Sports

ಈ 5 ವರ್ಷದ ಬಾಲಕ ವಿರಾಟ್ ಕೊಹ್ಲಿ ಉತ್ತರಾಧಿಕಾರಿ ಆಗ್ತಾನೆ…!! ನಂಬಲ್ಲ ಅಂದ್ರೆ ಈ ವಿಡಿಯೋ ನೋಡಿ…

ದೆಹಲಿಯ ಅಂಡರ್-14 ತಂಡದಲ್ಲಿ ಆಟವಾಡುತ್ತಿರುವ ಈ ಪುಟ್ಟ ಬಾಲಕನ ಹೆಸರು ರುದ್ರಪ್ರತಾಪ್ ಸಿಂಗ್ 5 ರ ಹರೆಯದ ಹಾಲು ಗಲ್ಲದ ಮಗು,ಪ್ಲಾಸ್ಟಿಕ್‌ ಬ್ಯಾಟ್‌ ಹಿಡಿದು ಆಡುವ ವಯಸ್ಸು.ಆದರೆ ಈ ಪೋರ ಅಂಗಣಕ್ಕೆ ಪ್ಯಾಡ್‌, ಹೆಲ್ಮೆಟ್‌ ಕಟ್ಟಿಕೊಂಡು ಬಂದು ಅನುಭವಿ ಕ್ರಿಕೆಟರ್‌ನಂತೆ ಆಟವಾಡುವ ಮೂಲಕ ಕ್ರಿಕೆಟ್‌ ಲೋಕದಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.

ರುದ್ರಪ್ರತಾಪ್ ಸಿಂಗ್ 5 ವರ್ಷದ ಬಾಲಕನಾಗಿದ್ದು, ಈತನಿಗೆ ಸರಿಹೊಂದುವ ಅಳತೆಯ ಪ್ಯಾಡ್ ಗಳು, ಹೆಲ್ಮೆಟ್ ಗಳು ಲಭ್ಯವಾಗಿಲ್ಲ. ಆದರೂ, ಯಾವುದಕ್ಕೂ ಹಿಂಜರಿಯದೆಯೇ ಕ್ಯಾಪ್ ಧರಿಸಿ ಅದರ ಮೇಲೆ ಹೆಲ್ಮೆಟ್ ಧರಿಸಿ ಆಟವಾಡಿದ್ದಾನೆ. ಪುಟಾಣಿ ಮಕ್ಕಳೊಂದಿಗೆ ಪ್ಲಾಸ್ಟಿಕ್ ಬ್ಯಾಟ್ ಹಿಡಿದು ಆಡುವ ವಯಸ್ಸು ಆಗಿದ್ದರೂ, ಪ್ಯಾಡ್‌, ಹೆಲ್ಮೆಟ್‌ನಿಂದ ಮುಚ್ಚಿ ಹೋಗುವ ವಾಮನ ಗಾತ್ರದ ಈತ ಪಿಚ್ ನಲ್ಲಿ ಬಾಲ್ ಎದುರಿಸಿದ ಶೈಲಿ, ವಿಕೆಟ್ ಮುಂದೆ ಬಂದು ಬ್ಯಾಟ್ ಕುಟ್ಟಿತ್ತಿರುವ ಪರಿ ಪಂದ್ಯದ ಕಾಮೆಂಟರಿ ಮಾಡುತ್ತಿದ್ದವರಿಂದ ಹಿಡಿದು ಪಂದ್ಯವನ್ನು ಟಿವಿಯಲ್ಲಿ ನೋಡುತ್ತಿದ್ದವರಿಗೂ ಆಶ್ಚರ್ಯವನ್ನು ಮೂಡಿಸಿದೆ.

https://youtu.be/vL7YmcrdL-0

ಏನೋ ಸುಮ್ಮನೆ ಹೇಳ್ತಿದ್ದಾರೆ ಅನ್ಕೊಂಡ್ರ…!! ಒಮ್ಮೆ ಈ ವಿಡಿಯೋ ನೋಡಿ, ಬ್ಯಾಟ್‌ ಬೀಸುವ ಕೌಶಲ ನೋಡಿದರೆ ನೀವು ಕೂಡ ಮೂಗಿನ ಮೇಲೆ ಬೆರಳಿಡಲೇ ಬೇಕು. ಈತ ಬಾಲಕ ಬ್ಯಾಟಿಂಗ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು, ಸಾಕಷ್ಟು ವೈರಲ್ ಆಗಿದೆ. ಅಂಡರ್-14 ಕ್ರಿಕೆಟ್ ತಂಡದಲ್ಲಿರುವ ಎಲ್ಲಾ ಮಕ್ಕಳು 14 ವರ್ಷದ ಮೇಲಿನವರೇ ಆಗಿದ್ದು, ರುದ್ರಪ್ರತಾಪ್ ಸಿಂಗ್ ಮಾತ್ರ 5 ವರ್ಷದ ಆಟಗಾರನಾಗಿದ್ದಾನೆ. ಆದರೆ, ವಯಸ್ಸಿನ ಅಳುಕಿಲ್ಲದೆ ಬಾಲಕ ಮೈದಾನದಲ್ಲಿ ಕಾಣಿಸಿಕೊಂಡಿದ್ದು ಇದೀಗ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ನಾವೆಲ್ಲಾ ಈ ವಯಸ್ಸಿನಲ್ಲಿ ಏನ್ ಮಾಡ್ತಿದ್ವಿ ಅಂತ ಒಮ್ಮೆ ಯೋಚನೆ ಮಾಡಿ…

Comments

comments

Click to comment

Leave a Reply

Your email address will not be published. Required fields are marked *

To Top