Awareness

ಮರೆಯಲಾಗದ ಮಾಂತ್ರಿಕ ಶಂಕರ ನಾಗರಕಟ್ಟೆ!!!

ಇಂದಿಗೆ ನಮ್ಮ ಶಂಕ್ರಣ್ಣನಿಗೆ ೬೨ ವರ್ಷದ ಸಂಭ್ರಮ, ಶಂಕ್ರಣ್ಣ ನಮ್ಮನ್ನ ಅಗಲಿ ಸುಮಾರು ವರ್ಷವಾದರೂ ಆತನ ನೆನಪು ಪ್ರತಿಯೊಬ್ಬ ಕನ್ನಡ ಚಿತ್ರ ರಸಿಕನ ಎದೆಯೊಳಗೆ ಅಚ್ಚಾಗಿ ಉಳಿದಿದೆ. ಶಂಕ್ರಣ್ಣನ ಪರಿಚಯ ಯಾರಿಗಿಲ್ಲ ಹೇಳಿ, ಅವರ ಒಂದೊಂದು ಚಿತ್ರವೂ ಇತಿಹಾಸದ ಪುಟವನ್ನು ಸೇರಿದೆ. ಶಂಕ್ರಣ್ಣನ ಅಭಿನಯದ ಛಾಪು ಒಂದು ಕಡೆಯಾದರೆ, ಆತನ ನಿರ್ದೇಶನದ ಶೈಲಿ ಹಲವು ಆಯಾಮಗಳನ್ನು ಹೊಂದಿದೆ. ಶಂಕ್ರಣ್ಣನ ಪ್ರತಿಯೊಂದು ನಿರ್ದೇಶನದ ಚಿತ್ರವೂ ಅದಕ್ಕೆ ಸಾಕ್ಷಿಯಾಗಿದೆ.

ಇಲ್ಲಿದೆ ವೀಡಿಯೊ…

ಶಂಕ್ರಣ್ಣನ ಮೊದಲ ಪ್ರಯತ್ನ ‘ಮಿಂಚಿನ ಓಟ’ದಿಂದ ಶುರುವಾಗಿ ಜನ್ಮ ಜನ್ಮದ ಅನುಬಂಧ, ಗೀತ, ಆಕ್ಸಿಡೆಂಟ್, ಒಂದು ಮುತ್ತಿನ ಕಥೆ, ನೋಡಿ ಸ್ವಾಮೀ ನಾವಿರೋದು ಹೀಗೆ ಮತ್ತು ಹೊಸ ತೀರ್ಪು ಸಿನೆಮಾಗಳು ಜನಮನ್ನಣೆಗಳಿಸುವುದರ ಜೊತೆಗೆ ಹಲವಾರು ರಾಜ್ಯ-ರಾಷ್ಟ್ರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು. ಒಂದು ಮುತ್ತಿನ ಕಥೆ ಚಿತ್ರದಲ್ಲಿ ಡಾ||ರಾಜಕುಮಾರ್ ಅವರ ಅತ್ಯಮೋಘ ಅಭಿನಯ ಒಂದುಕಡೆಯಾದರೆ, ನೀರಿನೊಳಗೆ ಮೊದಲ ಬಾರಿ ಚಿತ್ರಿಸಿದ ಮೊದಲ ಭಾರತದ ಚಿತ್ರವೆಂಬ ಹೆಗ್ಗಳಿಕೆ ಇನ್ನೊಂದೆಡೆ. ಕನ್ನಡದ ಚಿತ್ರರಂಗದ ಎರಡು ಮುತ್ತುಗಳಾದ ಡಾ||ರಾಜಕುಮಾರ್ ಮತ್ತು ಶಂಕರನಾಗ್ ಅವರ ಜೋಡಿ ಅವರ್ಣನೀಯ!! ಇವರಿಬ್ಬರ ಇನ್ನೊಂದು ಚಿತ್ರ ‘ಅಪೂರ್ವ ಸಂಗಮ’ ಇನ್ನೊಂದು ನಿಜವಾಗಿಯೂ ಅಪೂರ್ವವೇ ಸರಿ.

ಆಕ್ಸಿಡೆಂಟ್ ಚಿತ್ರಕ್ಕಿಂತ ಅದ್ಭುತವಾಗಿರುವ ಇನ್ನೊಂದು thriller ಚಿತ್ರ ಕನ್ನಡದಲ್ಲಿ ಬಂದೇ ಇಲ್ಲ ಅನ್ನಿಸುತ್ತದೆ. ಗೀತ ಚಿತ್ರದಲ್ಲಿರುವ ಹಾಡುಗಳು ಇನ್ನೂ ನೂರು ವರ್ಷವಾದರೂ ಹಚ್ಚ ಹಸಿರಾಗಿರುತ್ತದೆ. ಇವರ ಮಾಲ್ಗುಡಿ ಡೇಸ್ ಬಗ್ಗೆ ಬರೆಯುವುದಕ್ಕೆ ಒಂದು ಪುಸ್ತಕವೇ ಬೇಕಾಗುತ್ತದೆ, ಕನ್ನಡದ ದಿಗ್ಗಜರಾದ ವಿಷ್ಣುವರ್ಧನ್, ಅನಂತ್ ನಾಗ್ ರವರೂ ಈ ಒಂದು ಸೀರಿಯಲ್ ನಲ್ಲಿ ಅಭಿನಯಿಸಿದ್ದು ಮರೆಯೋಕೆ ಸಾಧ್ಯವೇ?

ಇವರ ಸಾಧನೆ ಒಂದಾ ಎರಡಾ??

ಬೆಂಗಳೂರಿಗೆ ಮೆಟ್ರೋ ಬೇಕು ಎಂದು ೯೦ರ ದಶಕದಲ್ಲೇ ರೂಪುರೇಷೆ ಹಾಕಿ ಕೊಟ್ಟಿದ್ದರು, ಈ ಮಹಾನ್ ಮೇಧಾವಿ. ಚಲನಚಿತ್ರ, ನಾಟಕ, ಚಿಂತಕ … ಇವರನ್ನು ವರ್ಣಿಸೋಕ್ಕೆ ಪದಗಳೇ ಸಾಲೊಲ್ಲ…

ಇಂದಿಗೂ ಅಭಿಮಾನಿಗಳು ಇವರ “ಆಟೋ ರಾಜ” ಚಿತ್ರವನ್ನೇ ಹೆಚ್ಚು ಹೆಚ್ಹು ಇಷ್ಟ ಪಡುತ್ತಾರೆ, ಒಬ್ಬ ಆಟೋ ಚಾಲಕ ಸಮಾಜದಲ್ಲಿ ಯಾರಿಗಿಂತಲೂ ಕಡಿಮೆಯಿಲ್ಲ ಮತ್ತು ನಿಷ್ಠೆಯಿಂದೆ ದುಡಿದರೆ ಯಾರ ಮುಂದೆಯೂ ತಲೆ ತಗ್ಗಿಸಬೇಕಿಲ್ಲ ಎಂದು ಸೊಗಸಾಗಿ ಇವರ ಜೀವನದ ಉದ್ದಕ್ಕೂ ಹೇಳಿದ್ದಾರೆ. ಹೊಸ ಪೀಳಿಗೆಯೂ ಇವರನ್ನು ಸಾಕಷ್ಟು ಪಾಲಿಸುತ್ತಿದೆ…

ಇಲ್ಲಿ ರವಿ ಸಂತೋಷ್ ಎಂಬ ಉದಯೋನ್ಮುಖ ಕಲಾವಿದ ಶಂಕ್ರಣ್ಣನ ಅಭಿಮಾನಿ ಅವರ ಧ್ವನಿ ಅನುಕರಣೆ ಮಾಡಿ ಒಂದು ಸೊಗಸಾದ ಸಂದೇಶ ನೀಡಿದ್ದಾರೆ… ನೋಡಿ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ..

ಇಂಥಹ ಕಲಾವಿದರ ಮೂಲಕ ನಮ್ಮ ಪ್ರೀತಿಯ ಶಂಕ್ರಣ್ಣ ಇಂದಿಗೂ ನಮ್ಮ ಜೊತೆಯೇ ಇದ್ದಾರೆ!!

Comments

comments

Amazon Big Indian Festival
Click to comment

Leave a Reply

Your email address will not be published. Required fields are marked *

Amazon Big Indian Festival
To Top