ಆರೋಗ್ಯ

ಕಿಡ್ನಿ ಆರೋಗ್ಯವಾಗಿರಬೇಕೆಂದು ಬಯಸುತ್ತೀರಾ? ಹಾಗಾದರೆ ಈ ಕೆಳಗಿನ ಸಲಹೆಗಳನ್ನು ತಪ್ಪದೆ ಪಾಲಿಸಿ..!

ಬೇರೆ ರೋಗಗಳಂತೆ ಕಿಡ್ನಿ ಸಮಸ್ಯೆ ಇದ್ದರೆ ಯಾವುದೇ ವಿಶೇಷ ಲಕ್ಷಣಗಳು ಕಾಣಿಸುವುದಿಲ್ಲ. ಕೊನೆಯ ಹಂತ ತಲುಪಿದಾಗ ಮಾತ್ರ ತಮಗೆ ಕಿಡ್ನಿ ಸಮಸ್ಯೆ ಇದೆ ಎಂಬುದು ತಿಳಿದು ಬರುತ್ತದೆ. ಪ್ರಪಂಚದ ಹೆಚ್ಚಿನ ಜನರು ಈ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ತಮ್ಮ ಕಿಡ್ನಿ ಸಮಸ್ಯೆ ಇದೆ ಎಂಬುದು ಮಾತ್ರ ಅವರಿಗೆ ತಿಳಿದೇ ಇರುವುದಿಲ್ಲ. ನಮ್ಮ ದೇಹದ ರಕ್ತವನ್ನು ಶುದ್ಧೀಕರಿಸುವ ಕಿಡ್ನಿ ಆರೋಗ್ಯದ ಬಗ್ಗೆ ಜನಜಾಗೃತಿ ಹೆಚ್ಚಾಗುತ್ತಿದೆ. ಕಿಡ್ನಿಗೆ ಹಾನಿಯಾಗಿ ಕಷ್ಟಪಡುವ ಬದಲು , ಕಿಡ್ನಿಯ ಆರೋಗ್ಯಕ್ಕೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಹೇಗೆ ಎಂದು ಯೋಚಿಸುವುದು ತುಂಬಾ ಒಳ್ಳೆಯದು.

ನಿಮ್ಮ ಕಿಡ್ನಿಯ ಆರೋಗ್ಯ ನೀವು ಬಯಸುವುದಾದರೆ ಈ ಕೆಳಗಿನ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು

ನೀರನ್ನು ಸಾಧ್ಯವಾದಷ್ಟು ಹೆಚ್ಚು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಬೇಕು.

ಮೂತ್ರ ಬಂದರೆ ತಡೆ ಹಿಡಿಯುವ ಪ್ರಯತ್ನ ಮಾಡಬೇಡಿ. ಮೂತ್ರವನ್ನು ತಡೆ ಹಿಡಿಯುವುದರಿಂದ ಕಿಡ್ನಿ ಸ್ಟೋನ್ಸ್ ಬರುವ ಸಾಧ್ಯತೆಗಳಿರುತ್ತದೆ.

ಕಿಡ್ನಿ ಸ್ಟೋನ್ಸ್ ಗಳನ್ನು ಹೋಗಲಾಡಿಸಲು ವಾರದಲ್ಲಿ ಎರಡು ಬಾರಿಯಾದರು ಬ್ಲಾಕ್ ಬೀನ್ಸ್ ತಿನ್ನಬೇಕು.

ಆಂಟಿ ಆಕ್ಸಿಡೆಂಟ್ಸ್ (Antioxidants) ಅಧಿಕವಿರುವ ಹಣ್ಣು-ತರಕಾರಿಗಳನ್ನು ತಿನ್ನಬೇಕು. ಇದರಿಂದಾಗಿ ನಿಮ್ಮ ಕಿಡ್ನಿ ಆರೋಗ್ಯವಾಗಿರುತ್ತದೆ.

ಕೊತ್ತಂಬರಿ ಸೊಪ್ಪು ತಿನ್ನುವುದರಿಂದ ಕಿಡ್ನಿಯಲ್ಲಿರುವ ಕಲ್ಮಶವನ್ನು ಹೊರಹಾಕಿ ಕಿಡ್ನಿಯನ್ನು ಶುದ್ಧ ಮಾಡುತ್ತದೆ. ಅಷ್ಟೇ ಅಲ್ಲ ಕೊತ್ತಂಬರಿ ಸೊಪ್ಪು ಕಣ್ಣಿಗೂ ತುಂಬಾ ಒಳ್ಳೆಯದು.

ಕಿಡ್ನಿ ಸಮಸ್ಯೆ ಇರುವವರು ಕಲ್ಲುಪ್ಪು ತಿನ್ನುವುದು ಒಳ್ಳೆಯದು.

ಅತಿಯಾದ ಖಾರ ಇರುವ ಆಹಾರಗಳನ್ನು ಮಿತಿಯಲ್ಲಿ ತಿನ್ನಿ. ಖಾರ ಕಮ್ಮಿ ತಿನ್ನುವುದು ಕಿಡ್ನಿ ಮತ್ತು ಲಿವರ್ ಗೂ ಒಳ್ಳೆಯದು.

ನಾರಿನಂಶ ಅಧಿಕವಿರುವ ಸೊಪ್ಪನ್ನು ತಿನ್ನುವುದರಿಂದ ಕಿಡ್ನಿಯ ಆರೋಗ್ಯವನ್ನು ಕಾಪಾಡಬಹುದು. ಏಕೆಂದರೆ ನಾರಿನಂಶ ಅಧಿಕವಿರುವ ಸೊಪ್ಪಿನಲ್ಲಿ ವಿಟಮಿನ್ ಕೆ ಮತ್ತು ಕಬ್ಬಿಣದಂಶ ಹೇರಳವಾಗಿರುತ್ತದೆ.

ರೆಡ್ ಕ್ಯಾಬೇಜ್ ಕಿಡ್ನಿ ಸಮಸ್ಯೆಯನ್ನು ತಡೆಯುವಲ್ಲಿ ಸಹಕಾರಿಯಾಗಿದೆ.

ಕಿಡ್ನಿ ಆರೋಗ್ಯ ಹೆಚ್ಚಿಸುವ ವ್ಯಾಯಾಮಗಳು ನಿಮ್ಮ ದೇಹದ ಎಲ್ಲಾ ಅಂಗಗಳಿಗೂ ಅವಶ್ಯಕ. ಆದ್ದರಿಂದ ಪ್ರತೀದಿನ ವ್ಯಾಯಾಮಕ್ಕಾಗಿ ಸಮಯ ಮೀಸಲಿಡಿ.

ಆಲೀವ್ ಎಣ್ಣೆಯನ್ನು ಅಡುಗೆಗೆ ಬಳಸುವುದು ಒಳ್ಳೆಯದು. ಇದರಲ್ಲಿ ಅತಿ ಕಡಿಮೆ ಕೊಬ್ಬಿನಂಶವಿರುವುದರಿಂದ ಕಿಡ್ನಿ ಸಮಸ್ಯೆ ಯನ್ನು ತಡೆಯಲು ಸಹಾಯ ಮಾಡುತ್ತದೆ.

ಕಿಡ್ನಿ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಲು ಎಳ್ಳಿನ ಪಾತ್ರ ದೊಡ್ಡದು.

ಬಾಳೆಹೂ ಅಥವಾ ಬಾಳೆದಿಂಡಿನ ಪಲ್ಯ ಕಿಡ್ನಿಯಲ್ಲಿರುವ ಕಲ್ಲನ್ನು ಹೋಗಲಾಡಿಸುವಲ್ಲಿ ತುಂಬಾ ಪರಿಣಾಮಕಾರಿ.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದವರು ದಾಳಿಂಬೆ ಜ್ಯೂಸ್ ಸೇವಿಸುವುದರಿಂದ ಹೆಚ್ಚಿನ ಉಪಯೋಗ ಪಡೆಯಬಹುದು.

ಒಂದು ಹಿಡಿ ಮೂಲಂಗಿ ಸೊಪ್ಪು ಅಥವ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಕತ್ತರಿಸಿ ಅದನ್ನು ಕುದಿಯುವ ನೀರಲ್ಲಿ ಹಾಕಿ 10 ನಿಮಿಷ ಬೇಯಿಸಿಬೇಕು. ನಂತರ ಸೋಸಿಕೊಂಡು ತಂಪಾದ ಸ್ಥಳ ಅಥವಾ ಫ್ರಿಡ್ಜ್ ನಲ್ಲಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ದಿನವೂ ಒಂದು ಗ್ಲಾಸ್ ಈ ನೀರನ್ನು ಕುಡಿಯುತ್ತಿದ್ದರೆ
ಕಿಡ್ನಿ ಸ್ವಚ್ಛವಾಗುತ್ತದೆ.

ಅಡಿಗೆ ಸೋಡಾ ಮತ್ತು ತಂಪು ಪಾನೀಯದ ಅತಿಯಾದ ಸೇವನೆಯಿಂದ ಕಿಡ್ನಿಯಲ್ಲಿ ಕಲ್ಲುಗಳಾಗುವ ಸಾಧ್ಯತೆಗಳಿರುತ್ತದೆ. ಗಾಢವಾದ ಸೋಡಾದಲ್ಲಿನ ಆಸಿಡ್ ಮತ್ತು ಮಿನರಲ್ ಗಳು ಕಿಡ್ನಿಗೆ ತೊಂದರೆ ನೀಡುತ್ತದೆ. ಪಾನೀಯದಲ್ಲಿರುವ ಫಾಸ್ಫಾರಿಕ್ ಆಸಿಡ್, ಮೂಳೆಗಳಲ್ಲಿರುವ ಕ್ಯಾಲ್ಸಿಯಂ ಹೀರಿಕೊಂಡು. ಆದ್ದರಿಂದ
ಆದಷ್ಟು ಅಡಿಗೆ ಸೋಡಾ ಮತ್ತು ತಂಪು ಪಾನೀಯಗಳಿಂದ ದೂರವಿರಿ.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದವರು ಆದಷ್ಟು ಮದ್ಯಪಾನ ಚಟವನ್ನು ಬಿಡುವುದು ಒಳ್ಳೆಯದು. ಮದ್ಯಪಾನದ ಚಟವಿರುವವರಿಗೆ ಕಿಡ್ನಿ ಬೇಗನೆ ಹಾಳಾಗುತ್ತದೆ.

Amazon Big Indian Festival
Amazon Big Indian Festival

Copyright © 2016 TheNewsism

To Top