Awareness

ಮೋದಿಯವರ ಈ ಇಪತ್ತೆರಡು ಸಾಧನೆಗಳ ಬಗ್ಗೆ ಪ್ರತಿಯೊಬ್ಬ ಭಾರತೀಯನು ತಿಳಿದುಕೊಳಲೇ ಬೇಕು…

* ಮೋದಿ ಬಡವರ ಮನೆಯಲ್ಲಿ ಗ್ಯಾಸ್ ಒಲೆ ಉರಿಯಲೆಂದು ಎಲ್ಪಿಜಿ ಸಬ್ಸಿಡಿ ಬಿಡಿಯೆಂದರು. ಅವರ ಒಂದು ಸಣ್ಣ ಕರೆಗೆ ಒಂದು ವರ್ಷದ ಅವಧಿಯಲ್ಲಿ ಒಂದು ಕೋಟಿಗಿಂತಲೂ ಹೆಚ್ಚು ಜನ ಸಬ್ಸಿಡಿ ತ್ಯಜಿಸಿದರು….

* ಮೋದಿ ಸ್ವಚ್ಛ ಭಾರತಕ್ಕಾಗಿ ಪೊರಕೆ ಹಿಡಿಯೋಣವೆಂದರು. ಲಕ್ಷಾವಧಿ ಜನರು, ಸಾವಿರಾರು ಸಂಘಸಂಸ್ಥೆಗಳು, ನೂರಾರು ಸೆಲೆಬ್ರಿಟಿಗಳು ಪೊರಕೆ ಹಿಡಿದು ಬೀದಿಗೆ ಬಂದರು…

* ಮೋದಿ ಮೇಕ್ ಇನ್ ಇಂಡಿಯ ಎಂದರು. ಅಮೆರಿಕ ಜಪಾನ್ ಜರ್ಮನಿ ಸಿಂಗಾಪುರ ಫ್ರಾನ್ಸ್ ಮುಂತಾದ ಹಲವಾರು ದೇಶಗಳ ಕೈಗಾರಿಕೋದ್ಯಮಿಗಳು ಹಲವು ಲಕ್ಷಕೋಟಿರೂಪಾಯಿ ಭಾರತದಲ್ಲಿ ಬಂಡವಾಳ ಹೂಡಿದರು…

* ಮೋದಿ ಯೋಗ ದಿನ ಮಾಡೋಣವೆಂದರು.ಜಗತ್ತಿನ ಹಲವು ಪ್ರಮುಖ ಮುಸ್ಲಿಂ ರಾಷ್ಟ್ರಗಳೂ ಸೇರಿ ಸುಮಾರು 192 ದೇಶಗಳು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡವು…

* ಮೋದಿ ನನ್ನ ಸರಕಾರಕ್ಕೆ ಮಾರ್ಗದರ್ಶನ ಮಾಡಿ ಸಲಹೆ ಕೊಡಿಯೆಂದರು. ‘ಮೈ ಗರ್ವಂಮೆಂಟ್’ ವೆಬ್ಸೈಟ್ ನಲ್ಲಿ 2,15,000 ಜನ ಸಲಹೆ ನೀಡಲು ಮುಂದೆಬಂದರು…

* ಮೋದಿ ಬ್ಯಾಂಕ್ ಖಾತೆ ತೆರೆಯಿರಿ ಎಂದರು. 21 ವರೆ ಕೋಟಿ ಖಾತೆಗಳು ಹೊಸದಾಗಿ ತೆರೆಯಲ್ಪಟ್ಟು, ಖಾತೆದಾರರು ಅದರಲ್ಲಿ 36,724 ಕೋಟಿಹಣ ಜಮಾ ಮಾಡಿದರು…

* ಮೋದಿ ಯವಕರಿಗೆ ಬನ್ನಿ ನಿಮ್ಮದೇ ಸ್ವಂತ ಉದ್ಯಮ ಆರಂಭಿಸಿಯೆಂದರು.ಲಕ್ಷಕ್ಕಿಂತಲೂ ಹೆಚ್ಚು ಯುವಕರು ಮುದ್ರಾಯೋಜನೆಯ ಮೂಲಕ ಒಟ್ಟಾರೆಯಾಗಿ 1.22ಲಕ್ಷಕೋಟಿಯಷ್ಟು ಹಣ ಬ್ಯಾಂಕ್ ಸಾಲಪಡೆದು ಸ್ವಂತ ಉದ್ಯಮ ಆರಂಭಿಸಿದರು…

* ಮೋದಿ ಭಾರತವಾಸಿಗರಲ್ಲಿ ಅಪಘಾತ ವಿಮೆ ಮಾಡಿಸಿಯೆಂದರು. 9 ವರೆ ಕೋಟಿ ಜನರು ಪ್ರಧಾನಮಂತ್ರಿ ಸುರಕ್ಷಾ ಭೀಮ ಯೋಜನೆಯ ಮೂಲಕ ವಾರ್ಷಿಕ ಕೇವಲ 12 ರೂಪಾಯಿಗೆ ವಿಮೆ ಮಾಡಿಸಿದರು…

* ಮೋದಿ 2ಲಕ್ಷ ರೂಪಾಯಿಯ ವಿಮೆ ಕೊಡುತ್ತೇನೆ ಮಾಡಿಸಿಯೆಂದರು. ಸುಮಾರು 3ಕೋಟಿ ಜನರು ವಾರ್ಷಿಕ 330 ರೂಪಾಯಿ ಕಟ್ಟಿ ತಕ್ಷಣಕ್ಕೆ ಪಾಲಿಸಿಮಾಡಿಸಿದರು….

* ಮೋದಿ ಎನ್ ಆರ್ ಐಗಳಿಗೆ ರಜಾ ಅವಧಿಯಲ್ಲಿ ಭಾರತಕ್ಕೆ ಬಂದು ಪ್ರವಾಸ ಮಾಡಿ ದೇಶದ ಆದಾಯಕ್ಕೆ ಕೊಡುಗೆ ಕೊಡಿಯೆಂದರು. ಪರಿಣಾಮ ಭಾರತ ಜಾಗತಿಕ ಮಟ್ಟದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ 13 ಸ್ಥಾನ ಮೇಲೇರಿತು…

* ಮೋದಿ ಅಂಬೇಡ್ಕರ್ ಜಯಂತಿ ಮಾಡೋಣವೆಂದರು.ವಿಶ್ವಸಂಸ್ಥೆ ಮೋದಿಯವರ ಮಾತಿಗೆ ಬೆಲೆಕೊಟ್ಟು ಅಂಬೇಡ್ಕರರ 125ನೆ ಜನ್ಮದಿನವನ್ನು ತನ್ನ ಪ್ರಧಾನ ಕಛೇರಿಯಲ್ಲಿ ಆಚರಿಸಿತು….

* ಮೋದಿ ಫ್ರಾನ್ಸ್ ಜೊತೆ ರಫೆಲ್ ಯುದ್ಧವಿಮಾನ ಖರೀದಿಸುವಾಗ ರಿಯಾಯಿತಿ ಕೊಡಿಯೆಂದರು. ಪರಿಣಾಮ ಒಟ್ಟು 80000 ಕೋಟಿಯ 126 ಯುದ್ಧವಿಮಾನಗಳನ್ನು 59000 ಕೋಟಿಗೆ ಕೊಡುತ್ತೇವೆಂದು ಒಪ್ಪಿದರು…

* ಮೋದಿ ಯುಎಇ ಶೇಕ್ ಬಳಿ ಹಿಂದುಗಳಿಗೆ ಮಂದಿರ ನಿರ್ಮಿಸಲು ಜಾಗ ಕೊಡಿಯೆಂದರು. ಶೇಕ್ ಕಣ್ಣುಮುಚ್ಚಿಕೊಂಡು ಒಪ್ಪಿ ಜಮೀನನ್ನು ಕೊಟ್ಟೇ ಬಿಟ್ಟರು…3

* ಮೋದಿ ಡಬ್ಲ್ಯುಟಿಒ ಒಪ್ಪಂದ ಭಾರತದ ರೈತರಿಗೆ ಮಾರಕವಾಗುತ್ತದೆ ಅದರಲ್ಲಿ ತಿದ್ದುಪಡಿಯಾಗದ ಹೊರತು ಸಹಿ ಮಾಡುವುದಿಲ್ಲವೆಂದರು. ಮೋದಿಯ ಮಾತಿಗೆ ಬೆಲೆಕೊಟ್ಟು ವಿಶ್ವವ್ಯಾಪಾರ ಸಂಸ್ಥೆ ಬದಲಾವಣೆ ಮಾಡಿಕೊಂಡಿತು…

* ಮೋದಿ ಎಲ್ ಇಡಿ ಬಲ್ಬ್ ಬಳಸಿ ವಿದ್ಯುತ್ ಉಳಿಸಿಯೆಂದರು. ಈ ತನಕ 9,94,96,506 ಬಲ್ಬ್ ಗಳನ್ನು ಜನರು ಖರೀದಿಸಿ ತಮ್ಮ ಮನೆಯಲ್ಲಿ ಅಳವಡಿಸಿಕೊಂಡಿರುವರು…

* ಮೋದಿ ಆದರ್ಶ ಗ್ರಾಮ ನಿರ್ಮಿಸೋಣವೆಂದು ಸಂಸದರಿಗೆ ಕರೆಕೊಟ್ಟರು. ಲೋಕಸಭೆ ರಾಜ್ಯಸಭೆಯ 679 ಸಂಸದರು ಪಕ್ಷಭೇದ ಮರೆತು ಗ್ರಾಮಗಳನ್ನು ದತ್ತು ತೆಗೆದುಕೊಂಡರು….

* ಮೋದಿ ಬಂಡವಾಳ ಹೂಡಿಯೆಂದು ವಿದೇಶಿ ಕಂಪನಿಗಳಿಗೆ ಕರೆಯಿತ್ತರು. ಪರಿಣಾಮ ಭಾರತ ಇಂದು ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಅಗ್ರಸ್ಥಾನದಲ್ಲಿದೆ…

* ರೈತರ ಹಿತಕ್ಕಾಗಿ ಫಸಲ್ ಭೀಮಾ ಯೋಜನೆ ತಂದರು, ಇಡೀ ದೇಶದ ರೈತರು ಸಂಕಷ್ಟ ಸ್ಥಿತಿಯಲ್ಲಿದ್ದಾಗ ಅವರ ನೆರವಿಗೆ ನಿಂತದ್ದು ಮೋದಿಜಿ ಮಾತ್ರ, ಉಳಿದವರು ರಾಜಕೀಯ ಮಾಡಿ ಬೇಳೆ ಬೇಯಿಸಿಕೊಂಡರು…

* ಮೋದಿ ಕಪ್ಪುಹಣ ಇದ್ದರೆ ಬಹಿರಂಗವಾಗಿ ಒಪ್ಪಿಕೊಳ್ಳಿಯೆಂದರು. ಪರಿಣಾಮವಾಗಿ ದೇಶದ ಭಾರೀ ಕುಳಗಳಿಂದ ಈಗಾಗಲೇ ೧೮,೦೦೦ ಕೋಟಿ ತೆರಿಗೆ ಹಣ ಸರಕಾರಕ್ಕೆ ಪಾವತಿಯಾಯಿತು…

* ೬೦ ವರ್ಷಗಳಾದರು ಭಾರತದ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ತಲುಪಿಸಲು ವಿಫಲವಾಗಿದ್ದವು ಕಳೆದ ಸರ್ಕಾರಗಳು. ಆದರೆ ಕೇವಲ ೨ ವರ್ಷದಲ್ಲೇ ೬೦೦೦ ಗ್ರಾಮಗಳಿಗೆ ಮೋದಿಜಿ ವಿದ್ಯುತ್ ತಲುಪಿಸಿಯಾಗಿದೆ…

* ಸೈನಿಕರ ಹೆಸರಲ್ಲಿ ರಾಜಕೀಯ ಮಾಡಿದವರೇ ಹೆಚ್ಚು, ಆದರೆ ಪ್ರತಿ ದೀಪಾವಳಿಯನ್ನ ಕಾಶ್ಮೀರದಲ್ಲಿ ಯೋಧರ ಜೊತೆ ಆಚರಿಸಿ ಅವರಿಗೆ ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆ ತಂದದ್ದು ಮೋದಿ…

* ಮೋದಿ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಹೊಸ ಹೊಸ ಯೋಚನೆಗಳನ್ನು ಹಂಚಿಕೊಳ್ಳಿಯೆಂದರು. ಸುಮಾರು ಅರವತ್ತು ಸಾವಿರ ಹೊಸ ಆಲೋಚನೆಗಳು ಹರಿದುಬಂದವು…

ಇಂದು ಅಂತರರಾಷ್ಟ್ರೀಯ ನಾಯಕರ ಸಾಲಿನಲ್ಲಿ ಭಾರತದ ಪ್ರಧಾನಿಯಿದ್ದಾರೆ, ದೇಶದ ಯುವಶಕ್ತಿಯ ನೆಚ್ಚಿನ ನಾಯಕನನ್ನ ಜಗತ್ತೇ ಹೊಗಳುತ್ತಿದೆ. ಕ್ಲೀನ್ ಇಂಡಿಯಾ, ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಜನಧನ ಯೋಜನ, ಮುದ್ರಾ ಬ್ಯಾಂಕ್ ಯೋಜನ, ಡಿಜಿಟಲ್ ಇಂಡಿಯಾ, ಆದರ್ಶ ಗ್ರಾಮ ಯೋಜನಾ, ಒನ್ ರ್ಯಾಂಕ್, ಒನ್ ಪೆನ್ಷನ್, ಫಸಲ್ ಭೀಮಾ ಯೋಜನಾ, ಅಟಲ್ ಪೆನ್ಷನ್ ಯೋಜನಾ, ನಮಾಮಿ ಗಂಗಾ, ಉಜ್ವಲ್ ಯೋಜನಾ, ಸ್ಮಾರ್ಟ್ ಸಿಟಿಗಳ ರೂಪುರೇಷೆ, ಅಮೃತ್ ಯೋಜನಾ, ದೀನ್ ದಯಾಳ್ ಉಪಾಧ್ಯ ಯೋಜನಾ, ಪೆಹಲ್ ಯೋಜನಾ, ಸ್ಟಾರ್ಟ್ ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ, ಭೇಟಿ ಬಚಾವೋ-ಬೇಟಿ ಪಡಾವೋ ಯೋಜನೆ, ಬುಲೆಟ್ ಟ್ರೈನ್ ಗೆ ಯೋಜನೆ ಹೀಗೆ ಹತ್ತಾರು ಯೋಜನೆಗಳು ದೇಶವನ್ನು ನಂಬರ್ ಒನ್ ಸ್ಥಾನದತ್ತ ತೆಗೆದುಕೊಂಡು ಹೋಗುತ್ತಿವೆ. ಮಿಗಿಲಾಗಿ ಭಾರತೀಯರ ಆತ್ಮವಿಶ್ವಾಸ ಹೆಚ್ಚಾಗಿದೆ, ವಿಶ್ವವೇ ಭಾರತವನ್ನ ಬೆರಗುಗಣ್ಣಿನಿಂದ ನೋಡುತ್ತಿದೆ. ಭಾರತ ವಿಶ್ವಗುರುವಾಗುವತ್ತ ನಿಧಾನವಾಗಿ ಹೆಜ್ಜೆ ಹಾಕುತ್ತಿದೆ…

Amazon Big Indian Festival
Amazon Big Indian Festival

Copyright © 2016 TheNewsism

To Top