Get Inspired

ನನಗೆ ‘ಪತಾಂಜಲಿ’ ಎಂಬ ಬ್ರಾಂಡ್ ಸ್ಥಾಪಿಸಲು 20 ವರ್ಷವೇ ಬೇಕಾಯಿತು….

ಬಾಬಾ ರಾಮ್ ದೇವ್ ಗುಲಾಬೊ ದೇವಿ ಹಾಗೂ ರಾಮ್ ನಿವಾಸ್ ಯಾದವ್ ಅವರ ಸುಪುತ್ರ, ಹುಟ್ಟಿದ್ದು ಅಲಿ ಸಾಯದ್ ಪುರ್ (ಅಲಿಗರ್) ಅನ್ನುವ ಹರಿಯಾಣ ರಾಜ್ಯದ ಮೂಲೆ. ರಾಮ್ ದೇವ್ ಅವರ ಮೊದಲ ಹೆಸರು ರಾಮ ಕೃಷ್ಣ ಯಾದವ್, ಆದರೆ ಅವರು ಆಚಾರ್ಯ ಬಲದೇವರಿಂದ ಸನ್ಯಾಸ ದೀಕ್ಷೆ ಪಡೆದ ನಂತರ ಬಾಬಾ ರಾಮ್ ದೇವ್ ಎಂಬ ಹೆಸರಿನಿಂದ ಕರೆಯಲ್ಪಟ್ಟರು.

ಬಾಲ್ಯದಿಂದಲೇ ರಾಮ್ ಪ್ರಸಾದ್ “ಬಿಸ್ಮಿಲ್” , ನೇತಾಜಿ ಸುಭಾಶ್ಚಂದ್ರ ಭೋಸ್ ರಂತಹ ಮಹಾನ್ ವ್ಯಕ್ತಿಗಳಿಂದ ಪ್ರೇರಿತರು ಬಾಬಾ ರಾಮ್ ದೇವ್. ತನ್ನ 8 ನೇ ತರಗತಿಯ ವಿಧ್ಯಾಬ್ಯಾಸದ ನಂತರ ಖಾನ್ಪುರ ದ ಆರ್ಯ ಗುರುಕುಲ ಒಂದಕ್ಕೆ ಸೇರಿ ಸಂಸ್ಕೃತ ಹಾಗೂ ಯೋಗ ಪದ್ದತಿಗಳನ್ನು ಆಚಾರ್ಯ ಪ್ರದ್ಯುಮ್ನ ಅವರಲ್ಲಿ ಅಭ್ಯಾಸ ಮಾಡಿದರು.

6-top-baba-ramdev-patanjali-weight-loss-products-medicines-tipsmonk-1

ಬಾಬಾ ರಾಮ್ ದೇವ್ ಅತ್ಯುನ್ನತ ಕಾರ್ಯಗಳು :

 • ಬಾಬಾ ರಾಮ್ ದೇವ್ “ಪಾತಂಜಲಿ ಯೋಗ ಕೇಂದ್ರ” ವನ್ನು ಸ್ಥಾಪಿಸಿದ್ದಲ್ಲದೆ ಅಲ್ಲಿ ಬಡ ರೋಗಿಗಳಿಗೆ ಆಯುರ್ವೇದ ಹಾಗೂ ಯೋಗ ಪದ್ದತಿಯ ಮೂಲಕ ಚಿಕಿತ್ಸೆ ಕೊಡುವ ಕಾರ್ಯವನ್ನೂ ಈಗಲೂ ಮಾಡುತ್ತಿದ್ದಾರೆ.
 • ಪಾತಂಜಲಿ ಆಯುರ್ವೇದ ಕಾಲೇಜು, ಪಾತಂಜಲಿ ಚಿಕಿತ್ಸಾಲಯ, ಯೋಗ ಗ್ರಾಮ, ಗೋಶಾಲೆ, ಪಾತಂಜಲಿ ಆಹಾರ ಮತ್ತು ಹರ್ಬಲ್ ಉದ್ಯಾನವನಗಳು, “ದಿವ್ಯ ಯೋಗ ಮಂದಿರ ಟ್ರಸ್ಟ್ “ ನವತಿಯಿಂದ ನೆಡೆಸಲ್ಪಡುವ ಇನ್ನಷ್ಟು ಸಂಸ್ಥೆಗಳು.
 • ಇವರ “ಯೋಗ ಸಂದೇಶ” ಅನ್ನುವ ಪುಸ್ತಕ ಕನ್ನಡ ಭಾಷೆಯನ್ನು ಒಳಗೊಂಡು ಒಟ್ಟು 11 ಭಾಷೆಗಳಲ್ಲಿ ಪ್ರಕಟ ಗೊಂಡಿದೆ.
 • ಅಮೆರಿಕಾದ ಪ್ರಖ್ಯಾತ ನಿಯತಕಾಲಿಕೆ “ ಟೈಮ್ಸ್ ಆಫ್ ನ್ಯೂ ಯಾರ್ಕ್” ಬಾಬಾರ ಯೋಗ ಸಾಧನೆಗೆ “ಭಾರತೀಯನಮೋಬ್ಬನ ಯೋಗ ಸಾಮ್ರಾಜ್ಯ” ವೆಂದು ಹೊಗಳಿದೆ.
 • ಭಾರತ ಒಂದು ಯೋಗ ವನ್ನು ಅಭ್ಯಾಸ ಮಾಡುವ ರಾಷ್ಟ್ರ ವಾಗಬೇಕೆಂಬ ಸಂದೇಶವನ್ನೂ ತಮ್ಮ ಎಲ್ಲ ಯೋಗ ಶಿಬಿರಗಳಲ್ಲಿ ಪ್ರಚಾರ ಪಡಿಸುತ್ತಲೇ ಬಂದಿದ್ದಾರೆ.
 • ಸಮಾಜ ಮುಖಿಯಾಗಿ ಬಾಬಾ ರಾಮ್ ದೇವ್ ರಾಜೀವ್ ದೀಕ್ಷಿತರ “ಭರತ್ ಸ್ವಾಭಿಮಾನ್” ಅನ್ನುವ ಧ್ಯೇಯ ವಾಕ್ಯದಡಿ,
  ೧ . 100% ಮತದಾನ, ಸ್ವದೇಶಿ ವಸ್ತುಗಳ ಬಳಕೆ.
  ೨ . ಸರ್ವ ಭಾರತೀಯರಿಗೂ ಸಮಾನತೆ.
  ೩ . ಸಾವಯವ ಕೃಷಿ ಆಧಾರ.
  ೪ . ವಿದೇಶಿ ವಸ್ತುಗಳ ವ್ಯಾಮೋಹ ಹಾಗೂ ಅನುಕರಣೆಗಳ ವಿರುದ್ಧ ಸಮರ ಸಾರುವುದು.
  ಮತ್ತಿತರ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ.

ಪತಾಂಜಲಿ ಉದ್ಯಮವನ್ನು ಸ್ಥಾಪಿಸಲು 20 ವರ್ಷವೇ ಬೇಕಾಯಿತು ಎನ್ನುವ ಬಾಬಾ ರಾಮ್ ದೇವ್ ಗೆ ಹಲವಾರು ಪ್ರಶಸ್ತಿಗಳು ಸಂದಿವೆ :

                                                 2007 ರ ಕಲಿಂಗ ಇನ್ಸ್ಟಿಟ್ಯೂಟ್ ಅವರ ಗೌರವ ಡಾಕ್ಟರೇಟ್.

                                                 ಅಮೇಟಿ ವಿಶ್ವವಿಧ್ಯಾಲಯದ ಗೌರವ ಡಾಕ್ಟರೇಟ್.

                                                 ಡಿ.ವೈ ಪಾಟೀಲ್ ವಿಶ್ವವಿಧ್ಯಾನಿಲಯದಿಂದ ಯೋಗ ವಿಜ್ಞಾನಕ್ಕಾಗಿನ ಗೌರವ ಪದವಿ.

                                                 ಮಹಾರಾಷ್ಟ್ರ ಸರ್ಕಾರದ “ಚಂದ್ರಶೇಕರೇಂದ್ರ ಸರಸ್ವತಿ ಸ್ಮಾರಕ ಪ್ರಶಸ್ತಿಗಳು ಮುಖ್ಯವಾದವುಗಳು.

ಸಮಾಜ ಮುಖಿಯಾಗಿ ಬಾಬಾ ರಾಮ್ ದೇವ್ ಹೆಚ್ಚು ಜನ ಪರ ಕಾಳಜಿ ತೋರಿಸುವಂತಾಗಲಿ ಎಂಬುದೇ THENEWSISM ಸಂಸ್ಥೆಯ ಆಶಯವಾಗಿದೆ.

Comments

comments

Amazon Big Indian Festival
Click to comment

Leave a Reply

Your email address will not be published. Required fields are marked *

Amazon Big Indian Festival
To Top