Gadgets

ನಿಮ್ಮ ಮೊಬೈಲ್ ಬಿಲ್ ಜಾಸ್ತಿ ಬರ್ತಾ ಇದ್ಯಾ…? ಹಾಗಾದ್ರೆ ಈ 9 ನಿಯಮಗಳನ್ನು ನೀವು ಪಾಲಿಸಲೇ ಬೇಕು !!

 • ಅಗತ್ಯ ಬಿದ್ದಾಗ ಮಾತ್ರ ಫೋನ್ ಮಾಡಿ.. ಆದರೆ ಮಾತಿನ ನಡುವೆ,
  “ಯಾಕೋ ಸರಿಯಾಗಿ ಕೇಳಿಸ್ತಾ ಇಲ್ಲ…”
  “ಸಿಗ್ನಲ್ ಕಡಿಮೆ ಇದೆ, ಕೇಳಿಸ್ತಾ ಇಲ್ಲ..” ಅಂತ ಬಡಕೊಂಡು ಲೈನ್ ಕಟ್ ಮಾಡಿಬಿಡಿ, ಆಮೇಲೆ ಅವರೇ ಕಾಲ್ ಮಾಡ್ತಾರೆ, ನೀವು ಆರಾಮಾಗಿ ಮಾತಾಡಿ.
 • ಅ ದಯಾಮಯ ನಾದ ಭಗವಂತ ಆಫೀಸ್ ನಲ್ಲಿ ಫೋನ್ ಗಳನ್ನ ಕೊಟ್ಟಿರೋದೆ ನಾವು ನಮಗೆ ಬೇಕಾದವರಿಗೆ, ಬೇಕಾದಷ್ಟು ಹೊತ್ತು ಮಾತಾಡಲಿ ಅಂತ… ದಯಮಾಡಿ ಉಪಯೋಗಿಸಿ…
 • ಯಾರಿಗೂ ಕಾಲ್ ಮಾಡಬೇಡಿ, ಅವರೇ ಕಾಲ್ ಮಾಡಿದರೆ ಮಿಸ್ಟೇಕ್ ಆಗಿ ನಿಮ್ಮ ನಂಬರ್ ಡಿಲೀಟ್ ಆಗಿತ್ತು ಅದಕ್ಕೆ ಕಾಲ್ ಮಾಡಕಾಗಿಲ್ಲ ಎಂದು ಮಸ್ಕಾ ಹೊಡಿರಿ.
 • ನೀವು ಆಫೀಸ್ ಗೆ ಬರೋದಿಲ್ಲ ಎಂದು ನಿಮ್ ಮ್ಯಾನೇಜರ್ ಗೆ ಒಂದು ಮೇಘ ಸಂದೇಶ ಕಳಿಸಿ. ಕಾಲ್ ಮಾಡಿದರೆ ಸುಮ್ಮನೆ ಪ್ರೆಶ್ನೆಗಳಿಗೆ ಉತ್ತರಿಸಬೇಕಾದ ಪ್ರಮೇಯ ಬರಬಹುದು.
 • ರಾತ್ರಿಯ ವೇಳೆ ಯಾವಾಗಲೂ ನಿಮ್ಮ ಗರ್ಲ್ ಫ್ರೆಂಡ್ ಜೊತೆ ಕಾಲ ಕಳೆಯಿರಿ. ಇದರಿಂದಾಗಿ ಅವಳು ರಾತ್ರಿ ಇಡಿ ನಿಮಗೆ ಮಿಸ್ ಕಾಲ್ ಕೊಟ್ಟು, ನೀವು ಮತ್ತೆ ಕಾಲ್ ಮಾಡಿ, ನಿಮಗೆ ಹೆಚ್ಚು ಬಿಲ್ ಬರೋದು ಎಲ್ಲಾ ತಪ್ಪುತ್ತೆ..
 • aircel ಸಿಮ್ ಬಳಸಿ, ಹೆಚ್ಚು ಕಡಿಮೆ ಪ್ರಮುಖ ನಗರಗಳಲ್ಲಿ ಬಿಟ್ಟರೆ ಬೇರೆ ಯಲ್ಲಿಯೂ network ಸಿಗೋದಿಲ್ಲ. ಜೊತೆಗೆ network ಸಮಸ್ಯೆ ಹೆಚ್ಚು. ಆದ್ದರಿಂದ ಬಳಸುವುದು ಕಡಿಮೆಯಾಗಿ ಹೆಚ್ಚು ಬಿಲ್ ಬರೋದಿಲ್ಲ.
 • ನಾನು ಮೊಬೈಲ್ ಕಡಿಮೆ ಉಪಯೋಗಿಸುವೆ ಅಂತ ಪುಂಗಿ ಊದಿ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ತರಂಗಗಳಿಂದ ಹೆಚ್ಚು ನಮಗೆ ಅಪಾಯ ಎಂದು ಡವ್ ಮಾಡಿ. ನೀವು ಯಾರಿಗೂ ಫೋನ್ ಮಾಡದೇ ಇದ್ರೂ ಯಾರು ನಿಮ್ಮನ್ನ ತಪ್ಪು ತಿಳಿಯೋಲ್ಲ.
 • ಆದಷ್ಟು ಮಿಸ್ ಕಾಲ್ ಕೊಟ್ಟು ಅವರೇ ಕಾಲ್ ಮಾಡೋ ಹಾಗೆ ಮಾಡಿ, ಆದ್ರೆ ನಿಮ್ ಮನೆಗೆ ಬೆಂಕಿ ಬಿದ್ರೆ, ಅಥವಾ ನೀವು ಲಿಫ್ಟ್ ನಲ್ಲಿ ಸಿಕ್ಕಿ ಹಾಕಿ ಕೊಂಡರೆ, ಫೈರ್ ಇಂಜಿನ್ ಗೆ, ಪೋಲಿಸ್ ಸ್ಟೇಷನ್ ಗೆ ಮಿಸ್ ಕಾಲ್ ಕೊಡ ಬೇಡಿ ಕಾಲ್ ಮಾಡಿ.
 • ಇನ್ನು ಸಿಕ್ಕಾಪಟ್ಟೆ ಒಳ್ಳೆ ಪ್ಲಾನ್ ಅಂದ್ರೆ ನಿಮ್ ಮೊಬೈಲ್ ಕನೆಕ್ಷನ್ ತೆಗೆದು ಬಿಡಿ. ಮೊಬೈಲ್ ಲೇ ಇಲ್ಲ ಅಂದ್ರೆ ಬಿಲ್ ಹೇಗೆ ಬರುತ್ತೆ?

Comments

comments

Amazon Big Indian Festival
Click to comment

Leave a Reply

Your email address will not be published. Required fields are marked *

Amazon Big Indian Festival
To Top