Achivers

ಎಲ್ಲರಿಗು ಕನ್ನಡ ಕಲಿಸುವ ರಘು ದೀಕ್ಷಿತ್ ಎಂಬ ಸಂಗೀತ ಮಾಂತ್ರಿಕ

ಹೊಸ ತಲೆಮಾರಿನ ಸಂಗೀತ ಸಂಯೋಜಕ ಗಾಯಕರಲ್ಲಿ ರಘು ದೀಕ್ಷಿತ್ ಅವರದು ಒಂದು ವಿಶಿಷ್ಟ ಸ್ಥಾನ. ಇತರೆ ಯಾವುದೇ ಸಂಗೀತಗಾರರ ಪಂಗಡಕ್ಕೆ ಅವರನ್ನು ಸೇರಿಸಲಾಗುವುದಿಲ್ಲ. ಸ್ವಲ್ಪ ಮಟ್ಟಿಗೆ ಇಂಡಿಪಾಪ್ ಅಂದುಕೊಂಡರೂ ಗಮನಕೊಟ್ಟು ಆಲಿಸಿದರೆ ಅವರದು ತಮ್ಮದೇ ಪ್ರತ್ಯೇಕ ವಿಭಾಗ ಅನ್ನಿಸುವುದು. ತಮ್ಮದೇ ಆದ ಒಂದು ಸಂಸ್ಥೆ “ದಿ ರಘು ದೀಕ್ಷಿತ್ ಪ್ರಾಜೆಕ್ಟ್” ಎಂಬ ಹೆಸರಿನಲ್ಲಿ ಸ್ಥಾಪಿಸಿ ತಮ್ಮ ಸಂಗೀತವನ್ನು ಪ್ರಪಂಚಾದ್ಯಂತ ಹಂಚಿದ್ದಾರೆ. ಹಲವು ದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.

download-3

ಒಂದು MNC ಕಂಪನಿ ಇವೆಂಟ್ ನಲ್ಲಿ ಕನ್ನಡ ಹಾಡು …. ರಘು ಅಣ್ಣ __/\__

ಹುಟ್ಟಿ ಬೆಳೆದದ್ದು ಮೈಸೂರಲ್ಲಿ, ಡ್ಯಾನ್ಸ್ ಕ್ಲಾಸಿಗೆ ಹೋಗುತಿದ್ದ ರಘು (ಭರತನಾಟ್ಯ ವಿದ್ವಾನ್) ಹೆಸರು ಮಾಡಿದ್ದು ಸಂಗೀತದಲ್ಲಿ.ಇವರ ಸ್ನಾತಕೋತ್ತರ ಪದವಿ ಮೈಸೂರಿನ ಮಾನಸಗಂಗೋತ್ರಿಯಲ್ಲಿ ಜೈವರಸಾಯನಿಕಶಾಸ್ತ್ರದಲ್ಲಿ. ಕೆಲವು ಕಾಲ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಕೆಲಸ. ಕೊನೆಗೊಮ್ಮೆ ಅದೆಲ್ಲವನ್ನು ಬಿಟ್ಟು ಸಂಗೀತವೇ ನನ್ನ ಕಾರ್ಯಕ್ಷೇತ್ರ ಎಂಬುದನ್ನು ಕಂಡುಕೊಂಡು ಕೆಲಸ ತ್ಯಜಿಸಿ ಪೂರ್ಣಪ್ರಮಾಣದಲ್ಲಿ ಸಂಗೀತದಲ್ಲಿ ತೊಡಗಿಸಿಕೊಂಡು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ. ತುಂಬ ಭರವಸೆಯ ಹೊಸ ಸಂಗೀತಗಾರ ಎಂಬ ಜಾಗತಿಕ ಮಟ್ಟದ ಪ್ರಶಸ್ತಿಯನ್ನು ಸಾಂಗ್‌ಲೈನ್ಸ್‌ನಿಂದ ಪಡೆದಿದ್ದಾರೆ.

ಮೈಸೂರಿನಿಂದ ಕ್ವೀನ್ ಎಲಿಜಬೆತ್ ಆಸ್ಥಾನಕ್ಕೆ ರಘು

ರಘು ದೀಕ್ಷಿತ್ ತಮ್ಮ ಸಂಗೀತದ ಮೂಲಕ ಹಾಗೂ ಪತ್ನಿ ಮಯೂರಿ ಉಪಾಧ್ಯಾಯ ಅವರ ಸಮಕಾಲೀನ ನೃತ್ಯದ ಮೂಲಕ ರಾಣಿ ಎಲಿಜಬೆತ್ ರನ್ನು ರಂಜಿಸಿದರು. ‘Mysore Se Aayi..’ ಎನ್ನುತ್ತಾ ರಘು ಹಾಡಿ ಕುಣಿದರು.

ಕನ್ನಡ ಪರ ಮಿಡಿಯುವ ರಘು ಮನಸ್ಸು

“If you do not know Kannada at all, this is the moment to start learning it”
ಲೋಕದ ಕಾಳಜಿ ಮಾಡತೀನಾಂತಿ
ನಿಂಗ್ಯಾರ್ ಬ್ಯಾಡಂತಾರ ಮಾಡಪ್ಪ ಚಿಂತಿ
The Raghu Dixit Project

ವಿದೇಶಿಯರೊಬ್ಬರು ಇಂಗ್ಲಿಶಿನಲ್ಲಿ ಯಾಕೆ ಬರೆಯುತ್ತೀಯಾ, ನಿನ್ನ ಮಾತೃಭಾಷೆಯಲ್ಲೇ ಬರೆ ಎಂದು ಹೇಳಿದುದರಿಮದ ಅವರು ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿದರು. ರಘು ದೀಕ್ಷಿತ್ ಅವರೂ ಪ್ರಾರಂಭದಲ್ಲಿ ಇಂಗ್ಲಿಶ್ ಹಾಡುಗಳನ್ನು ನುಡಿಸುತ್ತಿದ್ದರು. ವಿದೇಶೀಯರೊಬ್ಬರು ನೀನು ನಿನ್ನ ಭಾಷೆಯಲ್ಲೇ ಹಾಡು ಎಂದು ಹೇಳಿದುದರಿಂದ ಕನ್ನಡದಲ್ಲಿ ಹಾಡಲು ಪ್ರಾರಂಭಿಸಿದರು. ಕನ್ನಡ ಭಾಷೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡು ಹೋದ ಖ್ಯಾತಿ ರಘು ದೀಕ್ಷಿತ್ ಅವರದು. ಯಾವ ದೇಶದಲ್ಲೇ ಹೋಗಿ ಹಾಡಲಿ ಅವರು ಕನ್ನಡ ಹಾಡನ್ನು ಹಾಡಿಸುವುದನ್ನು ಮರೆಯುವುದಿಲ್ಲ.

Comments

comments

Amazon Big Indian Festival
Click to comment

Leave a Reply

Your email address will not be published. Required fields are marked *

Amazon Big Indian Festival
To Top