ಪಿಇಎಸ್ ವಿಶ್ವವಿದ್ಯಾಲಯದಿಂದ ಯಶಸ್ವಿ ಉಪಗ್ರಹ ಉಡಾವಣಾ:
ನಮ್ಮ ಪಿಇಎಸ್ ವಿಶ್ವವಿದ್ಯಾಲಯ (PESU) ವಿದ್ಯಾರ್ಥಿಗಳು, ತಮ್ಮ ನ್ಯಾನೋ ಉಪಗ್ರಹವನ್ನು ಯಶಸ್ವಿಯಾಗಿ ಶ್ರೀಹರಿಕೋಟದಿಂದ ಧ್ರುವದ ಕಕ್ಷೆಗೆ ಉಡಾವಣೆ ಮಾಡಿ ಕನ್ನಡಿಗರಿಗೆ ಹೆಮ್ಮೆ ತಂದಿದ್ದಾರೆ.
ಪಿಇಎಸ್ ಇಮೇಜಿಂಗ್ ಸ್ಯಾಟಲೈಟ್ (PiSat) ಒಂದು ನ್ಯಾನೋ-ಉಪಗ್ರಹ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಹಯೋಗದಲ್ಲಿ ಪಿಇಎಸ್ ವಿಶ್ವವಿದ್ಯಾಲಯ ಇದನ್ನು ಅಭಿವೃದ್ಧಿಪಡಿಸಿದ್ದಾರೆ . ಉಪಗ್ರಹ ಇಸ್ರೊದ ಮುಖ್ಯ ಉಪಗ್ರಹ ಪಿಎಸ್ಎಲ್ವಿ C35 ಜೊತೆಗೆ, ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ, ಶ್ರೀಹರಿಕೋಟದಿಂದ ಉಡಾವಣೆ ಮಾಡಲಾಗಿದೆ.
ಇಸ್ರೋ ಸಾಧನೆಯಲ್ಲಿ ಬೆಂಗಳೂರಿನ ಪಿಇಎಸ್ ಇಂಜಿನಿಯರ್ ವಿದ್ಯಾರ್ಥಿಗಳ ಪಾಲೂ ಸೇರಿದೆ. 8 ಉಪಗ್ರಹಗಳ ಪಟ್ಟಿಯಲ್ಲಿ ಬೆಂಗಳೂರಿನ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ರೂಪಿತವಾದ ಪೈಸ್ಯಾಟ್ ಹೆಸರಿನ ಉಪಗ್ರಹವೂ ಒಂದಾಗಿದೆ. ನಮ್ಮ ಕನ್ನಡದ ವಿದ್ಯಾರ್ಥಿಗಳು ಸೇರಿ ನಿರ್ಮಿಸಿದ ಈ ಉಪಗ್ರಹವನ್ನು ಸಾಂಬಶಿವ ರಾವ್ ಹಾಗೂ ಅಗರ್ವಾಲ್ ಮಾರ್ಗದರ್ಶನದಲ್ಲಿ ನಿರ್ಮಿಸಲಾಗಿತ್ತು.
ಇದನ್ನು ನಿರ್ಮಿಸಲು ಐದು ವರ್ಷಗಳ ತಗುಲಿದ್ದು, ಇದರ ಕಂಟ್ರೋಲಿಂಗ್ ವ್ಯವಸ್ಥೆ ಪಿಇಎಸ್ ಕಾಲೇಜಿನಲ್ಲೇ ಇದೆ ಹಾಗೂ ಇದರ ನಿರ್ಬಹಣೆಯನ್ನು ವಿದ್ಯಾರ್ಥಿಗಳೇ ನಿರ್ವಹಿಸಲಿದ್ದಾರೆ.
ವಿದ್ಯಾರ್ಥಿಗಳ ಈ ಕೆಲಸ ಮತ್ತು ಶ್ರೇಷ್ಠತೆಯನ್ನು ಪ್ರಧಾನಿ ನರೇಂದ್ರ ಮೋದಿ ಗುರುತಿಸಿ ಟ್ವಿಟರ್ ನಲ್ಲಿ ಬರೆದದ್ದು ಈಗೆ : “PiSat ರಚಿಸಿದ ಪಿಇಎಸ್ ವಿಶ್ವವಿದ್ಯಾಲಯ ಬೆಂಗಳೂರಿನ ವಿದ್ಯಾಥಿಗಳಿಗೆ ನನ್ನ ಹೃತ್ಪೂರ್ವಕ ವಂದನೆಗಳು”
I applaud the industrious & innovative students of @PESUniversity, Bengaluru for creating the PiSat that was launched successfully today.
— Narendra Modi (@narendramodi) September 26, 2016
thenewsism.com ತಂಡ PiSat ಪ್ರಾಜೆಕ್ಟ್ನಲ್ಲಿ ಒಳಗೊಂಡಿರುವ ಎಲ್ಲ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸುತ್ತದೆ ಮತ್ತು ಕನ್ನಡದ ಯುವ ಜನಾಂಗ ಮತ್ತಷ್ಟು ನಾವೀನ್ಯತೆಯನ್ನು ಬಳಸಲ್ಪಡುತ್ತದೆ ಎಂಬ ಭರವಸೆ ನಮಗೆ ಇದೆ.
