Achivers

ಮೋದಿ ಹಿಂದೆ ರಹಸ್ಯವಾಗಿ ಕೆಲಸ ಮಾಡಿದ ಆ ನಂಬಿಕಸ್ತ ತಂಡ ಯಾವುದು ಗೊತ್ತೆ?

ಭಾರತದ ಆರ್ಥಿಕತೆಯ ಮೇಲೆ ಪರೋಕ್ಷವಾಗಿ ಕೆಲಸ ಮಾಡುತ್ತಿದ್ದ ಕಪ್ಪುಹಣ ಮತ್ತು ಖೋಟಾನೋಟು ಹಾವಳಿ ತಡೆಯಲು ಪ್ರಧಾನಮಂತ್ರಿ ನರೇಂದ್ರ ಮೋದಿ ರಾತ್ರೋರಾತ್ರಿ ಹಳೇಯ ೫೦೦ ಮತ್ತು ೧೦೦೦ ನೋಟು ರದ್ದುಪಡಿಸುವ ನಿರ್ಧಾರ ಪ್ರಕಟಿಸುವ ಮುನ್ನ ಅತ್ಯಂತ ನಂಬಿಕಸ್ತ ೬ ಅಧಿಕಾರಿಗಳ ತಂಡ ರಹಸ್ಯವಾಗಿ ಕೆಲಸ ಮಾಡಿತ್ತು ಎಂಬುದು ಬಹುತೇಕ ಮಂದಿಗೆ ತಿಳಿದೇ ಇರಲಿಲ್ಲ.

ನ.೮ರಂದು ನೋಟ್ ಬ್ಯಾನ್ ಘೋಷಣೆಗೂ ಕೆಲವೇ ಕ್ಷಣಗಳ ಮುನ್ನ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ಇದು ಅತ್ಯಂತ ದೊಡ್ಡ ರಿಸ್ಕ್ ಎಂದು ಆತಂಕ ವ್ಯಕ್ತಪಡಿಸಿದ್ದರು. ಆದರೆ ಮೋದಿ ‘ನಾನು ಸಾಕಷ್ಟು ಅಧ್ಯಯನ ಮಾಡಿದ ನಂತರ ಈ ನಿರ್ಧಾರ ಕೈಗೊಂಡಿದ್ದೇನೆ. ಒಂದು ವೇಳೆ ವಿಫಲರಾದರೆ ನಾನೇ ಹೊಣೆಗಾರನಾಗುತ್ತೇನೆ ಎಂದು ಹೇಳಿದ್ದರು. ಆದರೆ ಯಾವ ರೀತಿ ಸಮೀಕ್ಣೆ ಅಥವಾ ಅಧ್ಯಯನ ಎಂದು ಬಾಯ್ಬಿಟ್ಟಿರಲಿಲ್ಲ.

hasmukh-adhia_650x400_41481255664-300x185

ಕೇಂದ್ರ ಸರಕಾರದ ಕಾರ್ಯದರ್ಶಿ ಹಸ್ಮುಕ್ ಅದಿಯಾ ಹಾಗೂ ಇತರ ೫ ಮಂದಿಯ ತಜ್ಞರ ತಂಡ ಕೆಲವು ವರ್ಷಗಳಿಂದ ಮೋದಿ ಅವರ ನಿವಾಸದಲ್ಲಿನ ಎರಡು ಕೊಠಡಿಯಲ್ಲಿ ಕುಳಿತು ಸಾಕಷ್ಟು ಅಧ್ಯಯನ ನಡೆಸಿದ್ದೂ ಅಲ್ಲದೇ ನೋಟ್ ಬ್ಯಾನ್ ಜಾರಿ ಕುರಿತು ಕಾರ್ಯತಂತ್ರ ರೂಪಿಸಿದ್ದರು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.

೫೮ ವರ್ಷದ ಹಸ್ಮುಕ್ ೨೦೦೩-೦೬ರ ಅವಧಿಯಲ್ಲಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಪ್ರಿನ್ಸಿಪಾಲ್ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಮೋದಿ ಅವರಿಗೆ ಯೋಗ ಪರಿಚಯಿಸುವ ಮೂಲಕ ಆಪ್ತರಾಗಿದ್ದರು. ಹಸ್ಮುಖ್ ಹಣಕಾಸು ವಿಷಯದಲ್ಲಿ ತಜ್ಞರೂ ಆಗಿದ್ದರು. ಅಲ್ಲದೇ ರೆವಿನ್ಯೂ ಇಲಾಕೆಯಲ್ಲೂ ಕೆಲಸ ಮಾಡಿದ ಅನುಭವ ಹೊಂದಿದ್ದರು.

ಕಪ್ಪುಹಣ ಹೇಗೆ ಚಲಾವಣೆ ಆಗುತ್ತಿದೆ? ಚಿನ್ನ ಮತ್ತು ಭೂ ಖರೀದಿಯ ಬೆಲೆ ಏರಿಕೆಗೆ ಕಾರಣ ಮುಂತಾದವುಗಳ ಬಗ್ಗೆ ಹಸ್ಮುಖ್ ಮತ್ತವರ ತಂಡ ಸಾಕಷ್ಟು ಅಧ್ಯಯನ ನಡೆಸಿತ್ತು. ಮೋದಿ ಅವರು ನೋಟ್ ಬ್ಯಾನ್ ಘೋಷಿಸುತ್ತಿದ್ದಂತೆ ಹಸ್ಮುಖ್, ಸರಕಾರ ಕೈಗೊಂಡ ಅತ್ಯಂತ ಗಟ್ಟಿ ನಿರ್ಧಾರ ಎಂದು ಪ್ರಶಂಸಿಸಿ ಟ್ವೀಟ್ ಮಾಡಿದ್ದರು. ಇದೀಗ ಈ ತಂಡ ಪ್ಲಾಸ್ಟಿಕ್ ನೋಟು ಬಳಕೆಗೂ ಸಲಹೆ ನೀಡಿದೆ ಎನ್ನಲಾಗಿದೆ.

Amazon Big Indian Festival
Amazon Big Indian Festival
To Top