Gadgets

ವಿಂಡೋಸ್ 7 ಮತ್ತು 8 ಬಳಕೆದಾರರಿಗೆ ಇಲ್ಲಿದೆ ಕಹಿ ಸುದ್ದಿ…

ಇನ್ಮುಂದೆ ಟೆಕ್ ಮಾರುಕಟ್ಟೆಯಲ್ಲಿ ವಿಂಡೋಸ್ 7 ಹಾಗೂ 8 ಗ್ರಾಹಕರಿಗೆ ಅಲಭ್ಯವಾಗಿದೆ. ಯಾಕೆಂದರೆ, ಅಮೆರಿಕದ ಟೆಕ್ ದಿಗ್ಗಜ ಈ ಆಪರೇಟಿಂಗ್ ಸಿಸ್ಟಮ್ ಮಾರಾಟವನ್ನು ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಿದೆ. ಡೆಸ್ಕ್ ಟಾಪ್, ಲ್ಯಾಪ್ ಟಾಪ್ ಗಳಲ್ಲಿ ವಿಂಡೋಸ್ 7 ಹಾಗೂ ವಿಂಡೋಸ್ 8 ಬಳಸುತ್ತಿದ್ದವರಿಗಿಂದುವ ಕಹಿ ಸುದ್ದಿ.

ಇನ್ಮುಂದೆ ಈ ಆಪರೇಟಿಂಗ್ ಸಿಸ್ಟಮ್ಗಳು ಮಾರುಕಟ್ಟೆಯಲ್ಲಿ ಅಲಭ್ಯ. ಪರಿಣಾಮ ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಮೈಕ್ರೋಸಾಫ್ಟ್ ಸಾಧನಗಳಲ್ಲಿ ಬಳಕೆ ಮಾಡಿಕೊಳ್ಳಲೇಬೇಕಿದೆ. ಇದು ಅನಿವಾರ್ಯ ಹಾಗೂ ಕಡ್ಡಾಯವೂ ಆಗಲಿದೆ. 2012ರಲ್ಲಿ ಮಾರುಕಟ್ಟೆಗೆ ಬಂದ ವಿಂಡೋಸ್ 8/8.1 ನಾಲ್ಕು ವರ್ಷಗಳ ಕಾಲ ಮಾರಾಟವಾಯಿತು. ಈಗ ಈ ಎರಡೂ ಆವೃತ್ತಿಗಳ ಮಾರಾಟ ಸ್ಥಗಿತಗೊಂಡಿದ್ದರೂ ಅದರ ಅಪ್ಡೇಟ್ ಬೆಂಬಲ 2020 ಹಾಗೂ 2023 ರವರೆಗೆ ಮುಂದುವರಿಯಲಿದೆ. ಅಲ್ಲಿವರೆಗೆ ಈ ಯೂಸರ್ ಫ್ರೆಂಡ್’ನ ಫ್ರೆಂಡ್ ಆಗಿರಬಹುದು.

ಡೆಲ್, ತೋಶಿಬಾ, ಎಚ್.ಪಿ, ಲೆನೋವೋ ಸೇರಿದಂತೆ ಇನ್ನಿತರ ಕಂಪನಿಗಳು ಇನ್ಮುಂದೆ ಉತ್ಪಾದಿಸುವ ಸಾಧನಗಳಲ್ಲಿ ಹಳೆಯ ಆವೃತ್ತಿಯ ವಿಂಡೋಸ್ ಇರಲಾರದು. ಈ ವಿಂಡೋಸ್ 7- 2008ರಲ್ಲಿ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲಾಗಿದ್ದು, ಏಳು ವರ್ಷಗಳಕಾಲ ಸಾಕಷ್ಟು ಮಾರಾಟವಾಗಿದ್ದವು. ಬಳಕೆದಾರರ ಯೂಸರ್ ಫ್ರೆಂಡ್ ಎಂದೇ ಖ್ಯಾತಿ ಪಡೆದುಕೊಂಡಿತ್ತು. ಸುಲಭ ಹಾಗೂ ಸರಳವಾಗಿ ಯಾವುದೇ ಗೊಂದಲ ಇಲ್ಲದಂತೆ ಗ್ರಾಹಕ ಬಳಸುತ್ತಿದ್ದ.

ಅಪ್‌ಗ್ರೇಡ್‌

ಅಸಲಿ ವಿಂಡೋಸ್‌ 7 ಮತ್ತು 8 ಹೊಂದಿರುವವರು ಉಚಿತ ವಾಗಿ ಅಪ್‌ಗ್ರೇಡ್‌  ಮಾಡಿಕೊಳ್ಳಬಹುದು ಎಂದು ಕಂಪೆನಿ ತಿಳಿಸಿದೆ. ಹಳೆಯ ಒಎಸ್‌ನಲ್ಲಿರುವ ಸಮಸ್ಯೆಗಳನ್ನು ಇದರಲ್ಲಿ ಸರಿಪಡಿಸುತ್ತಿದೆ. ಜತೆಗೆ ಹೊಸತರಲ್ಲಿ ಪರಿಚಯಿಸಿರುವ ಹೊಸ ಪ್ರೋಗ್ರಾಂಗಳಲ್ಲಿಯೂ ಕೆಲವು ಸಮಸ್ಯೆಗಳಿವೆ. ಹೀಗಾಗಿ ತಕ್ಷಣವೇ ಅಪ್‌ಗ್ರೇಡ್‌ ಮಾಡಿಕೊಳ್ಳದೇ ಇರುವುದು ಒಳಿತು. ಇಲ್ಲವೇ ಅಪ್‌ಗ್ರೇಡ್‌ ಆಗುವ ಮುನ್ನ ಸೂಚನೆಗಳನ್ನು  ಓದಿ ಅರ್ಥ ಅರ್ಥ ಮಾಡಿಕೊಂಡು ಮುನ್ನಡೆಯಬೇಕು.

ಕುಗ್ಗದ ಎಕ್ಸ್‌ಪಿ ಜನಪ್ರಿಯತೆ

ನಿರಂತರವಾಗಿ ಕಂಪ್ಯೂಟರ್‌ ಬಳಸುತ್ತಿರುವವರಿಗೆ, ‘ನಿಮಗ್ಯಾವ ಆಪರೇಟಿಂಗ್ ಸಿಸ್ಟಂ ಇಷ್ಟ?’ ಎಂದು ಕೇಳಿನೋಡಿ. ಅವರಿಂದ ಸಿಗುವ ಉತ್ತರ ‘ವಿಂಡೋಸ್‌’. ಅದರಲ್ಲೂ ಮುಖ್ಯವಾಗಿ ಹೇಳುವುದೇ ‘ವಿಂಡೋಸ್‌ ಎಕ್ಸ್‌ಪಿ’. ವಿಂಡೋಸ್‌ ಎಕ್ಸ್‌ಪಿ ಮಾರುಕಟ್ಟೆ ಪ್ರವೇಶಿಸಿ ಸುಮಾರು 13 ವರ್ಷಗಳೇ ಉರುಳಿಹೋಗಿವೆ. ಅದಕ್ಕೆ ಸಾಫ್ಟ್‌ವೇರ್‌ ಅಪ್‌ಡೇಟ್‌ ಸೇರಿದಂತೆ ಯಾವುದೇ ರೀತಿಯ ಬೆಂಬಲವನ್ನೂ ಕಂಪೆನಿ ನೀಡುತ್ತಿಲ್ಲ. ಹೀಗಿದ್ದರೂ ಇಂದಿಗೂ ಬಹಳಷ್ಟು ಕಂಪ್ಯೂಟರ್‌ಗಳಲ್ಲಿ ಈ ಒಎಸ್‌ ಕಾಣಬಹುದು.

ಎಕ್ಸ್‌ಪಿ ಗಳಿಸಿಕೊಂಡಿರುವ ಜನಪ್ರಿಯತೆ ಈಗ ಅತಿ ಹೆಚ್ಚು ಬಳಕೆಯಲ್ಲಿರುವ ‘ವಿಂಡೋಸ್‌–7’ಗೂ ಸಿಕ್ಕಿಲ್ಲ ಎನ್ನಬಹುದು. ಎಕ್‌ಪಿ ಒಎಸ್‌ನ ಬಳಕೆದಾರ ಸ್ನೇಹಿ ಗುಣವೇ ಹಾಗಿದೆ. ಭಾರತದ ಮಟ್ಟಿಗೇ ಹೇಳುವುದಾದರೆ ಶೇ 25ರಷ್ಟು ಮಂದಿ ಇಂದಿಗೂ ಎಕ್ಸ್‌ಪಿ ಬಳಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಶೇ 16ರಷ್ಟು ಎಕ್ಸ್‌ಪಿ ಬಳಕೆದಾರರಿದ್ದಾರೆ. ಮುಖ್ಯವಾಗಿ ಚೀನಾ ಶೇ 41ರಷ್ಟು ಅತಿ ಹೆಚ್ಚು ಎಕ್ಸ್‌ಪಿ ಬಳಕೆದಾರರನ್ನು ಹೊಂದಿದೆ. ಅಮೆರಿಕ, ಇಂಗ್ಲೆಂಡ್‌, ಜರ್ಮನಿಯಲ್ಲೂ ಇದರ ಬಳಕೆ ಇದ್ದೇ ಇದೆ.

Comments

comments

Amazon Big Indian Festival
Click to comment

Leave a Reply

Your email address will not be published. Required fields are marked *

Amazon Big Indian Festival
To Top