Entertainment

ನಿಮ್ಮ ವಾಟ್ಸಾಪ್ ಪ್ರೊಫೈಲ್ ಯಾರು ನೋಡ್ತಿದ್ದಾರೆ ಗೊತ್ತಾಗಬೇಕಾ?

whatsapp4

ವಾಟ್ಸಾಪ್ ಪ್ರಪಂಚದ ಪ್ರಖ್ಯಾತ ಮೆಸೇಜಿಂಗ್‌ ಆಪ್‌ ಎಂಬುದು ಹೊಸ ವಿಷಯವೇನು ಅಲ್ಲ. ಅಂದಹಾಗೆ ಇತ್ತೀಚೆಗೆ ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್ ಕಂಪನಿ ಆಪ್‌ಗೆ ಜಿಫ್‌(gif) ಸೆಂಡಿಂಗ್‌ ಮತ್ತು ಆಡಿಯೋ ಕರೆಯ ಫೀಚರ್‌ಗಳನ್ನು ಸೇರಿಸಿದೆ.

ವಾಟ್ಸಾಪ್‌ ಬಗೆಗಿನ ಇತ್ತೀಚಿನ ಅಪ್‌ಡೇಟ್‌ ಎಂದರೆ, ವೀಡಿಯೊ ಕರೆ ಫೀಚರ್‌ ಟೆಸ್ಟಿಂಗ್‌ ನಡೆಸುತ್ತಿದೆ. ಅಂದಹಾಗೆ ಈಗಾಗಲೇ ಸಾಮಾಜಿಕ ತಾಣವಾದ ‘ಲಿಂಕ್ಡ್‌ಇನ್‌’ ತನ್ನ ಬಳಕೆದಾರರಿಗೆ ಯಾರು ಅವರ ಪ್ರೊಫೈಲ್ ಅನ್ನು ನೋಡಿದ್ದಾರೆ ಎಂಬ ಮಾಹಿತಿಯನ್ನು ತಿಳಿಯಲು ಫೀಚರ್ ನೀಡಿದೆ.

ಅಂತೆಯೇ ಇಂದಿನ ವಾಟ್ಸಾಪ್‌(WhatsApp) ಬಳಕೆದಾರರು ತಮ್ಮ ಪ್ರೊಫೈಲ್‌ ಅನ್ನು 24 ಗಂಟೆಗಳ ಸಮಯದಲ್ಲಿ ಯಾರು ನೋಡಿದ್ದಾರೆ ಎಂದು ತಿಳಿಯಬಹುದಾದ ಟ್ರಿಕ್ಸ್‌ ಅನ್ನು ಪರಿಚಯಿಸುತ್ತಿದ್ದೇವೆ. ವಾಟ್ಸಾಪ್ ಆಪ್‌ ಇರುವ ಯೂತ್ಸ್‌ಗಳು ಹುಡುಗರೇ ಆಗಲಿ, ಹುಡುಗಿಯರೇ ಆಗಲಿ ತಮ್ಮ ಸ್ನೇಹಿತರ ಪ್ರೊಫೈಲ್‌ ಪಿಕ್ ಚೆಕ್‌ ಮಾಡುವುದನ್ನು ಮಿಸ್‌ ಮಾಡುವುದಿಲ್ಲ. ಈ ರೀತಿ ನಿಮ್ಮ ಪ್ರೊಫೈಲ್ ಅನ್ನು ಯಾರು ನೋಡಿದ್ದಾರೆ ಎಂದು ತಿಳಿಯಲು ಇಂದಿನ ಟ್ರಿಕ್ಸ್‌ ಅನ್ನು ತಿಳಿಯಿರಿ.

ಹಂತ 1ː ‘WhatApp -Who Viewed Me’ ಆಪ್‌ ಡೌನ್‌ಲೋಡ್ ಮಾಡಿ

0

ವಾಟ್ಸಾಪ್‌ನಲ್ಲಿ ನಿಮ್ಮ ಪ್ರೊಫೈಲ್‌ ಅನ್ನು ಯಾರು ನೋಡಿದ್ದಾರೆ ಎಂದು ತಿಳಿಯಲು ‘WhatApp -Who Viewed Me’ ಆಪ್‌ ಡೌನ್‌ಲೋಡ್ ಮಾಡಿ . ಅಂದಹಾಗೆ ಈ ಆಪ್‌ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿಲ್ಲ. ಆದ್ದರಿಂದ ಗೂಗಲ್‌ನಲ್ಲಿ ಸರ್ಚ್‌ ಮಾಡಿ ಡೌನ್‌ಲೋಡ್‌ ಮಾಡಿಕೊಳ್ಳಿ.

ಹಂತ 2 ː ಅಪ್ರೂವ್ ಓಪನ್‌ ಮಾಡಿ

1

ಆಪ್‌ ಅನ್ನು ಇನ್‌ಸ್ಟಾಲ್‌ ಮಾಡಿ, ಓಪನ್‌ ಮಾಡಿ. ಅಪ್ಲಿಕೇಶನ್‌ನಲ್ಲಿ ನೀಡಿದ ಪ್ರಾಥಮಿಕ ಎಚ್ಚರಿಕೆಗಳೆಲ್ಲವನ್ನು ಅಪ್ರೂವ್‌ ಮಾಡಿ.

ಹಂತ 3ː ಸ್ಕ್ಯಾನ್‌ ಬಟನ್ ಕ್ಲಿಕ್ ಮಾಡಿ

2

ನಂತರದಲ್ಲಿ ಹೋಮ್‌ ಸ್ಕ್ರೀನ್‌ನಲ್ಲಿ ಲಭ್ಯವಿರುವ ಸ್ಕ್ಯಾನ್‌ ಬಟನ್‌ ಅನ್ನು ಕ್ಲಿಕ್‌ ಮಾಡಿ.

ಹಂತ 4ː ಲೀಸ್ಟ್ ಲೋಡ್‌ ಆಗುವವರೆಗೆ ಕಾಯಿರಿ

3
ಅಂದಹಾಗೆ ಡಾಟಾ ಅಪ್‌ಡೇಟ್‌ ಆಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಡಾಟಾ ಲೋಡ್‌ ಆದ ನಂತರ ನೀವು ನಿಮ್ಮ ಪ್ರೊಫೈಲ್‌ಗೆ 24 ಗಂಟೆಗಳ ಅವಧಿಯಲ್ಲಿ ಯಾರು ಭೇಟಿ ನೀಡಿದ್ದಾರೆ ಎಂಬುದನ್ನು ಚೆಕ್ ಮಾಡಬಹುದು.

ಇದು ಅಪಾಯಕಾರಿಯೇ ?
ನಮಗೆ ಗೊತ್ತಿಲ್ಲ. ಆದರೆ ಅಪ್ಲಿಕೇಶನ್ ಪ್ರಕಾರ ಇದು ಅಪಾಯಕಾರಿ ಅಲ್ಲ ಮತ್ತು ನಿಮ್ಮ ಯಾವುದೇ ಡಾಟಾ ವಿವರಣೆಯನ್ನು ಟ್ರ್ಯಾಕ್‌ ಮಾಡುವುದಿಲ್ಲ.

Comments

comments

Click to comment

Leave a Reply

To Top