Karnataka

ನಾನು ಎಂದಿಗೂ ಕನ್ನಡಿಗರ ವಿರುದ್ದ ಹೇಳಿಕೆ ನೀಡೊಲ್ಲ – ಸುಹಾಸಿನಿ…

ಕನ್ನಡದ ಹಲವಾರು ಯಶಸ್ವಿ ಚಿತ್ರಗಳಲ್ಲಿ ದಕ್ಷಿಣ ಭಾರತದ ಹಿರಿಯ ನಟಿ ತುಂಬಾ ಪ್ರಬುದ್ದವಾದ ಹೇಳಿಕೆಯೊಂದನ್ನು ಕಾವೇರಿ ಹೋರಾಟದ ಸಂಬಂಧ ನೀಡಿದ್ದಾರೆ.. ಸುಹಾಸಿನಿರವರು ವಿಷ್ಣುವರ್ಧನ್ ಮತ್ತು ಹಲವಾರು ಕನ್ನಡದ ಹಿರಿಯ ನಟರೊಂದಿಗೆ ಅದ್ಭುತ ನಟನೆ ಮಾಡಿದ್ದಾರೆ. ಬೆಂಕಿಯಲ್ಲಿ ಅರಳಿದ ಹೂ, ಅಮೃತವರ್ಷಿಣಿ, ಮುತ್ತಿನ ಹಾರ ಮುಂತಾದ ಅತ್ಯದ್ಭುತ ಕನ್ನಡ ಚಲನಚಿತ್ರಗಳಲ್ಲಿ ಅಮೋಘ ನಟನೆ ಮೂಲಕ ಕನ್ನಡಿಗರ ಮನದಲ್ಲಿ ಛಾಪು ಮೂಡಿಸಿದ್ದಾರೆ. ಮೂಲತಃ ತಮಿಳವರಾದರೂ ಕನ್ನಡವನ್ನು ಕಲಿತು ಸ್ವತಃ ತಾವೇ ತಮ್ಮ ಎಲ್ಲ ಚಿತ್ರಗಳಿಗೂ ಅದ್ಭುತವಾಗಿ ಡಬ್ಬಿಂಗ್  ಮಾಡಿದ್ದಾರೆ.

ಈಗ ಕನ್ನಡಿಗರು ಅವರಿಗೆ ತೋರಿಸಿರುವ ಪ್ರೀತಿಗೆ ಅವರು ಕನ್ನಡಿಗರ ಪರವಾಗಿ ಹೇಳಿಕೆಯನ್ನು ನೀಡಿ ಕನ್ನಡಿಗರ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ..

ಇಷ್ಟಕ್ಕೂ ಅವರು ಹೇಳಿದ್ದಾದರೂ ಏನು, ಇಲ್ಲಿದೆ ನೋಡಿ….

“ಕಾವೇರಿ ನೀರು ಎಲ್ಲರಿಗೂ ಬೇಕು, ಕನ್ನಡದ ರೈತರು ತಮಗೆ ಅನ್ಯಾಯವಾಗಿದೆ ಅಂತ ಹೋರಾಟ ಮಾಡಿದರೆ ಅದರಲ್ಲಿ ತಪ್ಪೇನಿದೆ? ನ್ಯಾಯಕ್ಕೋಸ್ಕರ ನಡೆಯುವ ಯಾವುದೇ ಹೋರಾಟ ತಪ್ಪಿಲ್ಲ, ಅದನ್ನು ನಾನು ಬೆಂಬಲಿಸುತ್ತೇನೆ. ತಮಿಳು ನಾಡಿನ ರೈತನಿಗೆ ಅನ್ಯಾಯವಾದರೆ ನಾನು ಅದನ್ನೂ ಬೆಂಬಲಿಸುತ್ತೇನೆ. ನೀವು ಎಷ್ಟೇ ಒತ್ತಾಯ ಮಾಡಿದರೂ ನಾನು ಕನ್ನಡ ಮತ್ತು ಕನ್ನಡಿಗರ ಕಾವೇರಿ ಹೋರಾಟದ ವಿರುದ್ದ ಹೇಳಿಕೆ ಕೊಡುವುದಿಲ್ಲ. ಈ ಹಿಂದೆ ರೂಜಾ ಚಿತ್ರವನ್ನು ನನ್ನ ಗಂಡ ಮಾಡಿದಾಗ ಕಾಶ್ಮೀರಿ ಉಗ್ರರು ಮನೆಯ ಮೇಲೆ ಬಾಂಬು ಹಾಕಿದಾಗಲೇ ನಾನು ಹೆದರದವಳು, ನಿಮ್ಮ ಕೂಗಟಕ್ಕೆ ಹೆದರುತ್ತೇನಾ?”

ಇಂತಹ ಅಧ್ಬುತ ವ್ಯಕ್ತಿತ್ವ ಉಳ್ಳವರನ್ನು ಮಾತ್ರ ಕನ್ನಡಿಗರು ಸ್ವೀಕರಿಸುತ್ತಾರೆ ಎನ್ನುವುದಕ್ಕೆ ಮಾತ್ತೊಂದು ನಿದರ್ಶನ….

Health Articles written here, are only a guideline. Please consult a doctor before adopting these changes.

ಈ ಅರೋಗ್ಯ ಮಾಹಿತಿಯು ನಿಮಗೆ ಒಂದು ಮಾರ್ಗದರ್ಶಿ ಮಾತ್ರ, ಇದನ್ನು ಪಾಲನೆ ಮಾಡುವ ಮುನ್ನ ವೈದ್ಯರನ್ನು ಸಂಪರ್ಕಿಸಿ..

Comments

comments

Click to comment

Leave a Reply

Your email address will not be published. Required fields are marked *

To Top