Travel

ಈ ಐದು ಅಧ್ಬುತ ದೇವಸ್ಥಾನಗಳು ನಿಮ್ಮನ್ನು ಖಂಡಿತವಾಗಿಯೂ ವಿಸ್ಮಯಗೊಳಿಸುತ್ತದೆ!!!

1. ಬುದ್ಧ ದೇವಾಲಯ
ಶ್ರೀಲಂಕಾದ ಅನುರಾಧಪುರದಲ್ಲಿರುವ ಈ ಬುದ್ಧ ದೇವಾಲಯ ಕ್ರಿ.ಶ. 3ನೇ ಶತಮಾನದಲ್ಲಿ ನಿರ್ಮಾಣವಾಗಿದೆ. ನಿರ್ಮಾಣಕ್ಕೆ ತಗುಲಿದ ಸಮಯ 15 ವರ್ಷಗಳು. ಪ್ರಾಚೀನ ಯುಗದ ಗಿರಿಜಾ ಗೋಪುರದ ನಂತರ ಮೂರನೇ ಅತಿ ಎತ್ತರದ ನಿರ್ಮಾಣವೆಂದು ಹೆಸರುವಾಸಿಯಾಗಿದೆ. ಇದರ ಅಡಿಪಾಯ 8.5 ಆಳವಿದ್ದು, 166 ಕೆಜಿ ತೂಕವಿರುವ 93 ಮಿಲಿಯನ್ ಸುಟ್ಟ ಇಟ್ಟಿಗೆಗಳನ್ನು ಬಳಸಲಾಗಿದೆ. ದೇವಾಲಯದ ಎತ್ತರ 122 ಮೀಟರ್, ಗುಮ್ಮಟದ ವ್ಯಾಸ 95 ಮೀಟರ್.

Image result for srilanka buddha

2. ಟೇಕಲ್ ದೇವಾಲಯ
ಮಾಯನ್ ನಾಗರೀಕತೆಯ ಹೆಗ್ಗುರುತು ಈ ದೇವಾಲಯ. ಲ್ಯಾಟಿನ್ ಅಮೆರಿಕ ಹಾಗೂ ಕೆರೆಬಿಯನ್‍ನ ಗೌಟೆಮಾಲಾದಲ್ಲಿದೆ. ಮಾಯನ್ ನಾಗರಿಕತೆಯ ಇಲ್ಲಿ ಇಂತಹ ಹಲವು ದೇವಾಲಯಗಳಿದ್ದು, ನಾಲ್ಕನೇ ದೇವಾಲಯವೇ ಅತ್ಯಂತ ದೊಡ್ಡದು. ಕ್ರಿ.ಶ. 741ರಲ್ಲಿ ನಿರ್ಮಾಣವಾಗಿದೆ. ಯುನೆಸ್ಕೋದ ವಿಶ್ವ ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿದೆ.

Image result for tikal temple

3. ಬೃಹದೇಶ್ವರ ದೇವಾಲಯ
ತಮಿಳುನಾಡಿನ ತಂಜಾವೂ-ರಿನಲ್ಲಿರುವ ಈ ದೇಗುಲ ಭಾರತದ ಪ್ರಾಚೀನ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ಸಂಪೂರ್ಣ ಗ್ರಾನೈಟ್‍ನಿಂದ ನಿರ್ಮಿತವಾಗಿದ್ದು ವಿಶ್ವದ ಮೊದಲ ಗ್ರಾನೈಟ್ ದೇವಾಲಯವೆಂದು ಹೆಸರುವಾಸಿ. ಮುಖ್ಯ ಗೋಪುರದ ಎತ್ತರ 66 ಮೀಟರ್, ಏಕಶಿಲೆಯಿಂದ ಕಡೆದ ನಂದಿ ವಿಗ್ರಹ 16 ಅಡಿ ಉದ್ದ ಹಾಗೂ 13 ಅಡಿ ಎತ್ತರವಿದೆ. ಕ್ರಿ.ಶ. 1010ರಲ್ಲಿ ರಾಜ ರಾಜ ಚೋಳನಿಂದ ನಿರ್ಮಿಸಲ್ಪಟ್ಟಿದೆ.

Image result for brihadeshwara

4. ಬ್ಯಾಚೂಸ್ ದೇವಾಲಯ
ಬ್ಯಾಚೂಸ್(ರೋಮನ್ ದೇವತೆ)ಗೆ ಮೀಸಲಾಗಿರುವ ಈ ದೇಗುಲ ಲೆಬೆನಾನ್‍ನ ಬಾಲ್‍ಬೆಕ್‍ನಲ್ಲಿದೆ. ಕ್ರಿ.ಶ 150ರಲ್ಲಿ ನಿರ್ಮಿಸಲ್ಪಟ್ಟಿದ್ದು, 66 ಮೀಟರ್ ಉದ್ದ, 35 ಮೀಟರ್ ಅಗಲ, 31 ಮೀಟರ್ ಎತ್ತರವಿದೆ. 42 ಕಂಬಗಳಿದ್ದು, ಅತ್ಯಂತ ಪ್ರಾಚೀನವೆನಿಸಿದೆ.

Image result for bacchus temple

5. ಮೀನಾಕ್ಷಿ ಅಮ್ಮ ದೇವಾಲಯ
ತಮಿಳುನಾಡಿನ ವೈಗೈ ನದಿ ತಟದ ಮಧುರೈನಲ್ಲಿದೆ ಮೀನಾಕ್ಷಿ ದೇವಾಲಯ. ದೊಡ್ಡ ಗೋಪುರ 51.9 ಮೀಟರ್ ಎತ್ತರವಿದ್ದು ಅಸಂಖ್ಯ ಪ್ರವಾಸಿಗರನ್ನು ಸೆಳೆಯುತ್ತಿದೆ. 1623 ರಿಂದ 1655ರ ಅವಧಿಯಲ್ಲಿ ನಿರ್ಮಿಸಲ್ಪಟ್ಟಿರುವ ಈ ದೇವಾಲಯ ವಿಶ್ವದ 30 ವಿಸ್ಮಯಗಳ ಪಟ್ಟಿಯಲ್ಲಿದೆ.

templike our Facebook page @ fb.com/thenewsism

Comments

comments

Click to comment

Leave a Reply

To Top