Exclusive

ಕಾವೇರಿಯ ಬಗ್ಗೆ ಒಂದು ಅದ್ಭುತ ಹಾಡು – ಸಾಮಾನ್ಯ ಕನ್ನಡಿಗನಿಂದ

ಕಾವೇರಿ ಕನ್ನಡಿಗರ ಸ್ವತ್ತು  ಎಂಬ ಶೀರ್ಷಿಕೆಯಡಿ ಹಾಡನ್ನು ಬರೆದು ಒಂದು ರಾಗ ಸಂಯೋಜನೆ ಮಾಡಿ ಒಂದು ವೀಡಿಯೊ ಕೂಡ ಮಾಡಿದ್ದಾರೆ ಸಾಮಾನ್ಯ ಕನ್ನಡಿಗ ತಂಡ.ಈ ಹಾಡನ್ನು ಶಿವಮೊಗ್ಗ ಜಗನ್ನಾತ್ ಅನ್ನುವವರು ರಚಿಸಿದ್ದಾರೆ.

ಕಾವೇರಿ ವಿಚಾರವಾಗಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ವಿರುದ್ದ ಸಾಮಾನ್ಯ ಕನ್ನಡಿಗನ ಆಕ್ರೋಶವನ್ನು ಈ ಹಾಡು ಬಿಂಬಿಸುತ್ತದೆ. ನ್ಯಾಯಾಲಯದಲ್ಲೂ ಕರ್ನಾಟಕಕ್ಕೇ ನ್ಯಾಯ ಸಿಗದಿರುವುದು ಕರ್ನಾಟಕದ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಕರ್ನಾಟಕಕ್ಕೆ ಭೀಕರ ಬರ ಪರಿಸ್ಥಿತಿ ಬಂದು ಕುಡಿಯುವ ನೀರಿಗೂ ಕಷ್ಟ ಆಗಿರುವ ಪರಿಸ್ಥಿತಿಯಿಂದ ಬೇಸತ್ತು ಈ ಹಾಡನ್ನು ರಚಿಸಿದ್ದೇನೆ ಅನ್ನುತ್ತಾರೆ ಹಾಡಿನ ರೂವಾರಿ ಶಿವಮೊಗ್ಗ ಜಗನ್ನಾಥ್.

ಇದಕ್ಕೆ ರಾಗ ಸಂಯೋಜನೆ ಮಾಡಿದ್ದಾರೆ  ಹಾಗು ಧ್ವನಿಯಾಗಿದ್ದಾರೆ ಕೃಷ್ಣ ಎಂಬ ಉದಯೋನ್ಮುಖ ಗಾಯಕ. ಅಭಿಷೇಕ್ ನಾಯಕ್ ಎಂಬುವವರು ಹಾಡಿಗೆ VFX ಮತ್ತು editing ಮಾಡಿದ್ದಾರೆ. ಸಾಮಾನ್ಯ ಕನ್ನಡಿಗ ತಂಡ ಇವರಿಗೆ ಪ್ರೋತ್ಸಾಹಿಸಿ ಹಾಡು ಹೊರಗೆ ತರುವಂತೆ ಮಾಡಿದ್ದಾರೆ ಅನ್ನುತ್ತಾರೆ ಜಗನ್ನಾಥ್, ಈ ಹಾಡಿಗೆ ಸಾಮನ್ಯ ಕನ್ನಡಿಗ ತಂಡದ ನಾಯಕ ಶರತ್ ಬಾಬುರವರ ಕೊಡುಗೆ ಕೂಡ ದೊಡ್ಡದ್ದು ಎಂದು ಶಿವಮೊಗ್ಗ ಜಗನ್ನಾಥ್ ಸೇರಿಸುತ್ತಾರೆ,  ಹಾಗೆಯೇ ಮಾವಳ್ಳಿ ಕನ್ನಡ ಸಂಘದವರಾದ ಕೋ.ನ.ನಾಗರಾಜ್ ಅವರ ನಿರಂತರ ಬೆಂಬಲ ಮತ್ತು ಸ್ಪೂರ್ತಿಯಿಂದ ಈ ಹಾಡನ್ನು ರಚಿಸಲಾಯಿತು.

ಸಾಮಾನ್ಯ ಕನ್ನಡಿಗ ತಂಡದ ಅಧ್ಯಕ್ಷ ಸಂದೀಪ್ರವರು “ಹೊಸ ಪ್ರತಿಭೆಗಳಿಗೆ ನಾವು ಎಂದೂ ಪ್ರೋತ್ಸಾಹಿಸುತ್ತೇವೆ. ಕನ್ನಡಿಗರು ತುಂಬಾ ಪ್ರತಿಭೆ ಉಳ್ಳವರು, ಜಗನ್ನಾಥ್ ಅಂತಹ ಸಾಕಷ್ಟು ಪ್ರತಿಭೆಗಳು ಬೆಳಕಿಗೆ ಬರದೆ ಹಿಂದೆಯೇ ಉಳಿದಿದ್ದಾರೆ ಅಂಥವರಿಗೆ ನಾವು ಸದಾ ಪ್ರೋತ್ಸಾಹಿಸುತ್ತೇವೆ..!!” ಎಂದು ಹೇಳಿದಾರೆ.

ಇಲ್ಲಿದೆ ಆ ವೀಡಿಯೊ!!!

Comments

comments

Amazon Big Indian Festival
Click to comment

Leave a Reply

Your email address will not be published. Required fields are marked *

Amazon Big Indian Festival
To Top