Achivers

ನಿಜ ಜೀವನ : ಊರಿನ ಬಡತನ ರಾತ್ರೋರಾತ್ರಿ ಇಲ್ಲದಂತೆ ಮಾಡಿದ …!

ಸ್ಪೇನ್’ನ ಆಂಟೊನಿನೋ ಫರ್ನಾಂಡೀಸ್ ಎಂಬ ವ್ಯಾಪಾರಿ ತೆಗೆದುಕೊಂಡ ನಿರ್ಧಾರದಿಂದ ತಾನು ಹುಟ್ಟಿದ ಗ್ರಾಮದಲ್ಲಿ ಬಡತನ ಎಂಬುದೇ ಇಲ್ಲದಂತಾಗಿದೆ. ಈ ವ್ಯಾಪಾರಿ ಊರಿನ ಜನರಿಗೆಲ್ಲ ತನ್ನ ಆಸ್ತಿಯಲ್ಲಿ ಪಾಲು ನೀಡಿ ಕರಾರು ಪತ್ರ ಬರೆದು ಮರಣಹೊಂದಿದ. ಒಂದಲ್ಲ ಎರಡಲ್ಲ ಬರೋಬ್ಬರಿ ರೂ.14 ಸಾವಿರ ಕೋಟಿ ಆಸ್ತಿಯನ್ನು ತನ್ನ ಹುಟ್ಟಿದ ಊರಿಗೆ ಬರೆದುಕೊಟ್ಟ. ಇದರಿಂದ ಅಲ್ಲಿನ ಜನರು ರಾತ್ರೋರಾತ್ರಿ ಕೋಟ್ಯಾಧಿಶರಾದರು. ಚಕ್ಕವರಿದ್ದಾಗ ಬಡತನದಿಂದ ತಾನು ಪಟ್ಟ ಕಷ್ಟನಷ್ಟಗಳನ್ನು ನೆನಸಿಕೊಂಡ ಫರ್ನಾಂಡೀಸ್, ತನ್ನಂತೆ ತನ್ನ ಊರಿನವರು ಕಷ್ಟ ಪಡಬಾರದು ಎಂದು ಈ ನಿರ್ಧಾರಕ್ಕೆ ಬಂದರಂತೆ.

1917ರಲ್ಲಿ ಸ್ಪೇನ್’ನ ಸೆರೆಜಲ್ಸ್ ಡೆಲ್ ಕೊಂಡಾಡೋ ಗ್ರಾಮದಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಫರ್ನಾಂಡೀಸ್’ಗೆ 13 ಜನ ಅಕ್ಕತಂಗಿಯರು. ಇಷ್ಟು ದೊಡ್ಡ ಕುಟುಂಬವನ್ನು ಪೋಷಿಸಲು ತಂದೆತಾಯಿಯ ಸಂಪಾದನೆ ಸಾಲುತ್ತಿರಲಿಲ್ಲ. ಹಾಗಾಗಿ 14 ನೆಯ ವಯಸ್ಸಿನಲ್ಲಿ ಓದಿ ನಿಲ್ಲಿಸಿದ. 1949ರಲ್ಲಿ ಜೀವನಕ್ಕಾಗಿ ತನ್ನ ಹೆಂಡತಿಯ ಜೊತೆ ಮೆಕ್ಸಿಕೋಗೆ ವಲಸೆ ಹೊದ ಆತ ಕಷ್ಟಪಟ್ಟು ಚನ್ನಾಗಿ ಸಂಪಾದಿಸಿದ. ಸ್ವಂತ ಬುದ್ಧಿವಂತಿಕೆಯಿಂದ ಅಷ್ಟೇನು ಓದದಿದ್ದರೂ ಪ್ರಮುಖ ಪಾನೀಯಗಳನ್ನು ತಯಾರಿಸುವ ಸಂಸ್ಥೆಯಲ್ಲಿ ಸಿಇಒ ಸ್ಥಾನದವರೆಗೂ ಬೆಳೆದ. ಅಲ್ಲಿಗೆ ಸುಮ್ಮನಾಗಲಿಲ್ಲ. ಸ್ವಂತ ಬಿಯರ್ ತಯಾರಿಸುವ ಸಂಸ್ಥೆಯನ್ನು ಸ್ಥಾಪಿಸಿ ಸಾವಿರಾರು ಕೋಟಿ ಹಣ ಸಂಪಾದಿಸಿದ. ಇಷ್ಟು ಎತ್ತರಕ್ಕೆ ಬೆಳೆದ ಆಂಟೊನಿ ಫರ್ನಾಂಡೀಸ್ ಹುಟ್ಟಿದ ಊರನ್ನು ಮಾತ್ರ ಮರೆಯಲಿಲ್ಲ. ತನ್ನ ಊರಿಗೆ ರೂ.14 ಸಾವಿರ ಕೋಟಿ ಆಸ್ತಿಯನ್ನು ಬರೆದುಕೊಟ್ಟ. ಇದರಿಂದ ಗ್ರಾಮದ ಒಬ್ಬರಿಗೆ 13.5 ಕೋಟಿ ರೂಪಾಯಿ ಸಿಕ್ಕಿತು.

ನಿನ್ನೆಯವರೆಗೂ ಕಡು ಬಡತನದಲ್ಲಿ ಜೀವನ ಸಾಗಿಸಿದ ಆ ಊರಿನ ಜನರು ಫರ್ನಾಂಡೀಸ್ ತೆಗೆದುಕೊಂಡ ನಿರ್ಧಾರದಿಂದ ಕೋಟ್ಯಾಧಿಶ್ವರರಾದರು. ಈ ವರ್ಷ ಆಗಸ್ಟ್’ನಲ್ಲಿ ಫರ್ನಾಂಡೀಸ್( 99 ) ಇಹಲೋಕ ತ್ಯಜಿಸಿದರು. ಆದರೆ ಆ ಊರಿನ ಜನರ ಹೃದಯದಲ್ಲಿ ಎಂದಿಗೂ ಕೂಡ ಅಮರರಾಗಿರುತ್ತಾರೆ. ಆತನಿಗೆ ಅಲ್ಲಿನ ಜನ ದೇವಾಲಯ ನಿರ್ಮಿಸಿ ನಿತ್ಯ ಪೂಜಿಸುತ್ತಾರೆ.

Comments

comments

Amazon Big Indian Festival
Click to comment

Leave a Reply

Your email address will not be published. Required fields are marked *

Amazon Big Indian Festival
To Top