Achivers

ಧರ್ಮಸ್ಥಳಕ್ಕೆ ದೇಶದಲ್ಲಿಯೇ ಅತೀ ಸ್ವಚ್ಛ ಧಾರ್ಮಿಕ ಕ್ಷೇತ್ರ ಪ್ರಶಸ್ತಿ

ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಧಾರ್ಮಿಕ ತಾಣ. ಮಂಜುನಾಥಸ್ವಾಮಿ ದೇವಾಲಯವಿರುವ ಈ ಊರು ಬಹಳ ಪ್ರಸಿದ್ಧ. ಶ್ರವಣ ಬೆಳಗೊಳದಂತೆ ಬಾಹುಬಲಿಯ ಪ್ರತಿಮೆ ಕೂಡ ಇರುವುದು. ಸುಮಾರು ಏಳು ನೂರು ವರುಷಗಳ ಇತಿಹಾಸ ಇರುವ ಇದು ನೇತ್ರಾವತಿ ನದಿಯ ದಡದಲ್ಲಿದೆ.

media_gallery-2015-08-31-13-dsc_0574_e62cd846cb485d4ebfbe3dd472d150e6

ಇಂತಹ ಹಿನ್ನೆಲೆ ಹೊಂದಿರುವ ಧರ್ಮಸ್ಥಳಕ್ಕೆ ಭಾರತದ ರಾಜಧಾನಿಯಲ್ಲಿ ಅಕ್ಟೋಬರ್ 2 ರಂದು ನೆಡೆದ ಅದ್ದೂರಿ ಸಮಾರಂಭದಲ್ಲಿ ದೇಶದಲ್ಲಿಯೇ ಅತಿ ಸ್ವಚ್ಛ ಧಾರ್ಮಿಕ ಸ್ಥಳ ಎಂದು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇಂಡಿಯ ಟುಡೇ ಇಂಗ್ಲಿಷ್ ಪತ್ರಿಕೆ ವತಿ ಇಂದ ಈ ಪ್ರಶಸ್ತಿ ನೀಡಲಾಗಿದ್ದು, ಪ್ರಶಸ್ತಿಯನ್ನು ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆಯವರ ಪರವಾಗಿ ಅವರ ಕಿರಿಯ ಸಹೋದರರಾದ ಡಿ ಹರ್ಷೇಧ್ರ ಕುಮಾರ್ ಅವರು ಸ್ವೀಕರಿಸಿದರು.

14580608_10154201772838025_2005216688_n

ಮೊದಲಿನಿಂದಲೂ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆಯವರು ಸ್ವಚ್ಛತೆಗೆ ಆದ್ಯತೆ ನೀಡುತ್ತಾ ಬಂದಿರುವುದು ಮತ್ತೊಬ್ಬರಿಗೆ ಆದರ್ಶವೆನ್ನಿಸಿದೆ, ನಿತ್ಯ ಸಾವಿರಾರು ಜನರು ಸೇರುವ ಸ್ಥಳವಾದ ಧರ್ಮಕ್ಷೇತ್ರದಲ್ಲಿ ಎಲ್ಲಿ ನೋಡಿದರು ಸಹ ಒಂದು ಪ್ಲಾಸ್ಟಿಕ್ ಚೂರು ಸಹ ಕಾಣ ಸಿಗುವುದಿಲ್ಲ. ಮೊದಲಿನಿಂದಲೂ ದಾನ ಧರ್ಮಗಳಿಗೆ ಹೆಸರಾಗಿರುವ ಮಂಜುನಾಥಸ್ವಾಮಿ ದೇವಾಲಯಕ್ಕೆ ಮತ್ತೊಂದು ಗರಿ ಎಂಬಂತೆ ಈ ಪ್ರಶಸ್ತಿ ಸಂದಿರುವುದು ಸಂತೋಷಕರ ವಿಚಾರವಾಗಿದೆ.

INDIA TODAY ಈ ಸಮೀಕ್ಷೆ ನೆಡೆಸಿದ್ದು ಹಲವು ಧಾರ್ಮಿಕ ಸ್ಥಳಗಳ ಸ್ವಚ್ಛತೆಯ ಆದಾರದ ಮೇಲೆ ಪ್ರಶಸ್ತಿ ನೀಡಲಾಗಿದೆ. ಸಮಾರಂಭದಲ್ಲಿ ಕನ್ನಡತಿ ಐಶ್ವರ್ಯ ರೈ ಮತ್ತು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಸಹ ಭಾಗವಹಿಸಿದ್ದರು. ಧರ್ಮಸ್ಥಳಕ್ಕೆ ರಾಷ್ಟ್ರೀಯ ಸಫೇಗಿರಿ ಪ್ರಶಸ್ತಿ ಸಹ ಲಭಿಸಿದ್ದು ಈಗಾಗಲೇ ಸ್ವಚ್ಛತೆ ಇಂದ ಪ್ರಶಸ್ತಿ ಗಳಿಸಿರುವ ಕ್ಷೇತ್ರಕ್ಕೆ ಮತ್ತೊಂದು ಪ್ರಶಸ್ತಿ ಭಕ್ತರಲ್ಲಿ ಸಂತಸ ಮೂಡಿಸಿದೆ.

Comments

comments

Amazon Big Indian Festival
Click to comment

Leave a Reply

Your email address will not be published. Required fields are marked *

Amazon Big Indian Festival
To Top