News

ಕನ್ನಡಕ್ಕೆ ಒಲ್ಲೆ ಎಂದ ಫ್ಲಿಪ್ ಕಾರ್ಟ್ ಗೆ ನೋಟಿಸ್

ಫ್ಲಿಪ್ ಕಾರ್ಟ್ ಭಾರತದ ಒಂದು ಪ್ರಮುಖ ಇ ಕಾಮರ್ಸ್ ಕಂಪೆನಿ. ಅದರ ಮುಖ್ಯ ಕಚೇರಿ ಇರೋದು ಬೆಂಗಳೂರಿನಲ್ಲಿ. ಇ ಕಾಮರ್ಸ್ ಕಂಪೆನಿ ಬೆಂಗಳೂರಲ್ಲಿ ಕನ್ನಡವನ್ನು ನಿರ್ಲಕ್ಷಿಸುವುದನು ಕಂಡು ಫ್ಲಿಪ್ ಕಾರ್ಟ್ ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೋಟಿಸ್ ಜಾರಿ ಮಾಡಿದೆ. ಕನ್ನಡ ಭಾಷೆ ಜಾರಿ ವಿಚಾರವಾಗಿ ಕಂಪೆನಿ ನಿರ್ಲಕ್ಷ್ಯ ಮಾಡಿದೆ. ಇನ್ನು ಹದಿನೈದು ದಿನದೊಳಗೆ ಕರ್ನಾಟಕ ರಾಜ್ಯದ ಎಲ್ಲ ನಿಯಮಗಳನ್ನು ಅನುಸರಿಸಲೇ ಬೇಕು ಎಂದು ಪ್ರಾಧಿಕಾರ ಖಡಕ್ ಸೂಚನೆಯನ್ನು ನೀಡಿದೆ.

ನಮ್ಮ ಸಾಮಾನ್ಯ ಕನ್ನಡಿಗ ತಂಡ ಈ ನಿಟ್ಟಿನಲ್ಲಿ ಹಲವಾರು ಕೆಲಸ ಮಾಡುತ್ತಿದ್ದು , ಈ ಪ್ರಕರಣ ಬೆಳಕಿಗೆ ತಂದದ್ದೇ ಈ ತಂಡ. ಸಾಮಾನ್ಯ ಕನ್ನಡಿಗ ತಂಡ , ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಗಮನ ಸೆಳೆದು , ಸಂಪೂರ್ಣ ದಾಖಲೆ ಸಮೇತಾ ಒದಗಿಸಿತು. ಈ ನಿಟ್ಟಿನಲ್ಲಿ ಪೂರ್ವಿ ರಾಜ್ ಅರಸ್ ಮತ್ತು ಸಾಮಾನ್ಯ ಕನ್ನಡಿಗ ಅಧ್ಯಕ್ಷರಾದ ಸಂದೀಪ್ ಪಾರ್ಶ್ವನಾಥ್  ಅವರ ಕೆಲಸ ಪ್ರಶಂಸಿಸುವಂತದು

ಫ್ಲಿಪ್ ಕಾರ್ಟ್ ಬೆಂಗಳೂರು ಕಚೇರಿಯಲ್ಲಿ ಒಟ್ಟು ಎಷ್ಟು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಆ ಪೈಕಿ ಕನ್ನಡ ಮಾತನಾಡುವವರು ಎಷ್ಟು ಮಂದಿ, ಗ್ರಾಹಕ ಸೇವಾ ವಿಭಾಗವೂ ಸೇರಿದಂತೆ ಕಂಪನಿಯ ಇತರ ವಿಭಾಗಗಳಲ್ಲಿ ಕನ್ನಡ ಅನುಷ್ಠಾನ ಆಗಿದೆಯೇ.. ಹೀಗೆ ಇತರ ವಿವರಗಳನ್ನು ಸಲ್ಲಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸೂಚನೆ ನೀಡಿದೆ.

ಫ್ಲಿಪ್ ಕಾರ್ಟ್ ಲಕ್ಷಾಂತರ ಮಂದಿಯನ್ನು ನೇಮಿಸಿಕೊಂಡಿರಬಹುದು. ಆದರೆ ಅದರ ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕಾಗಿ ಏನೂ ಮಾಡುತ್ತಿಲ್ಲ. ಗ್ರಾಹಕ ಸೇವಾ ವಿಭಾಗಕ್ಕೆ ಕನ್ನಡ ಮಾತನಾಡುವವರು ಕರೆ ಮಾಡಿದರೆ, ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತನಾಡುವಂತೆ ಸೂಚಿಸುತ್ತಾರೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. ಸರೋಜಿನಿ ಮಹರ್ಷಿ ವರದಿ ಪ್ರಕಾರ ಉದ್ಯೋಗದಲ್ಲಿ ಕನ್ನಡಿಗರಿಗೆ ಆಧ್ಯತೆ ಕೊಡಬೇಕು ಅಂತಾನೂ ಇನೊಂದು ನೋಟೀಸ್ ಕಳ್ಸಿದಿವಿ
— ಡಾ ಮುರಳಿಧರ್ , ಕನ್ನಡ ಅಭಿವೃದ್ಧಿ ಪ್ರಾಧಿಕಾರ

14678074_10154227261753025_1120080700_o14672676_10154227262038025_1569777150_o

ಫ್ಲಿಪ್ ಕಾರ್ಟ್ ತನ್ನ ಕರ್ನಾಟಕ ಗ್ರಾಹಕರಿಗೆ ಕನ್ನಡ ಒಲ್ಲೆ ಎಂಬ ದೂರು ಬಂದ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಬೆಂಗಳೂರು ಜಿಲ್ಲಾಧಿಕಾರಿ ಹಾಗೂ ಕೈಗಾರಿಕಾ ಇಲಾಖೆಗೆ ಕನ್ನಡ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸುವುದಕ್ಕೆ ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಸಾಮಾನ್ಯ ಕನ್ನಡಿಗ ತಂಡ ನಿರಂತರ ಹೋರಾಟ ಮಾಡುತ್ತಿದೆ

‘ಫ್ಲಿಪ್ ಕಾರ್ಟ್ ವ್ಯವಹಾರ ಮಾಡುತ್ತಿರುವುದು ಕರ್ನಾಟಕದಲ್ಲಿ. ಕನ್ನಡ ಅನುಷ್ಠಾನಗೊಳಿಸುವುದು ಅದರ ಜವಾಬ್ದಾರಿ. ದೂರು ಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಿದ್ದೇವೆ’ ಎಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು

Comments

comments

Amazon Big Indian Festival
Click to comment

Leave a Reply

Your email address will not be published. Required fields are marked *

Amazon Big Indian Festival
To Top