Business

ಜಿಯೋಗೆ ಸೆಡ್ಡು ಹೊಡೆದ ಏರ್ಟೆಲ್…

ಅಬ್ಬಾ, ಇಂಟರ್ನೆಟ್ ಬಳೆಕೆದಾರರಿಗೆ ಸುಗ್ಗಿಯೋ ಸುಗ್ಗಿ, ಏರ್‌ಟೆಲ್ ನೂತನ ಯೋಜನೆಯೊಂದನ್ನು ಘೋಷಿಸಿದ್ದು, ಅದರ ಪ್ರಕಾರ 90 ದಿನಗಳವರೆಗೂ 4g unlimited ಇಂಟರ್ನೆಟ್ ಬಳಸಬಹುದಾಗಿದೆ. ಉಚಿತ ಕರೆ ಮತ್ತು ಡಾಟಾ ನೀಡಿ ಗ್ರಾಹಕರನ್ನು ಸೆಳೆಯುತ್ತಿದ್ದ ರಿಲಯನ್ಸ್ ಜಿಯೋಗೆ ಸೆಡ್ಡು ಹೊಡೆದಿರುವ ಏರ್‌ಟೆಲ್ ಈಗ ಈ ಯೋಜನೆ ಘೋಷಿಸಿದೆ. ತಕ್ಷಣಕ್ಕೆ ಈ ಸೌಲಭ್ಯ ದೆಹಲಿ ಮಂದಿಗೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಇದು ಎಲ್ಲಾ ವೃತ್ತಗಳಲ್ಲೂ ಲಭ್ಯವಾಗಲಿದೆ.

ಹಾಲಿ ೪ಜಿ ಗ್ರಾಹಕರು, ಹೊಸ ೪ಜಿ ಗ್ರಾಹಕರು ₹1494 ಪಾವತಿಸಿ ಈ ಸೌಲಭ್ಯ ಪಡೆಯಬಹುದಾಗಿದೆ. ಏರ್‌ಟೆಲ್ ಘೋಷಿಸಿರುವ ನೂತನ ಯೋಜನೆ ಪ್ರಕಾರಮುಂದಿನ ಮೂರು ತಿಂಗಳು ಅದೆಷ್ಟೇ ಡಾಟಾ ಬಳಸಿದರೂ ಅದು ಉಚಿತ. ಈ ಯೋಜನೆ ಮೂಲಕ ಏರ್‌ಟೆಲ್‌ನ ೨ಜಿ ಮತ್ತು ೩ಜಿ ಗ್ರಾಹಕರನ್ನು ೪ಜಿ ಸೇವೆಗೆ ಪರಿವರ್ತಿಸುವ ಪ್ರಯತ್ನವೂ ಇದೆ. ೪ಜಿ ಬಳಕೆದಾದರ ಡಾಟಾ ಬೇಗ ಮುಗಿಯುತ್ತದೆ. ನಮ್ಮ ಹೋಸ ಯೋಜನೆಯಿಂದ ಗ್ರಾಹಕರು ದಿನವಿಡೀ ಆನ್‌ಲೈನ್‌ನಲ್ಲಿರಬಹುದು ಮತ್ತೆ ೪ಜಿ ಸೇವೆ ಡಾಟಾ ಆಧಾರಿತವಾಗಿದ್ದು, ಡಾಟಾ ಬಹುಬೇಗ ಮುಗಿಯುವುದರಿಂದ ಗ್ರಾಹಕರು ಹೆಚ್ಚೆಚ್ಚು ರಿಚಾರ್ಜ್ ಮಾಡಿಸುವುದರಿಂದ ದೀರ್ಘಕಾಲದಲ್ಲಿ ಕಂಪನಿಗೆ ಹೆಚ್ಚಿನ ಲಾಭ ದಕ್ಕಲಿದೆ ಎಂದು ಏರ್‌ಟೆಲ್ ನಿರ್ದೇಶಕ ಅಜಯ್ ಪೂರಿ ಹೇಳಿದ್ದಾರೆ.

“ನಾವು ಮಾರುಕಟ್ಟೆಯನ್ನು ಗಮನಿಸುತ್ತಿದ್ದೇವೆ. ಸ್ಪರ್ಧೆಗೆ ಸಿದ್ದರಾಗಿದ್ದೇವೆ. ಹೊಸ ವರ್ಷದಿಂದ ಲೈಫ್‌ಟೈಮ್ ಉಚಿತ ಕರೆ ಸೇವೆ ಒದಗಿಸುತ್ತೇವೆ” ಎಂದು ಬಿಎಸ್‌ಎನ್‌ಎಲ್ ಸಿಎಂಡಿ ಅನುಪಮ್ ಶ್ರೀವಾಸ್ತವ ಹೇಳಿದ್ದಾರೆ. ಉಚಿತ ಸಿಮ್, ಉಚಿತ ಕರೆ ಸೌಲಭ್ಯದೊಂದಿಗೆ ೪ಜಿ ಸೇವೆ ಆರಂಭಿಸಿರುವ ಜಿಯೋ ದೊಡ್ಡಪ್ರಮಾಣದಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ. ಏರ್‌ಟೆಲ್ ಗ್ರಾಹಕರೂ ಜಿಯೋನತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಏರ್‌ಟೆಲ್ ೯೦ ದಿನಗಳ ಯೋಜನೆ ಘೋಷಿಸಿದೆ. ಬರುವ ದಿನಗಳಲ್ಲಿ ಮತ್ತಷ್ಟು ಯೋಜನೆಗಳನ್ನು ಘೋಷಿಸಲಿದೆ.

ಈ ನಡುವೆ, ಜಿಯೋಗೆ ಸ್ಪರ್ಧೆ ನೀಡಲು ಮುಂದಾಗಿರುವ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಹ ಉಚಿತ ಕರೆಗಳ ಸೌಲಭ್ಯ ನೀಡಲು ಮುಂದಾಗಿದೆ. ಬಿಎಸ್‌ಎನ್‌ಎಲ್ ೪ಜಿ ಅಷ್ಟೇ ಅಲ್ಲ, ೨ಜಿ ಮತ್ತು ೩ಜಿ ಗ್ರಾಹಕರಿಗೂ ಉಚಿತ ಕರೆ ಸೌಲಭ್ಯ ಒದಗಿಸಲಿದೆ. ಜತೆಗೆ ಡಾಟಾ ದರವು ಜಿಯೋ ನಿಗಿದಿ ಮಾಡಿರುವ ದರಕ್ಕಿಂತ ಕಡಮೆ ಇರಲಿದೆ.

ಜಿಯೋ ನೆಟ್ವರ್ಕ್ ಸಾಕಷ್ಟು ನಿಧಾನಗತಿಯ ಇಂಟರ್ನೆಟ್ ಸೌಲಭ್ಯ ಒದಗಿಸುತ್ತಿದೆ ಎಂದು ಈಗಾಗಲೇ TRAI ಸ್ಪಷ್ಟಪಡಿಸಿದೆ, ಇದೆಲ್ಲದರ ನಡುವೆ ಏರ್ಟೆಲ್ ನ ಈ ಆಫರ್ ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಬಹುದೇನೋ ಕಾದು ನೋಡೋಣ..!!like our Facebook page @ fb.com/thenewsism

Comments

comments

Click to comment

Leave a Reply

To Top