Gadgets

Jioಗಿಗಾ ಫೈಬರ್ ಪ್ಲಾನ್ ಕೊಡುತ್ತೆ 600 GB ಡಾಟಾ…

ಕಳೆದ ತಿಂಗಳು ಬಿಡುಗಡೆಯಾದ ರಿಲಯನ್ಸ್ Jio ಬಗ್ಗೆ ಭಾರತದಾದ್ಯಂತ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವಾಗಲೇ ರಿಲಯನ್ಸ್ ಇನ್ನೊಂದು ಸಾಹಸಕ್ಕೆ ಕೈ ಹಾಕಿದೆ. ರಿಲಯನ್ಸ್ ತನ್ನ broadband ವ್ಯವಸ್ಥೆಯನ್ನು ವಿಸ್ತರಿಸಲು ಮುಂದಾಗಿದ್ದು, ಇದೀಗ ಗಿಗಾಬಿಟ್ ಫೈಬರ್ ಎಂಬ broadband ಸೇವೆಯನ್ನು ದೇಶದ 100 ಪ್ರಮುಖ ನಗರಗಳಲ್ಲಿ ನೀಡಲು ಮುಂದಾಗಿದೆ. ಪರೀಕ್ಷಾರ್ಥವಾಗಿ ಮುಂಬೈನಲ್ಲಿ ಮತ್ತು ಪುಣೆಯಲ್ಲಿ ಈ ಸೇವೆಯನ್ನು ಬಿಡುಗಡೆಗೊಳಿಸಿದೆ.

THENEWSISM ಮೂಲಗಳ ಪ್ರಕಾರ ಸಿಲ್ವರ್, ಗೋಲ್ಡ್, ಮತ್ತು ಪ್ಲಾಟಿನಂ ಎಂಬ ಮೂರು ರೀತಿಯ ಪ್ಲಾನ್ ಗಳನ್ನೂ ಹೊರತರಲು ಯೋಜನೆ ರೂಪಿಸಿದ್ದು, 15 mbps ವೇಗದಲ್ಲಿ 600 GB ಯನ್ನು ಕೇವಲ 500 ರೂಗಳಿಗೆ ನೀಡುವ ಮಹತ್ತರವಾದ ನಿರ್ದಾರವನ್ನು ಕೈಗೊಳ್ಳಲಾಗಿದೆ. ಅನಿಯಮಿತ ಡಾಟಾ ಬಳಕೆದಾರರಿಗೆ ಸುವರ್ಣಾವಕಾಶವೆಂಬಂತೆ ಕೇವಲ 800 ರೂಗಳಿಗೆ 10 mbps ವೇಗದಲ್ಲಿ ಅನಿಯಮಿತ ಇಂಟರ್ನೆಟ್ ಬಳಸಬಹುದಾಗಿದೆ.
ಡಾಟಾ ವೇಗವು 10 mbps ಇಂದ 400 mbps ವರೆಗೂ ಇರಲಿದ್ದು, ಗ್ರಾಹಕ ತನಗೆ ಬೇಕಾದ ವೇಗದ ಪ್ಲಾನ್ಗಳನ್ನು ಆರಿಸಿಕೊಳ್ಳಬಹುದಾಗಿದೆ. ಎಲ್ಲ Jio ಪ್ಲಾನುಗಳ ದರವು 400 ರಿಂದ 5500 ರೂಗಳ ವರೆಗೂ ಇರಲಿವೆ.

ಸದ್ಯ Jio ಗಿಗಾಫೈಬರ್ ಅನ್ನು ಸಾರ್ವಜನಿಕೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಸಾರ್ವಜನಿಕರನ್ನು ಗಿಗಾಫೈಬರ್ ನ ಚಂದಾದಾರರಾಗಲು ಆಹ್ವಾನಿಸಲಾಗಿದ್ದು ಈ ಮೂಲಕ 90 ದಿನಗಳ ವಿಶೇಷ ಆಫರ್ ನೀಡಲಾಗಿದೆ. ಗ್ರಾಹಕ Jio ಫೈಬರ್ ಬಳಸಲು 6000 ರೂಗಳ modem ಪಡೆದುಕೊಳ್ಳುವುದು ಅನಿವಾರ್ಯ. ಅಧಿಕೃತವಾಗಿದೆ ಬಿಡುಗಡೆಯಾದ ನಂತರ Jio ಮಳಿಗೆಗಳಲ್ಲಿ ಈ ಸೇವೆ ಪಡೆದುಕೊಳ್ಳಬಹುದಾಗಿದೆ.

Health Articles written here, are only a guideline. Please consult a doctor before adopting these changes.

ಈ ಅರೋಗ್ಯ ಮಾಹಿತಿಯು ನಿಮಗೆ ಒಂದು ಮಾರ್ಗದರ್ಶಿ ಮಾತ್ರ, ಇದನ್ನು ಪಾಲನೆ ಮಾಡುವ ಮುನ್ನ ವೈದ್ಯರನ್ನು ಸಂಪರ್ಕಿಸಿ..

Comments

comments

Click to comment

Leave a Reply

Your email address will not be published. Required fields are marked *

To Top