Editor's Pick

ಈ ಯುವತಿಗೆ ಪಾತ್ರೆ ತೊಳೆಯುವ ಸ್ಪಾಂಜ್ ತಿನ್ನುವ ಅಭ್ಯಾಸವಿದೆಯಂತೆ

 

ಕೆಲವರಿಗೆ ತಿನ್ನಬಾರದನ್ನು ತಿನ್ನುವ ಚಟವಿರುತ್ತದೆ. ಮಣ್ಣು, ಕಲ್ಲಿನಂತಹ ವಸ್ತುಗಳನ್ನು ತಿನ್ನುವವರ ಬಗ್ಗೆ ನೀವು ಕೇಳಿರುತ್ತಿರಿ. ಆದರೆ ಬ್ರಿಟನ್‌ನ 23 ವರ್ಷದ ಎಮ್ಮಾ ಥಾಂಪ್ಸನ್‌ ಎಂಬ ಯುವತಿ ಪಾತ್ರೆ ತೊಳೆಯುವ ಸ್ಪಾಂಜ್‌ ತಿನ್ನವ ಚಟ ಬೆಳೆಸಿಕೊಂಡಿದ್ದಾರೆ. ಆ್ಯಪಲ್‌ ಪರಿಮಳದ ಸೋಪು ನೀರಿನಲ್ಲಿ ಸ್ಪಾಂಜನ್ನು ಅದ್ದಿ ಅವರು ತಿನ್ನುತ್ತಾರೆ.

ಎರಡು ವರ್ಷ ಹಿಂದೆ ಪಾತ್ರೆ ತೊಳೆಯುವಾಗ ಒಮ್ಮೆ ಅವರು ಸ್ಪಾಂಜ್‌ನ ರುಚಿ ನೋಡಿದ್ದರು. ಈಗ ಅದು ಅವರಿಗೆ ಚಟವಾಗಿ ಅಂಟಿಕೊಂಡಿದೆ. ‘ಉಪಾಹಾರಕ್ಕೆ ಚಹಾ, ಚಿಪ್ಸ್‌ ಜೊತೆಗೆ ಸ್ಪಾಂಜ್‌ ನೀಡುವಿರಾ’ ಎಂದು ಗೆಳೆಯರು ತಮಾಷೆ ಮಾಡುತ್ತಾರೆ ಎಂದೂ ಎಮ್ಮಾ ಹೇಳಿಕೊಂಡಿದ್ದಾರೆ.

ಆ್ಯಪಲ್‌ ಪರಿಮಳದ ಸೋಪು ನೀರಿನಲ್ಲಿ ಸ್ಪಾಂಜನ್ನು ನೆನೆ ಹಾಕುವ ಅವರು ಮರುದಿನ ಅದನ್ನು ತಿನ್ನುತ್ತಾರೆ. ದಿನಕ್ಕೆ 2ರಿಂದ 20 ಸ್ಪಾಂಜ್‌ ಅವರ ಹೊಟ್ಟೆ ಸೇರಿರುತ್ತದೆ. ಈ ಕುರಿತು ಆಕೆಯನ್ನು ಪ್ರಶ್ನಿಸಿದರೆ, ” ಎರಡು ವರ್ಷಗಳ ಹಿಂದೆ ಪಾತ್ರೆ ತೊಳೆಯುವಾಗ ಯಾಕೋ ಸ್ಪಾಂಜ್‌ನ ತಿನ್ನಬೇಕೆನಿಸಿತು. ಅದೀಗ ಚಟವಾಗಿ ಬಿಟ್ಟಿದೆ. ನನ್ನ ಕೆಲ ಗೆಳೆಯರು ಮದ್ಯ ಸೇವಿಸುತ್ತಾರೆ. ಇನ್ನೂ ಕೆಲವರಿಗೆ ಸಿಗರೇಟ್‌ ಚಟವಿದೆ. ಆದರೆ ನಾನು ಅಂತಹ ಚಟಗಳನ್ನು ಅಂಟಿಸಿಕೊಂಡಿಲ್ಲ.  ಹೀಗಾಗಿ  ಪ್ರತಿದಿನ ಸ್ಪಾಂಜ್‌ ತಿನ್ನುತ್ತೇನೆ”, ಎನ್ನುತ್ತಾಳೆ.

ಕೆಲವೊಂದು ಬಾರಿ ಕತ್ತರಿಸಿದ ಸ್ಪಾಂಜ್‌ನ್ನು ಆಕೆ ಆಫೀಸಿಗೆ ಕೊಂಡೊಯ್ಯುವ ಊಟದ ಡಬ್ಬಿಯಲ್ಲೂ ಕೊಂಡೊಯ್ಯುತ್ತಾಳಂತೆ.

ಆಕೆಯ ಅಭ್ಯಾಸ ವ್ಯಸನವಾಗಿ ಮಾರ್ಪಟ್ಟಿದೆ. ವೈದ್ಯರು ಹೇಳುವ ಪ್ರಕಾರ ಆಕೆ ಪಿಕಾ (ಯಾವುದೇ ಪೌಷ್ಟಿಕಾಂಶವಿರುವ ಆಹಾರಗಳನ್ನು ತಿನ್ನ ಬಯಸುವ ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ ಕಾಯಿಲೆ ) ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ತೆಗೆದುಕೊಂಡರೆ ಗುಣಮುಖಳಾಗುತ್ತಾಳೆ.Comments

comments

Click to comment

Leave a Reply

To Top