Achivers

ವಿಶ್ವವಿಖ್ಯಾತ ಭಾರತದ ಧೀಮಂತ ವಿಜ್ಞಾನಿ ಸತ್ಯೇಂದ್ರನಾಥ  ಬೋಸ್!!!

ಸತ್ಯೇಂದ್ರನಾಥ  ಬೋಸ್

ಜನನ: ಜನವರಿ, 1, 1894,  ಮರಣ: ಫೆಬ್ರವರಿ, 4, 1974

ಭಾರತದ ಬಂಗಾಳಿ ಭೌತ ವಿಜ್ಞಾನಿ ಸತ್ಯೇಂದ್ರನಾಥ್ ಬೋಸ್ ಜನನ ಕಲ್ಕತ್ತಾದಲ್ಲಿ. ತಂದೆ ಸುರೇಂದ್ರನಾಥ್ ರೈಲ್ವೆ ಇಲಾಖೆಯ ಉದ್ಯೋಗಿ. ತಾಯಿ ಆಮೋದಿನಿ ದೇವಿ. ಚಿಕ್ಕಂದಿನಿಂದಲೂ ಗಣಿತಶಾಸ್ತ್ರದಲ್ಲಿ ಅಪಾರವಾದ ಆಸಕ್ತಿ ಇತ್ತು. ಕಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ 1915ರಲ್ಲಿ ಎಂಎಸ್ಸಿ ಪದವಿ ಪಡೆದರು. 1916ರಿಂದ 1921ರವರೆಗೂ ಕಲ್ಕತ್ತ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಕೆಲಸ ಮಾಡಿದರು. ಮುಂದೆ ಢಾಕಾ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದರು.

1945ರಿಂದ ಕಲ್ಕತ್ತಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿ 11 ವರ್ಷ ಕೆಲಸ ಮಾಡಿದರು. ಬೋಸರು ಪ್ಲ್ಯಾಂಕನ ನಿಯಮ ಮತ್ತು ಲೈಟ್ ಕ್ವಾಂಟಮ್ ತತ್ವ ಕುರಿತು ಬರೆದ ಲೇಖನವನ್ನು ಪ್ರಸಿದ್ಧ ವಿಜ್ಞಾನಿ ಐನ್‍ಸ್ಟೀನರು ಮೆಚ್ಚಿಕೊಂಡು ಅದನ್ನು ಜರ್ಮನ್ ಭಾಷೆಗ ಅನುವಾದಿಸಿದರು. ಬೋಸರು ಪ್ಯಾರಿಸ್‍ಗೆ ಹೋದಾಗ ಮೇಡಮ್ ಕ್ಯೂರಿಯವರ ಪ್ರಯೋಗಶಾಲೆಯಲ್ಲಿ ಪ್ರಯೋಗಗಳನ್ನು ನಡೆಸಿದರು. ಬರ್ಲಿನ್‍ನಲ್ಲಿ ಐನ್‍ಸ್ಟೀನ್‍ರೊಡನೆ ಕೆಲಸ ಮಾಡಿದರು.ಆಗ ಸಂಶೋಧನೆಗಳಿಗೆ ಭಾರತದಲ್ಲಿ ಹೆಚ್ಚು ಪ್ರೋತ್ಸಾಹವಿಲ್ಲದಿದ್ದರೂ ಐನ್‍ಸ್ಟೀನರ ಸಾಪೇಕ್ಷ ಸಿದ್ಧಾಂತದ ಸಹಾಯದಿಂದ ಅನಿಲಗಳ ಒತ್ತಡ, ಘನ ಅಳತೆ, ಉಷ್ಣತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಂಶೋಧನೆ ನಡೆಸಿದರು.

Image result for satyendranath bose

ರೇಖಾಗಣಿತದ ಕೆಲವು ಹೊಸ ಪ್ರಮೇಯಗಳನ್ನು ರೂಪಿಸಿದರು.ಸಂಖ್ಯಾಶಾಸ್ತ್ರದಲ್ಲಿ ಪ್ರತಿಭಾವಂತರಾಗಿದ್ದ ಅವರ ವಿವರಣೆಗಳಿಂದ ಕ್ವಾಂಟಮ್ ಸಂಖ್ಯಾಶಾಸ್ತ್ರ ಅರ್ಥ ಮಾಡಿಕೊಳ್ಳಲು ಸುಲಭವಾಯಿತು. ಬೋಸರ ಆಸಕ್ತಿ ಭೌತಶಾಸ್ತ್ರಕ್ಕೆ ಮಾತ್ರ ಸೀಮಿತವಾಗಿರದೆ ಭೂಗರ್ಭವಿಜ್ಞಾನ, ಪ್ರಾಣಿಶಾಸ್ತ್ರ,ರಸಾಯನಶಾಸ್ತ್ರಗಳಿಗೂ ವಿಸ್ತರಿಸಿತ್ತು.ಸಮಾಜ ಸೇವೆಯಲ್ಲೂ ಒಲವಿತ್ತು.

ಸಂಗೀತ, ಸಾಹಿತ್ಯದಲ್ಲೂ ಆಸಕ್ತಿ.ತಂತುವಾದ್ಯವನ್ನು ನುಡಿಸುತ್ತಿದ್ದರು.  ಬಂಗಾಳಿ, ಇಂಗ್ಲಿಷ್, ಫ್ರೆಂಚ್, ಜರ್ಮನ್ ಭಾಷೆಗಳನ್ನು ಕಲಿತಿದ್ದರು. 1950ರಲ್ಲಿ ರಾಜ್ಯಸಭಾ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. 1964ರಲ್ಲಿ ದೆಹಲಿ ವಿಶ್ವವಿದ್ಯಾನಿಲಯ ಡಿಎಸ್ಸಿ ಪ್ರಶಸ್ತಿ ನೀಡಿತು. 1974 ಜನವರಿಯಲ್ಲಿ ಕ್ವಾಂಟಮ್ ಸಂಖ್ಯಾಶಾಸ್ತ್ರದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಬೋಸರನ್ನು ಸನ್ಮಾನಿಸಲಾಯಿತು. ದೇವಕಣದ ಸಂಶೋಧನೆ ಪೀಟರ್ ಹಿಗ್ಸ್ ರೊಂದಿಗೆ  ಮಾಡಿದರು.ಅದಕ್ಕೆ ನೊಬೆಲ್ ದೊರೆಯಿತು. ಆ ಶೋಧನೆಯ ದೇವಕಣಕ್ಕೆ `ಹಿಗ್ಸ್-ಬೋಸಾನ್’ ಎಂದೇ ಖ್ಯಾತªವಾಗಿವೆ.

Comments

comments

Amazon Big Indian Festival
Click to comment

Leave a Reply

Your email address will not be published. Required fields are marked *

Amazon Big Indian Festival
To Top