cinema

ಶಾರೂಖ್, ಹೃತಿಕ್‍ ಅವರನ್ನೂ ಹಿಂದಿಕ್ಕಿದ ಕಿಚ್ಚ ಸುದೀಪ್!

ಕಿಚ್ಚ ಸುದೀಪ್ ಬಹುಭಾಷಾ ನಟ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಬಾಲಿವುಡ್‍ನ ಶಾರೂಖ್‍ ಖಾನ್, ಹೃತಿಕ್‍ ರೋಷನ್ ಅವರನ್ನೂ ಹಿಂದಿಕ್ಕಿದ ಅಪರೂಪದ ಸಾಧನೆ ಮಾಡಿದ್ದಾರೆ.

ಅಂತಹ ದೊಡ್ಡ ಸಾಧನೆ ಏನು ಅಂದುಕೊಂಡಿರಾ? ಹೌದು, ಸುದೀಪ್ ಅವರ ಬಹು ನಿರೀಕ್ಷಿತ ಚಿತ್ರ `ಹೆಬ್ಬುಲಿ’ ಸುದೀಪ್‍ಗೆ ಈ ಗೌರವ ತಂದುಕೊಟ್ಟಿದೆ.

ಬಹುನಿರೀಕ್ಷಿತ ಚಿತ್ರಗಳು ಯಾವುವು ಎಂದು ಐಎಂಡಿಬಿ ದೇಶಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಹೆಬ್ಬುಲಿ ಚಿತ್ರಕ್ಕೆ ನಂ.1 ಸ್ಥಾನ ನೀಡಿದರೆ, ನಂತರದ ಸ್ಥಾನದಲ್ಲಿ ಶಾರೂಖ್‍ ಅಭಿನಯದ `ರೇಸ್’, ಅಜಯ್ ದೇವಗನ್‍ ಅವರ ಸಿಂಗಮ್‍-3 ಮತ್ತು ಹೃತಿಕ್‍ ರೋಶನ್‍ ಅವರ `ಕಾಬಿಲ್‍’ ಸ್ಥಾನ ಪಡೆದಿವೆ.

ಕಿಚ್ಚ ಸುದೀಪ್‍ ಅಭಿನಯದ ಹೆಬ್ಬುಲಿ ಚಿತ್ರದ ಪರ ಅಭಿಮಾನಿಗಳು ಶೇ. 28.8ರಷ್ಟು ಮತ ನೀಡಿದರೆ, ಶಾರೂಖ್ ‍ಅಭಿನಯದ ರೇಸ್‍ ಪರ ಶೇ.25.7, ಸಿಂಗಂ-3 ಪರ ಶೇ. 21.1, ಕಾಬಿಲ್‍ ಪರ 10.8, ಓಕೆ ಜಾನು ಚಿತ್ರಕ್ಕೆ ಶೇ. 4.4ರಷ್ಟು ಮತಗಳು ದಾಖಲಾಗಿವೆ.

Amazon Big Indian Festival
Amazon Big Indian Festival

Copyright © 2016 TheNewsism

To Top