Achivers

ಜಯಲಲಿತಾ : ಈಕೆ ಹೈ ಕಮಾಂಡ್ ಮುಖ್ಯಮಂತ್ರಿ ಅಲ್ಲ , ಜನಗಳ ಮುಖ್ಯಮಂತ್ರಿ

ಕಳೆದ ವರ್ಷ ಇದೇ ಡಿಸೆಂಬರ್ ಐದನೇ ತಾರೀಕು ತಮಿಳುನಾಡಿಗೆ ಚಂಡಮಾರುತ ಅಪ್ಪಳಿಸಿ ಇಡೀ ಚೆನೈ ನಗರ ಪ್ರವಾಹದಿಂದ ಮುಳುಗಿ ಹೋಗಿತ್ತು, ತಮಿಳುನಾಡಿನ ಸ್ಥಿತಿ ನೋಡಿ ದೇಶದ ಉದ್ದಗಲಕ್ಕೂ ಇರುವ ಜನ ಕಂಬನಿ ಮಿಡಿದಿದ್ದರು, ಹಲವು ರಾಜ್ಯಗಳು ತಮಿಳುನಾಡಿಗೆ ಬೇಕಾದ ಅವಶ್ಯಕ ವಸ್ತುಗಳ ಪೂರೈಕೆ ಮಾಡಲು ಮುಂದೆ ಬಂದಿದ್ದವು, ಅದರಲ್ಲಿ ಕರ್ನಾಟಕವೂ ಒಂದು.

ಆದರೆ ಜಯಲಲಿತಾ ಅದ್ಯಾವ ದ್ವೇಷಕ್ಕೊ ಏನೋ ಕರ್ನಾಟಕದ ಸಹಾಯ ಅಗತ್ಯವಿಲ್ಲ ಎಂದು ನಿಷ್ಠೂರವಾಗಿ ಹೇಳಿದ್ದರು.

ತಮಿಳುನಾಡಿಗೆ ಚಂಡಮಾರುತದಿಂದ ಲಕ್ಷಾಂತರ ಕೋಟಿ ರುಪಾಯಿ ಆಸ್ತಿ ನಷ್ಟವಾಗಿತ್ತು, ನಷ್ಟ ಪರಿಹಾರಕ್ಕಾಗಿ ಕೇಂದ್ರದಿಂದ ಸಹಾಯ ಬೇಡಿ ಕೇವಲ ಎರಡು-ಮೂರು ತಿಂಗಳಲ್ಲಿ ಇಡೀ ತಮಿಳುನಾಡನ್ನು ಯಥಾ ಸ್ಥಿತಿಗೆ ತಂದುಬಿಟ್ಟರು ಜಯಲಲಿತಾ.

ಇದು ಅವರ ಹೊಂದಾಣಿಕೆ ಮಾಡಿಕೊಳ್ಳದ ಆಡಳಿತಕ್ಕೆ ಹಿಡಿದ ಕನ್ನಡಿ.

chennai-rains-boat-reuters_650x400_51449076746

ಇಂತಹದ್ದೆ ಒಂದು ಭೀಕರ ನೆರೆ ನಮ್ಮ ರಾಜ್ಯದ ಉತ್ತರ ಕರ್ನಾಟಕ್ಕೂ ಅಪ್ಪಳಿಸಿತ್ತು. ಉತ್ತರ ಕರ್ನಾಟಕದ ಬಹುತೇಕ ಹಳ್ಳಿಗಳು ಅಕ್ಷರಶಃ ನಡುಗಡ್ಡೆಗಳಾಗಿ ಮಾರ್ಪಟ್ಟಿದ್ದವು, ನೂರಾರು ಜನ ಪ್ರಾಣ ಕಳೆದುಕೊಂಡಿದ್ದರು ದೇಶದ ವಿವಿಧ ರಾಜ್ಯಗಳು ಆಗ ಸಹಾಯ ಹಸ್ತ ಚಾಚಿದ್ದವು, ಕೇಂದ್ರ ಸರಕಾರವೂ ಕೂಡ ನೆರವು ನೀಡಿತ್ತು.

ಆದರೆ ಉತ್ತರ ಕರ್ನಾಟಕಕ್ಕೆ ನೆರೆ ಬಂದು ಈಗ ಸುಮಾರು ಆರೇಳು-ವರ್ಷಗಳು ಕಳೆಯುತ್ತಿದೆ ಆದರೂ ಇನ್ನೂ ಅಲ್ಲಿ ಯಾವುದೇ ರೀತಿಯ ಮೂಲಭೂತ ಸೌಲಭ್ಯ ಕಲ್ಪಿಸಲು ನಮ್ಮ ರಾಜ್ಯ ಸರಕಾರಕ್ಕೆ ಆಗಿಲ್ಲ. ಮನೆ ಕಳೆದುಕೊಂಡವರಿಗೆ ಮನೆ ಸಿಕ್ಕಿಲ್ಲ, ಸತ್ತವರ ಕುಟುಂಬಕ್ಕೆ ಪರಿಹಾರ ಸಿಕ್ಕಿಲ್ಲ.

5084731

ತಮಿಳುನಾಡಿಗೆ ಪ್ರವಾಹ ಅಪ್ಪಳಿಸಿದಾಗ ಕೇವಲ ಎರಡು-ಮೂರು ತಿಂಗಳಲ್ಲಿ ಯಥಾ ಸ್ಥಿತಿಗೆ ತಂದ ಜಯಲಲಿತಾ ಎಲ್ಲಿ!

ವರ್ಷಗಳು ಕಳೆದರೂ ಉತ್ತರ ಕರ್ನಾಟಕದ ಜನತೆಗೆ ಕನಿಷ್ಠ ಪರಿಹಾರವನ್ನೂ ಒದಗಿಸಲಾಗದ ಕರ್ನಾಟಕ ಸರಕಾರವೆಲ್ಲಿ!

ಇಂತಹ ದಿಟ್ಟ ನಿಲುವುಗಳು, ಅಭಿವೃದ್ದಿಗಳಿಂದಾಗಿಯೇ ತಮಿಳುನಾಡಿನಲ್ಲಿ ಜಯಲಲಿತ ಜನರ ಬಾಯಲ್ಲಿ ಪ್ರೀತಿಯಿಂದ “ಅಮ್ಮ” ಎಂದು ಕರೆಸಿಕೊಳ್ಳುವುದು. ಅಮ್ಮನ ಕರ್ತವ್ಯವೇ ಮಕ್ಕಳನ್ನು ಕಾಪಾಡುವುದು.

ನಮ್ಮ ಕರ್ನಾಟಕ ರಾಜ್ಯದ ರಾಜಕಾರಣಿಗಳು ತಮ್ಮ ಮಕ್ಕಳು, ಹೆಂಡತಿಯರು, ಆಪ್ತರಿಗಾಗಿ ಭ್ರಷ್ಟಾಚಾರ ಮಾಡಿ ದುಡ್ಡು ಕೊಳ್ಳೆ ಹೊಡೆದರೇ ಹೊರತು, ರಾಜ್ಯದ ಜನರನ್ನು ಕನಿಷ್ಟ ಮಾನವತ್ವದಿದಲೂ ನೋಡಲಿಲ್ಲ.

ಇದೇ ತಮಿಳುನಾಡಿನ ರಾಜಕಾರಣಕ್ಕೂ, ಕರ್ನಾಟಕದ ಭ್ರಷ್ಟ ರಾಜಕಾರಣಕ್ಕೂ ಇರುವ ವ್ಯತ್ಯಾಸ.

ಏನೇ ಆಗಲಿ ಜಯಲಲಿತಾ ಅವರು ಕರ್ನಾಟಕದ ರಾಜಕಾರಣದ ಚುಕ್ಕಾಣಿ ಹಿಡಿದಿದ್ದರೆ ಕರ್ನಾಟಕದ ಬಹುತೇಕ ಎಲ್ಲಾ ಆಂತರಿಕ ಸಮಸ್ಯೆಗಳು ನಿವಾರಣೆಯಾಗಿ ಬಿಡುತ್ತಿದ್ದವೊ ಏನೊ!

ಹೆಣ್ಣಾಗಿ ಹುಟ್ಟಿದರೂ ಕರ್ನಾಟಕದಲ್ಲಿ ‘ಗಂಡು ರಾಜಕಾರಣಿಗಳು’ ಮಾಡಲಾಗದ ಕೆಲಸವನ್ನು ನೀವು ತಮಿಳುನಾಡಿನಲ್ಲಿ ಮಾಡಿ ತೋರಿಸಿ ಅಭಿವೃದ್ದಿಯಲ್ಲಿ ತಮಿಳುನಾಡನ್ನು ಭಾರತಕ್ಕೆ ಮಾದರಿ ರಾಜ್ಯ ಮಾಡಿದ್ದೀರಿ ನಿಮ್ಮ ಈ ಸಾಧನೆ ಚರಿತ್ರೆಯಲ್ಲಿ ಅಜರಾಮರ.

ಆ ದೇವರು ನಿಮಗೆ ನೆಮ್ಮದಿ ನೀಡಲಿ.

Amazon Big Indian Festival
Amazon Big Indian Festival

Copyright © 2016 TheNewsism

To Top