Sports

ಟೆಸ್ಟ್ ಸರಣಿ 4-0 ಅಂತರದಲ್ಲಿ ಆಂಗ್ಲರನ್ನು ಬಗ್ಗುಬಡಿದ ಭಾರತ

ಚೆನ್ನೈ: ಆಲ್ ರೌಂಡರ್ ರವೀಂದ್ರ ಅವರ ಜೀವನಶ್ರೇಷ್ಟ ೭ ವಿಕೆಟ್ ನೆರವಿನಿಂದ ಭಾರತ ೫ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ ೭೫ ರನ್ ಗಳ ಭಾರೀ ಅಂತರದಿಂದ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿದು ೫ ಪಂದ್ಯಗಳ ಟೆಸ್ಟ್ ಸರಣಿಯನ್ನು ೫-೦ ಅಂತರದಿಂದ ವಶಪಡಿಸಿಕೊಂಡಿದೆ.
ಮೊದಲ ಇನಿಂಗ್ಸ್ ನಲ್ಲಿ ೨೮೨ ರನ್ ಗಳ ಹಿನ್ನಡೆ ಅನುಭವಿಸಿದ್ದ ಇಂಗ್ಲೆಂಡ್ ಪಂದ್ಯದ ಅಂತಿಮ ದಿನ ೨೦೭ ರನ್ ಗಳಿಗೆ ಆಲೌಟಾಯಿತು.
ವಿಕೆಟ್ ನಷ್ಟವಿಲ್ಲದೇ ೧೨ ರನ್ ಗಳಿಂದ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡ ವಿಕೆಟ್ ಉಳಿಸಿಕೊಳ್ಳುವ ಮೂಲಕ ಡ್ರಾ ಮಾಡಿಕೊಳ್ಳುವ ಅವಕಾಶವನ್ನೂ ಕಳೆದುಕೊಂಡಿತು. ಮೊದಲ ಟೆಸ್ಟ್ ನಲ್ಲಿ ಡ್ರಾ ಮಾಡಿಕೊಂಡಿದ್ದ ಪ್ರವಾಸಿಗರು ಉಳಿದೆಲ್ಲಾ ಪಂದ್ಯವನ್ನೂ ಹೀನಾಯವಾಗಿ ಸೋತಿತು.
ಮೊದಲ ವಿಕೆಟ್ ಗೆ ಕುಕ್ ಮತ್ತು ಜೆನ್ನಿಂಗ್ಸ್ ೧೦೩ ರನ್ ಪೇರಿಸಿದ್ದಾಗ ಪಂದ್ಯ ಡ್ರಾಗೊಳ್ಳಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಈ ಹಂತದಲ್ಲಿ ದಾಳಿಗಿಳಿದ ಜಡೇಜಾ ಸತತ ವಿಕೆಟ್ ಕೆಡವಿ ರೋಚಕ ಜಯ ತಂದುಕೊಟ್ಟರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ ೪೭೭ ಮತ್ತು ೨ನೇ ಇನಿಂಗ್ಸ್ ೨೦೭ (ಜೆನ್ನಿಂಗ್ಸ್ ೫೪, ಕುಕ್ ೪೯, ಮೊಯಿನ್ ಅಲಿ ೪೪, ಜಡೇಜಾ ೪೮/೭)

 

Health Articles written here, are only a guideline. Please consult a doctor before adopting these changes.

ಈ ಅರೋಗ್ಯ ಮಾಹಿತಿಯು ನಿಮಗೆ ಒಂದು ಮಾರ್ಗದರ್ಶಿ ಮಾತ್ರ, ಇದನ್ನು ಪಾಲನೆ ಮಾಡುವ ಮುನ್ನ ವೈದ್ಯರನ್ನು ಸಂಪರ್ಕಿಸಿ..

Comments

comments

Click to comment

Leave a Reply

Your email address will not be published. Required fields are marked *

To Top