God

ಅಚ್ಚರಿ ಮೂಡಿಸುವ ಜಗತ್ಪ್ರಸಿದ್ದ ವಿಸ್ಮಯಕಾರಿ ದೇವಾಲಯಗಳು!!!

ಭಾರತೀಯರಿಗೆ ಧಾರ್ಮಿಕ ಭಾವನೆಗಳೊಂದಿಗೆ ನಂಟು ಹೆಚ್ಚು. ಹಾಗಾಗಿ ದೇಗುಲಗಳೆಂದರೂ ಭಕ್ತಿ ಭಾವನೆ. ಬಹುದೇವತಾ ಆರಾಧನೆ ಇರುವ ಭಾರತದಲ್ಲಿ ಎಲ್ಲ ದೇವರುಗಳಿಗೂ ದೇವಾಲಯಗಳಿವೆ. ಕೆಲವು ಪ್ರಾಚೀನ ದೇವಾಲಯಗಳು ವಾಸ್ತುಶಿಲ್ಪದ ದೃಷ್ಟಿಯಿಂದಲೂ ಪ್ರಸಿದ್ಧಿಯಾಗಿವೆ. ಇಂತಹ ಅಪರೂಪದ ದೇಗುಲಗಳು ಭಾರತದಲ್ಲಷ್ಟೇ ಅಲ್ಲ, ವಿಶ್ವದೆಲ್ಲೆಡೆ ಇದೆ.

1. ಅಂಕರ್ ವಾಟ್ ದೇವಾಲಯ
ವಿಶ್ವದ ಅತಿ ದೊಡ್ಡ ದೇವಾಲಯ ಕಾಂಬೋಡಿಯಾದ ಆಂಕರ್ ವಾಟ್‍ನಲ್ಲಿದೆ. ವಿಸ್ತಾರವಾದ ಭೂಮಿಯಲ್ಲಿದ್ದು ಹೊರವಲಯ ನೀರಿನಿಂದ ಆವರಿಸಲ್ಪಟ್ಟಿದೆ. 12ನೇ ಶತಮಾನದ ರಾಜ ಸೂರ್ಯವರ್ಮನ್ ಇದನ್ನು ನಿರ್ಮಾತೃ. ಖೇಮರ್ ಶೈಲಿಯ ವಾಸ್ತುಶಿಲ್ಪವಿದ್ದು, ಹೊರಗೋಡೆ 3.6 ಕಿಮೀ ಉದ್ದವಿದೆ. ಕಾಂಬೋಡಿಯಾದ ಸಂಕೇತವಾದ ಈ ದೇವಾಲಯ ಅಲ್ಲಿನ ರಾಷ್ಟ್ರಧ್ವಜದಲ್ಲಿದ್ದು, ವಿಶ್ವದ ಅದ್ಭುತಗಳಲ್ಲೊಂದಾಗಿದೆ.

2. ಕಾರ್ನಾಕ್ ದೇವಾಲಯ
ಈಜಿಪ್ಟಿನ ಈ ದೇಗುಲ ಹಲವಾರು ದೇವಾಲಯ, ನೀರಿನ ಹೊಂಡಗಳು ಹಾಗೂ ಪ್ರತಿಮೆಗಳನ್ನು ಹೊಂದಿದೆ. ಟಾಲೆಮಿ ಕಾಲದಲ್ಲಿ ನಿರ್ಮಾಣವಾಗಿದ್ದು, ಅತ್ಯಂತ ಪ್ರಾಚೀನವಾದ ದೇಗುಲ ಇದು. ಹೈಪೋಶೈಲಿಯ (ಕಂಬಸಾಲು) 5,000 ಚದುರ ಮೀಟರ್, 16 ಸಾಲುಗಳಲ್ಲಿ 134 ಬೃಹತ್ ಕಾಲಮ್‍ಗಳು ಇಲ್ಲಿವೆ. 122 ಕಾಲಮ್‍ಗಳ 10 ಮೀಟರ್, ಉಳಿದವು 21 ಮೀಟರ್ ಎತ್ತರ, ಮೂರು ಮೀಟರ್ ವ್ಯಾಸ ಹೊಂದಿದೆ.

3. ಬೋರೊಬುದುರ್
ಇಂಡೋನೇಷಿಯಾದ ಸೆಂಟ್ರಲ್ ಜಾವಾದ ಮ್ಯಾಗೆಲಾಂಗ್‍ನಲ್ಲಿದೆ. 9ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, ಯುನೆಸ್ಕೋದ ಪಾರಂಪರಿಕ ಕಟ್ಟಡಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ. ಇದರ ಅಂದಾಜು ವಿಸ್ತೀರ್ಣ 2,500 ಚದುರ ಮೀಟರ್ ಇದ್ದು ನಿರ್ಮಾಣಕ್ಕೆ ತೆಗೆದುಕೊಂಡ ಅವಧಿ 75 ವರ್ಷಗಳು!

borobudur best sunset

4. ಅಕ್ಷರಧಾಮ ದೇವಾಲಯ
ಬೃಹತ್ ಹಿಂದೂ ದೇವಾಲಯಗಳಲ್ಲಿ ಒಂದಾಗಿದ್ದು ದೆಹಲಿಯಲ್ಲಿದೆ. ಅಧಿಕೃತವಾಗಿ ಆರಂಭವಾಗಿದ್ದು 2005ರಲ್ಲಿ. ತೋಟ ಹಾಗೂ ಸ್ಮಾರಕಗಳಿಂದ ಆವರಿಸಲ್ಪಟ್ಟಿರುವ ಈ ದೇಗುಲ ಯಮುನಾ ನದಿಯ ದಡದಲ್ಲಿದೆ. 43 ಮೀಟರ್ ಎತ್ತರ, 96 ಮೀಟರ್ ಅಗಲ, 110 ಮೀಟರ್ ಉದ್ದವಿದೆ. ದೇಗುಲದಲ್ಲಿ 20,000 ಮೂರ್ತಿಗಳು, 234 ಸುಂದರ ಕೆತ್ತನೆಯ ಕಂಬಗಳು, ಮೂರ್ತಿಗಳು ಹಾಗೂ ಸಾಧುಗಳ ಮೂರ್ತಿಗಳಿವೆ.

5. ಶ್ರೀರಂಗನಾಥಸ್ವಾಮಿ ದೇವಾಲಯ
ತಮಿಳುನಾಡಿನ ತಿರುಚನಾಪಳ್ಳಿ ಶ್ರೀರಂಗಂನಲ್ಲಿರುವ ಈ ದೇವಾಲಯದಲ್ಲಿ ವಿಷ್ಣು ಪ್ರಧಾನ ದೇವತೆ. ಒಂದೇ ಕೇಂದ್ರವುಳ್ಳ 6 ಮೈಲಿ ಉದ್ದದ ಗೋಡೆಯಿದ್ದು, 21 ಗೋಪುರಗಳಿವೆ. 39 ಮಂಟಪಗಳು, 1000 ಕಂಬಗಳ ಹಜಾರವಿದೆ.

Amazon Big Indian Festival
Amazon Big Indian Festival

Copyright © 2016 TheNewsism

To Top