Sports

ರಣಜಿ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಸತತ ನಾಲ್ಕನೇ ಗೆಲುವು ಸಾಧಿಸಿದೆ

ವಿಜಯನಗರಂ: ವೇಗಿ ವಿನಯ್ ಕುಮಾರ್ ಹಾಗೂ ಅರವಿಂದ್ ಅವರ ಮಾರಕ ದಾಳಿಗೆ ಕಂಗೆಟ್ಟ ರಾಜಸ್ತಾನ ೩೯೩ ರನ್‌ಗಳಿಂದ ಸೋಲಿಗೆ ಶರಣಾಗಿದೆ. ೨೦೧೬ರ ರಣಜಿ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಸತತ ನಾಲ್ಕನೇ ಗೆಲುವಿನೊಂದಿಗೆ ನಾಕೌಟ್  ಹಂತದ ದಾರಿಯನ್ನು ಮತ್ತಷ್ಟು ಸಲೀಸು ಮಾಡಿಕೊಂಡಿದೆ.
ಕೊನೆಯ ದಿನವಾದ ಬುಧವಾರ ಗೆಲುವಿಗೆ ಬೇಕಿದ್ದ ೪ ವಿಕೆಟ್ ಪಡೆಯಲು ಹೆಚ್ಚು ಸಮಯ ಪಡೆಯಲಿಲ್ಲ.  ೬ ವಿಕೆಟ್‌ಗೆ ೧೧೮ ರನ್‌ಗಳಿಂದ ಆಟ ಮುಂದುವರಿಸಿದ ರಾಜಸ್ಥಾನ,೧೩೧ ರನ್‌ಗಳಿಗೆ ಆಲೌಟ್ ಆಯಿತು. ಕರ್ನಾಟಕ ತಂಡ ೬ ಅಂಕಗಳನ್ನು ಕಲೆ ಹಾಕಿತು. ೫ ಪಂದ್ಯಗಳಲ್ಲಿ ೪ ಗೆಲುವು ಹಾಗೂ ೧ ಡ್ರಾ ಸಾಧಿಸಿರುವ ವಿನಯ್ ಪಡೆ ೨೯ ಅಂಕಗಳನ್ನು ಕಲೆ ಹಾಕಿ ಗುಂಪಿನಲ್ಲಿ ಅಗ್ರಸ್ಥಾನ ಉಳಿಸಿಕೊಂಡಿತು.  ರಾಜಸ್ಥಾನ ಆಡಿರುವ ೬ ಪಂದ್ಯಗಳಲ್ಲಿ ೧ ಜಯ, ೨ ಸೋಲು ಮತ್ತು ೩ ಡ್ರಾ ಗಳೊಂದಿಗೆ ೧೨ ಅಂಕಗಳನ್ನು ಕಲೆ ಹಾಕಿದೆ.
ಜಾರ್ಖಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಸಮಬಲ ಸಾಧಿಸಿದ್ದ ಕರ್ನಾಟಕ, ಅಸ್ಸಾಂ, ದೆಹಲಿ, ವಿದರ್ಭ ಮತ್ತು ರಾಜಸ್ತಾನ ತಂಡದ ವಿರುದ್ಧ ಜಯ ಸಾಧಿಸಿದೆ.
ಕೊನೆಯ ದಿನ ಡ್ರಾ ಸಾಧಿಸುವ ಕನಸಿನಲ್ಲಿದ್ದ ಪಂಕಜ್ ಸಿಂಗ್ ಪಡೆಯ, ಆಟ ನಡೆಯಲಿಲ್ಲ. ರಾಜೇಶ್ ಬಿಷ್ಣೋಯಿ ೧೪ ರನ್‌ಗಳಿಸಿ ಮುನ್ನುಗುತ್ತಿದ್ದಾಗ ಅರವಿಂದ್ ಅವರ ಎಸೆತವನ್ನು ತಪ್ಪಾಗಿ ಗ್ರಹಿಸಿ ವಿಕೆಟ್ ಒಪ್ಪಿಸಿದರು.
ದೀಪಕ್ ಚಹಾರ್ ನೆಲಕಚ್ಚಿ ಬ್ಯಾಟಿಂಗ್ ಮಾಡುವ ಸೂಚನೆಯನ್ನು ನೀಡಿದರೂ, ಇವರಿಗೆ ಯಾವೊಬ್ಬ ಬ್ಯಾಟ್ಸ್‌ಮನ್ ಉತ್ತಮ ಸಾಥ್ ನೀಡಲಿಲ್ಲ. ಕೆಳ ಕ್ರಮಾಂಕದಲ್ಲಿ ತನ್ವಿರ್ ಉಲ್ ಹಕ್ (೪), ಪಂಕಜ್ ಸಿಂಗ್ (೦), ರನ್‌ಗಳಿಸುವಲ್ಲಿ ಪರದಾಡಿದರು. ಸಿದ್ದಾರ್ಥ್ ದುಂಬಾಲ್ ಗಾಯದ ಸಮಸ್ಯೆಯಿಂದ ಅಖಾಡಕ್ಕೆ ಇಳಿಯಲಿಲ್ಲ.
ವಿನಯ್ ಅರವಿಂದ್ ಆರ್ಭಟ
ವೇಗಿಗಳಾದ ವಿನಯ್ ಕುಮಾರ್ ಹಾಗೂ ಎಸ್.ಅರವಿಂದ್ ಆರ್ಭಟ ನಡೆಸಿದರು. ಎರಡೂ ಇನಿಂಗ್ಸ್‌ನಲ್ಲೂ ಮಾರಕ ದಾಳಿಯನ್ನು ಸಂಘಟಿಸಿದ ಜೋಡಿ ಕರ್ನಾಟಕಕ್ಕೆ ಆಸರೆಯಾಯಿತು. ವಿನಯ್ ಮೊದಲ ಇನಿಂಗ್ಸ್‌ನಲ್ಲಿ ೪, ಎರಡನೇ ಇನಿಂಗ್ಸ್‌ನಲ್ಲಿ ೫ ವಿಕೆಟ್ ಪಡೆದರು. ಅರವಿಂದ್ ಎರಡೂ ಇನಿಂಗ್ಸ್‌ ಗಳಿಂದಲೂ ೭ ವಿಕೆಟ್ ಪಡೆದು ಮಿಂಚಿದರು. ಬಿನ್ನಿ ೨೩ ರನ್‌ಗಳಿಗೆ ೧ ವಿಕೆಟ್ ಪಡೆದರು.
ಸ್ಕೋರ್ ವಿವರ
ಕರ್ನಾಟಕ ಮೊದಲ ಇನಿಂಗ್ಸ್ ೩೭೪ ಮತ್ತು ೬ ವಿಕೆಟ್ ಗೆ ೨೯೮.
ರಾಜಸ್ತಾನ ಮೊದಲ ಇನಿಂಗ್ಸ್ ೧೪೮ ಮತ್ತು ೧೩೧.


Comments

comments

Click to comment

Leave a Reply

To Top