. 82.64 ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದು, ಶೇ. 75.84 ಬಾಲಕರು ಉತ್ತೀರ್ಣರಾಗಿದ್ದಾರೆ. ಒಟ್ಟು 6,17,255 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ವರ್ಷದ ಫಲಿತಾಂಶಕ್ಕಿಂತ ಈ ಬಾರಿ ಫಲಿತಾಂಶ ಕುಸಿತ ಕಂಡಿದೆ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.
ಒಟ್ಟಾರೆ 3,01,447 ಬಾಲಕಿಯರು ಉತ್ತೀರ್ಣರಾಗಿದ್ದರೆ, 3,03,088 ಬಾಲಕರು ಉತ್ತೀರ್ಣರಾಗಿದ್ದಾರೆ. ಇನ್ನು ಈ ಬಾರಿ ರಾಜ್ಯದ ಒಟ್ಟು 52 ಶಾಲೆಗಳಲ್ಲಿ ಶೂನ್ಯ ಸಂಪಾದಿಸಿದ್ದು, ಸರ್ಕಾರಿ 3, ಅನುದಾನ 6, ಅನುದಾನ ರಹಿತ 43 ಶಾಲೆಗಳು ಶೂನ್ಯ ಫಲಿತಾಂಶ ಪಡೆದುಕೊಂಡಿವೆ.

ಯಾವ ಜಿಲ್ಲೆಗೆ ಯಾವ ಸ್ಥಾನ?:

  1. ಬೆಂಗಳೂರು ಗ್ರಾಮಾಂತರ ಶೇ. 89.63 ರಷ್ಟು ಫಲಿತಾಂಶ ಪಡೆದು ಅಗ್ರಸ್ಥಾನ ಪಡೆದುಕೊಂಡಿದ್ದರೆ.
  2. ಉಡುಪಿ – ಶೇ. 89.52 2ನೇ ಸ್ಥಾನದಲ್ಲಿದೆ.
  3. ಮಂಗಳೂರು – ಶೇ. 88.01 3ನೇ ಸ್ಥಾನದಲ್ಲಿದ್ದರೆ,
  4. ಬಳ್ಳಾರಿ ಶೇ. 56.68 ಗಳಿಸುವ ಮೂಲಕ ನಾಲ್ಕನೇ ಸ್ಥಾನದಲ್ಲಿದೆ.

ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆಯುವ ಮೂಲಕ ಭದ್ರಾವತಿಯ ಪೂರ್ಣ ಪ್ರಜ್ಞಾ ಶಾಲೆಯ ವಿದ್ಯಾರ್ಥಿ ರಂಜನ್ ಎಸ್ ರಾಜ್ಯಕ್ಕೆ ಟಾಪರ್ ಎನಿಸಿಕೊಂಡಿದ್ದಾನೆ.

ಮೈಸೂರಿನ ಮರಿ ಮಲ್ಲಪ್ಪ ಶಾಲೆಯ ವಿದ್ಯಾರ್ಥಿನಿ ಈಶು 625ಕ್ಕೆ 624 ಅಂಕ ಗಳಿಸಿ 2ನೇ ಸ್ಥಾನ ಪಡೆದಿದ್ದಾಳೆ.

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ನಕಲು ಮಾಡಿ 76 ವಿದ್ಯಾರ್ಥಿಗಳು ಡಿಬಾರ್ ಆಗಿದ್ದಾರೆ. ಇನ್ನು ಪೂರಕ ಪರೀಕ್ಷೆ ಜೂನ್ 20 ರಿಂದ 27 ವರೆಗೆ ನಡೆಯಲಿದ್ದು, ಪೂರಕ ಪರೀಕ್ಷೆ ನೊಂದಾಯಿಸಿಕೊಳ್ಳಲು ಮೇ 25 ಕೊನೆಯ ದಿನಾಂಕ ಎಂದು ಕಿಮ್ಮನೆ ಹೇಳಿದ್ದಾರೆ.

Amazon Big Indian Festival
Amazon Big Indian Festival
To Top