Sports

ಒಂದೇ ವರ್ಷದಲ್ಲಿ ಮೂರನೇ ದ್ವಿಶತಕ ಬಾರಿಸಿದ ಶ್ರೇಯಕ್ಕೆ ಪಾತ್ರರಾದ ವಿರಾಟ್

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ರನ್ ಮಳೆ ಸುರಿಸಿದ ನಾಯಕ ವಿರಾಟ್ ಕೊಹ್ಲಿ ದ್ವಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.

ಒಂದೇ ವರ್ಷದಲ್ಲಿ ಮೂರನೇ ದ್ವಿಶತಕ ಬಾರಿಸಿದ ಶ್ರೇಯಕ್ಕೆ ಪಾತ್ರರಾದ ವಿರಾಟ್ (235; 340ಎ, 25ಬೌಂ, 1ಸಿ)   ಮತ್ತು ಜಯಂತ್ ಯಾದವ್ (104; 204ಎ, 15ಬೌಂ) ಅವರ ದಾಖಲೆಯ ಜೊತೆಯಾಟದಿಂದಾಗಿ ಭಾರತವು ಮೊದಲ ಇನಿಂಗ್ಸ್‌ನಲ್ಲಿ 631 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು.  231 ರನ್‌ಗಳ ಮುನ್ನಡೆ ಸಾಧಿಸಿತು.

ಭಾರತ – ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ 400 ರನ್‌ಗೆ ಆಲೌಟ್‌ ಆಗಿತ್ತು. ಸವಾಲಿನ ಮೊತ್ತವನ್ನು ಬೆನ್ನತ್ತಿದ ಕೊಹ್ಲಿ ಪಡೆ 231 ರನ್‌ಗಳ ಮುನ್ನಡೆ ಕಾಯ್ದುಕೊಂಡಿತ್ತು.

ನಾಲ್ಕನೇ ದಿನದಾಟ ಆರಂಭಿಸಿದ ವಿರಾಟ್‌ ಕೊಹ್ಲಿ 16 ನೇ ಶತಕ ಸಿಡಿಸುವ ಮೂಲಕ ಇಂಗ್ಲೆಂಡ್‌ ವಿರುದ್ಧ  235 ರನ್‌ ಗಳಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಕೊಹ್ಲಿ ಗಳಿಸಿದ ಗರಿಷ್ಠ ರನ್‌ ಇದಾಗಿದೆ. ಇದು ಕೊಹ್ಲಿ ಸಿಡಿಸಿರುವ ಈ ವರ್ಷದ ಮೂರನೇ ದ್ವಿಶತಕವಾಗಿದೆ.

ಎರಡನೇ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ 3 ವಿಕೆಟ್‌ ನಷ್ಟಕ್ಕೆ 111 ರನ್‌ ಕಲೆ ಹಾಕಿದೆ.

ಇಂಗ್ಲೆಂಡ್‌ ಪರ: ಅಲಸ್ಟೇರ್ ಕುಕ್ 18, ಕೇಟನ್ ಜೆನ್ನಿಂಗ್ಸ್ 00 , ಮೊಹಿನ್ ಅಲಿ 00, ಜೋ ರೂಟ್ ಬ್ಯಾಟಿಂಗ್‌ 63, ಜಾನಿ ಬೆಸ್ಟೊವ್ ಬ್ಯಾಟಿಂಗ್‌ 20 ರನ್‌

ಭಾರತದ ಪರ: ಜಡೇಜ 2 , ಭುವನೇಶ್ವರ್‌ ಕುಮಾರ್‌ 1 ವಿಕೆಟ್‌ ಪಡೆದಿದ್ದಾರೆ.

Comments

comments

Amazon Big Indian Festival
Click to comment

Leave a Reply

Your email address will not be published. Required fields are marked *

Amazon Big Indian Festival
To Top