Achivers

ಹಿಂದುಸ್ಥಾನಿ ಸಂಗೀತದ ಮೇರು ಸಂಗೀತಗಾರ್ತಿ ಗಂಗೂಬಾಯಿ ಹಾನಗಲ್!!!

ಜನನ: 1913, ಮರಣ: 2009

ಭಾರತೀಯ ಸಂಗೀತ ಕ್ಷೇತ್ರದಲ್ಲಿ ಮರೆಯಲಾರದ ಹೆಸರು ಗಂಗೂಬಾಯಿ ಹಾಣಗಲ್. ಹಿಂದೂಸ್ಥಾನಿ ಸಂಗೀತದ ಸುಧೆ ಹರಿಸಿ ನಾದಪ್ರೇಮಿಗಳನ್ನು ತಣಿಸಿದ ಮಹಾ ಸಂಗೀತದಾತೆ ಗಂಗೂ ಬಾಯಿ. ಧಾರ ವಾಡದ ಸಾಂಸ್ಕøತಿಕ ಪರಿಸರದಲ್ಲಿ ಜನಿನಿದ ಈ ಕೃಷಿಕ ಕುಟುಂಬದ ಹೆಣ್ಣು ಮಗಳು ಸಂಗೀತಾಭ್ಯಾಸ ಶುರುಮಾಡಿದ್ದು 13ರ ಹರೆಯದಲ್ಲೇ! ಆನಂತರದ ಬದುಕಿನ ಪ್ರತಿಕ್ಷಣ ಸಂಗೀತದೊಟ್ಟಿಗೆ ಬೆರೆತು ಹೋದ ಗಂಗೂಬಾಯಿ ಹಾನಗಲ್ ಹಿಂದೂಸ್ಥಾನಿ ಸಂಗೀತದಲ್ಲಿ ಮೂಡಿಸಿದ ಛಾಪು ಅದ್ವಿತೀಯ. ಕಿರಾಣ ಘರಾಣ ಹಾಡುವ ಮೂಲಕ ಕರ್ನಾಟಕದ ಕೀರ್ತಿ ಪತಾಕೆಯನ್ನು ದೇಶ – ವಿದೇಶಗಳಲ್ಲಿ ಹಾರಿಸಿದ ಖ್ಯಾತಿ ಡಾ||ಗಂಗೂಬಾಯಿ ಹಾನಗಲ್ ಅವರದು.

ಇವರು 1913ರಲ್ಲಿ ಧಾರವಾಡದಲ್ಲಿ ಜನಿಸಿದರು. ತಾಯಿ ಅಂಬಾಬಾಯಿಯೇ ಇವರಿಗೆ ಸಂಗೀತದ ಪ್ರಥಮ ಗುರು. ತಾಯಿ ಅಂಬಾಬಾಯಿಯವರಿಂದ ಬಾಲ್ಯದಲ್ಲಿ ಕರ್ನಾಟಕ ಸಂಗೀತ ಕಲಿತರೂ, ಕ್ರಮೇಣವಾಗಿ ಹಿಂದೂಸ್ತಾನಿ ಸಂಗೀತದತ್ತ ಒಲವು ಮೂಡಿತು. ಪರಿಣಾಮವಾಗಿ, ಕೃಷ್ಣಾಚಾರ್ಯ ಹುರುಗೂರರಿಂದ ಹಿಂದುಸ್ತಾನಿ ಶಿಕ್ಷಣ ಆರಂಭಿಸಿದರು. ನಂತರ ಸವಾಯಿ ಗಂಧರ್ವರಲ್ಲಿ ಶಿಷ್ಯವೃತ್ತಿ. ಸತತ ಸಂಗೀತಾಭ್ಯಾಸದಿಂದ 1924ರಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡುವ ಮೂಲಕ ಗಾಯಕಿಯಾಗಿ ಹೊರಹೊಮ್ಮಿದರಲ್ಲದೆ, ಗಾಂಧೀಜಿಯವರ ಮೆಚ್ಚುಗೆಗೆ ಪಾತ್ರರಾದರು. 1938ರಲ್ಲಿ ಕಲ್ಕತ್ತೆಯಲ್ಲಿ ನಡೆದ ಸಂಗೀತ ಸಮ್ಮೇಳನದಲ್ಲಿ ಹಾಡಿ ಹಿಂದೂಸ್ತಾನಿ ಸಂಗೀತದ ಘಟಾನುಘಟಿಗಳಿಂದ ಭೇಷ್ ಎನಿಸಿಕೊಂಡ ಗಂಗೂಬಾಯಿ ಅಲ್ಲಿಂದ ಮುಂದೆ ನಡೆದದ್ದು ಸಂಗೀತ ಸಾಧನೆಯ ಶಿಖರದತ್ತ. ಗಂಗೂಬಾಯಿಯವರ ಕಂಚಿನ ಕಂಠ ಕ್ಕೆ ತಲೆದೂಗದವರೇ ಇಲ್ಲ. ಅವರ ಆಕರ್ಷಕ ಆಲಾಪ ವಿಸ್ತಾರಗಳು, ರೇಷ್ಮೆ ಎಳೆಯಂತಹ ಲಯಗಾರಿಕೆ, ಬಿಗುವಾದ ಗಮಕಗಳು, ಹೃದ್ಯನಾದ. ಕೇಳುಗರ ಪಾಲಿಗೆ ಅಪೂರ್ವ ಅನುಭವ.

ಮಗಳು ಖ್ಯಾತ ಸಂಗೀತ ವಿದೂಷಿ ಕೃಷ್ಣಾ ಹಾನಗಲ್ ಹಾಗೂ ಸಹೋದರ ಖ್ಯಾತ ತಬಲಾವಾದಕ ಶೇಷಗಿರಿ ಹಾನಗಲ್ ಅವರ ಜೊತೆಗೂಡಿ ಗಂಗೂಬಾಯಿಯವರು ನೀಡಿದ ಕಾರ್ಯಕ್ರಮಗಳು ಅಸಂಖ್ಯ. ಈ ಜೋಡಿಗಳ ಕಾರ್ಯಕ್ರಮ, ದೇಶ – ವಿದೇಶದ ಸಂಗೀತ ಪ್ರೇಮಿಗಳ ಪಾಲಿಗೆ ರಸದೌತಣ. ಆಕಾಶವಾಣಿ, ದೂರದರ್ಶನಗಳಲ್ಲೂ ಇವರ ಕಾರ್ಯಕ್ರಮಗಳು ಪ್ರಸಾರವಾಗಿ ಜನಮನ ಸೂರೆಗೊಂಡಿವೆ.
ಸಂಗೀತ ಕ್ಷೇತ್ರದಲ್ಲಿ ಇವರು ಸಲ್ಲಿಸಿದ ಸೇವೆ ಹಾಗೂ ಸಾಧಿಸಿದ ಹಿರಿಮೆಗೆ ಅನೇಕ ಪ್ರಶಸ್ತಿ – ಪುರಸ್ಕಾರ ಸನ್ಮಾನಗಳು ಅವರನ್ನರಿಸಿಕೊಂಡು ಬಂದಿವೆ. ಅವುಗಳಲ್ಲಿ “ಸ್ವರ ಶಿರೋಮಣಿ”, ‘ಬೇಗಂ ಅಖ್ತರ್ ರೂಹೆ ಘಜಲ್’ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಡಾಕ್ಟರೇಟ್, ಮಧ್ಯಪ್ರದೇಶದ ‘ತಾನ್ಸೇನ್’ ಪ್ರಶಸ್ತಿ ಭಾರತ ಸರ್ಕಾರ ನೀಡಿದ ‘ಪದ್ಮಭೂಷಣ’ ಪ್ರಶಸ್ತಿ ಹಾಗೂ ಕರ್ನಾಟಕ ಸರ್ಕಾರದ ‘ಕನಕ ಪುರಂದರ’ ಪ್ರಶಸ್ತಿ ಪ್ರಮುಖವಾದುವು.

ಎಂಟೂವರೆ ದಶಕಗಳ ಸಂಗೀತ ಸೇವೆ ಗೈದ ಗಂಗೂಬಾಯಿ ಕರ್ನಾಟಕದ ಕೀರ್ತಿ ಬೆಳಗಿದ ಸ್ವರಸಾಮ್ರಾಜ್ಞೆ. ಪ್ರತಿಷ್ಠಿತ ಪದ್ಮಭೂಷಣ, ಪದ್ಮವಿಭೂಷಣ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅಸಂಖ್ಯ ಪ್ರಶಸ್ತಿಗಳಿಂದ ಪುರ ಸ್ಕøತರಾದ ಗಂಗೂಬಾಯಿ ಅವರದ್ದು 96 ವರ್ಷಗಳ ಸಾರ್ಥಕ ಜೀವನ. ಸಂಗೀತ ಕ್ಷೇತ್ರದಲ್ಲಿ ಚಿರಸ್ಮರಣೀಯ ಸಾಧನೆ, ಅಳಿಸಲಾಗದ ಹೆಜ್ಜೆಗುರುತು.

Comments

comments

Amazon Big Indian Festival
Click to comment

Leave a Reply

Your email address will not be published. Required fields are marked *

Amazon Big Indian Festival
To Top