Achivers

ಸ್ವಂತ PF ಹಣದಲ್ಲಿ ಗ್ರಾಮಕ್ಕೆ ರಸ್ತೆ ನಿರ್ಮಿಸಿದ ಸೈನಿಕ !!!

5-16-1471342440

ನಮ್ಮ ದೇಶದ ರಸ್ತೆಗಳು ಅದರಲ್ಲೂ ಹಳ್ಳಿ ಪ್ರದೇಶದ ರಸ್ತೆಗಳು ಎಷ್ಟು ಕೆಟ್ಟದಾಗಿವೆ ಎಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಂತಹ ಒಂದು ಹಳ್ಳಿಯ ರಸ್ತೆಯನ್ನು ಸ್ವಂತ ಖರ್ಚಿನಲ್ಲಿ ನಿರ್ಮಿಸಿದ್ದಾರೆ ಮಾಜಿ ಸೈನಿಕ ಬಗ್ಗೂರಾಮ್ ಮೌರ್ಯ.

ವಾರಣಾಸಿಯ ಹೀರಾಂಪೂರ್ ಗ್ರಾಮದ ಬಗ್ಗೂರಾಮ್ 1978ರಲ್ಲಿ ಸೈನ್ಯಕ್ಕೆ ಸೇರಿದರು. 2012 ಲೆಫ್ಟಿನೆಂಟ್ ಹುದ್ದೆಯಿಂದ ನಿವೃತ್ತರಾದರು. ಸೇವೆಯಲ್ಲಿದ್ದಾಗ ಆತ 2002ರಲ್ಲಿ ಅಂದಿನ ರಾಷ್ಟ್ರಪತಿ ಅಬ್ದುಲ್ ಕಾಲಮ್ ಹಾಗೂ 2012 ರಲ್ಲಿ ಪ್ರಣಬ್ ಮುಖರ್ಜಿ ಅವರಿಂದ ಮೆಡಲ್ ಕೂಡ ಪಡೆದಿದ್ದಾರೆ. ಕೆಲಸದಿಂದ ನಿವೃತ್ತಿಯಾದ ನಂತರ ಬಂದ 4 ಲಕ್ಷ ರೂಪಾಯಿ PF ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳದೇ ಗ್ರಾಮದ ರಸ್ತೆಯ ದುಸ್ಥಿತಿ ನೋಡಿ ರಸ್ತೆಯ ನಿರ್ಮಾಣಕ್ಕೆ ಬಳಸಲು ತೀರ್ಮಾನಿಸಿದರು. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ತನ್ನ ಗ್ರಾಮದ ಜನರ ಮುಂದೆ ಈ ವಿಷಯವನ್ನು ತಿಳಿಸಿದರು.

ರಸ್ತೆ ನಿರ್ಮಾಣದ ಕಾರ್ಯ ಬಹುತೇಕ ಮುಕ್ತಾಯದ ಹಂತ ತಲುಪಿದ್ದರೂ, ಹಣದ ಕೊರತೆಯಿಂದ ಅಲ್ಪಪ್ರಮಾಣದ ಕೆಲಸ ಹಾಗೆ ಉಳಿದುಕೊಂಡಿದೆ. ಅಲ್ಲಿಗೆ ಆತ ಸುಮ್ಮನಾಗಲಿಲ್ಲ. ಹೇಗಾದರೂ ಮಾಡಿ ರಸ್ತೆ ಕಾರ್ಯ ಪೂರ್ಣಗೊಳಿಸಬೇಕೆಂದುಕೊಂಡು ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾನೆ. ಆತನ ಮನವಿಗೆ ಸರ್ಕಾರ ಸ್ಪಂದಿಸುತೋ ಇಲ್ಲವೋ ಗೊತ್ತಿಲ್ಲ ಆದರೆ ವೃದ್ಧಪ್ಯದಲ್ಲಿ ಉಪಯೋಗವಾಗಲೆಂದು ನೀಡಿದ PF ಹಣವನ್ನು ಹೀಗೆ ಸಮಾಜಕ್ಕೆ ನೀಡಿದ ಬಗ್ಗೂರಾಮ್ ಮೌರ್ಯರ ಕಾರ್ಯ ನಿಜಕ್ಕೂ ಶ್ಲಾಘನೀಯ.

Comments

comments

Click to comment

Leave a Reply

To Top