News

ಉಗ್ರರಿಂದ ವಶಪಡೆದ ಗ್ರೇನೇಡ್ ಮೇಲೆ ಪಾಕ್ ಮುದ್ರೆ: ಭಾರತೀಯ ಸೇನೆ ಬಹಿರಂಗ

ಇತ್ತೀಚೆಗೆ ಸೇನಾನೆಲೆಗಳ ಮೇಲೆ ದಾಳಿ ನಡೆಸಲು ವಿಫಲ ಯತ್ನ ನಡೆಸಿದ ಉಗ್ರರಿಂದ ವಶಪಡಿಸಿಕೊಂಡ ಔಷಧ ಮತ್ತು ಗ್ರೇನೇಡ್ ಮೇಲೆ ಪಾಕಿಸ್ತಾನದ ಮುದ್ರೆ ಇದೆ ಎಂದು ಭಾರತೀಯ ಸೇನೆ ಬಹಿರಂಗಪಡಿಸಿದೆ.

pakistani-grenade-650_650x400_41475927218

ಜಮ್ಮುವಿನ ನುಗುಮ್ ಬಳಿ ಕಳೆದ ಗುರುವಾರ ನಾಲ್ವರು ಉಗ್ರರು ದಾಳಿ ನಡೆಸಲು ಯತ್ನಿಸಿದರು. ಪ್ರತಿದಾಳಿ ನಡೆಸಿದ ಸೇನೆ ಉಗ್ರರನ್ನು ಹತ್ಯೆಗೈದು ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಂಡಿತ್ತು.

ಉಗ್ರರ ದಾಳಿ ಹಿಂದೆ ಪಾಕ್ ಕೈವಾಡದ ಸಾಕ್ಷ್ಯ ಬಿಡುಗಡೆ ಮಾಡಿರುವ ಸೇನೆ ಪಾಕಿಸ್ತಾನದ ಆರ್ಡಿನೆನ್ಸಿ ಮಾರ್ಕೆಟಿಂಗ್ ಮುದ್ರೆ ಇರುವುದನ್ನು ತಿಳಿಸಿದ್ದು, ಈ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಇದೇ ವೇಳೆ ಔಷಧ ಹಾಗೂ ಆಹಾರ ಪೊಟ್ಟಣಗಳ ಮೇಲೂ ಪಾಕ್ ಮಾರುಕಟ್ಟೆಯ ಮುದ್ರೆ ಇರುವುದನ್ನು ತಿಳಿಸಿದೆ.

ಪಾಕ್ ಭಯೋತ್ಪಾದಕ ರಾಷ್ಟ್ರ ಘೋಷಣೆ ಇಲ್ಲ: ಅಮೆರಿಕದ ದ್ವಿಮುಖ ನೀತಿ ಬಹಿರಂಗ

ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಘೋಷಣೆಗೆ ಬೆಂಬಲ ನೀಡುವುದಿಲ್ಲ ಎಂದು ಘೋಷಿಸಿರುವ ಅಮೆರಿಕ, ಆದರೆ ಭಾರತದಲ್ಲಿ ಸುರಕ್ಷತೆ ಬಗ್ಗೆ ತಮ್ಮ ಕಾಳಜಿ ಮುಂದುವರಿಯಲಿದೆ ಎಂದು ತಿಳಿಸಿದೆ. ಎರಡೂ ದೇಶಗಳ ಮನಸ್ತಾಪಕ್ಕೆ ಕಾರಣವಾಗಿರುವ ಜಮ್ಮು- ಕಾಶ್ಮೀರ ವಿಷಯದ ಕುರಿತು ಭಾರತ- ಪಾಕಿಸ್ತಾನ ಅರ್ಥಗರ್ಭಿತ ಚರ್ಚೆ ನಡೆಸಬೇಕು ಎಂದು ಸಲಹೆ ನೀಡಿದೆ.

Comments

comments

Amazon Big Indian Festival
Click to comment

Leave a Reply

Your email address will not be published. Required fields are marked *

Amazon Big Indian Festival
To Top