Achivers

ಎಲ್ಲಾ ಭಾರತೀಯರಿಗೂ ಹೆಮ್ಮೆ ಪಡುವ ವಿಚಾರ ಚಂದ್ರನ ಅಂಗಳದಲ್ಲಿ ಭಾರತದ ತ್ರಿವರ್ಣ ಧ್ವಜಾರೋಹಣ!!!

ಚಂದ್ರನ ಅಂಗಳದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಾಡಲು ಇನ್ನೊಂದು ವರ್ಷ ಸಾಕು. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ 2018 ಜನವರಿ 26ರ ಗಣರಾಜ್ಯೋತ್ಸವ ದಿನದಂದು ಚಂದ್ರನ ಮೇಲೆ ತ್ರಿವರ್ಣ ಧ್ವಜಾರೋಹಣವಾಗುವ ಮೂಲಕ ಗಗನದಲ್ಲೂ ಭಾರತದ ಕೀರ್ತಿ ಪತಾಕೆ ಹಾರಾಡಲಿದೆ.
ಮಂಗಳನ ಅಂಗಳಕ್ಕೆ ಮೊದಲ ಯತ್ನದಲ್ಲೇ ಯಶಸ್ವಿ ಉಪಗ್ರಹ ಕಳುಹಿಸಿದ್ದ ಭಾರತ, ಇದೀಗ ಮತ್ತೊಂದು ಮೈಲಿಗಲ್ಲು ಸ್ಥಾಪಿಸುವತ್ತ ದಿಟ್ಟಹೆಜ್ಜೆ ಹಾಕಿದೆ.

ಚಂದ್ರನ ಅಂಗಳದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಸಾಧನೆ ಮಾಡಹೊರಟಿರುವುದು ಇಸ್ರೋ ಸಂಸ್ಥೆ ಅಲ್ಲ. ಇಂತಹ ಸಾಹಸ ಮಾಡಲು ಮುಂದಾಗಿರುವುದು ಖಾಸಗಿ ಕಂಪನಿ. ಟೀಂ ಇಂಡಸ್ ಹೆಸರಿನ ಖಾಸಗಿ ಕಂಪನಿ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸುವ ಚಿಂತನೆ ನಡೆಸುವ ಮೂಲಕ ದೊಡ್ಡ ಸುದ್ದಿಯಾಗಿದೆ.

Image result for moon indian flag

Representational Image

ಇದೇ ಮೊದಲ ಬಾರಿಗೆ ಚಂದ್ರನ ಅಂಗಳಕ್ಕೆ ನೌಕೆ ಇಳಿಸಿ ಅಲ್ಲಿ ರಾಷ್ಟ್ರಧ್ವಜ ಹಾರಿಸುವ ಬಗ್ಗೆ ಸಿದ್ಧತೆ ಕೈಗೊಂಡಿದೆ. ಇಸ್ರೋ ಸಂಸ್ಥೆ ಇಂತಹ ಸಾಹಸಕ್ಕೆ ಕೈಹಾಕದಿದ್ದರೂ, ಟೀಂ ಇಂಡಸ್ ಖಾಸಗಿ ಕಂಪನಿಯ ಸಾಹಸಕ್ಕೆ ಒತ್ತಾಸೆಯಾಗಿ ನಿಂತಿದೆ. ಈ ಸಾಹಸಕ್ಕೆ ಗೂಗಲ್ ಲೂನಾರ್ ಎಕ್ಸ್‍ಪ್ರೈಜ್ ಎಂದು ಹೆಸರಿಡಲಾಗಿದೆ.

ಈಗಾಗಲೇ ಈ ಕುರಿತಂತೆ ಸಿದ್ಧತೆಗಳು ನಡೆದಿದ್ದು, ಚಂದ್ರನ ಅಂಗಳದ ಮೇಲೆ ಹಾರಾಡುವ ರಾಷ್ಟ್ರಧ್ವಜ ಹೇಗಿರುತ್ತದೆ ಎಂಬ ಬಗ್ಗೆ ಅನಿಮೇಟೆಡ್ ಚಿತ್ರವನ್ನು ವಿನ್ಯಾಸಗೊಳಿಸಲಾಗಿದೆ.

ಹೆಮ್ಮೆಯ ಸುದ್ದಿ ಎಂದರೆ, ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಸಾಧನೆ ಮಾಡಿರುವುದು ಬೆಂಗಳೂರು ಮೂಲದ ಯುವ ವಿಜ್ಞಾನಿಗಳು. ಹೇಗಾದರೂ ಮಾಡಿ ಚಂದ್ರನ ಮೇಲೆ ರಾಷ್ಟ್ರಧ್ವಜ ಹಾರಿಸುವ ಕುರಿತ 2010 ರಿಂದ 100 ಮಂದಿ ವಿಜ್ಞಾನಿಗಳ ತಂಡ ಹಗಲಿರುಳೂ ಶ್ರಮಿಸುತ್ತಿದೆ. ಉಪಗ್ರಹ ನಿರ್ಮಾಣ ಕಾರ್ಯ ಭರದಿಂದ ನಡೆದಿದೆ. ಇದಕ್ಕಾಗಿ ಟೀಂ ಇಂಡಸ್ ತಂಡ ಈಗಾಗಲೇ ಚಂದ್ರನ ಮೇಲೆ ನಡೆಯುವ `ರೋವರ್ ಅನ್ನು ಸಿದ್ಧಪಡಿಸಿದೆ.
ಇಸ್ರೋದ ಪಿಎಸ್‍ಎಲ್‍ವಿ ಉಡ್ಡಯನ ನೌಕೆಯ ಮೂಲಕವೇ ಈ ಉಪಗ್ರಹವನ್ನು ನಭಾಕ್ಕೆ ಕಳಿಸಲಿದ್ದಾರೆ. 2017ರ ಡಿಸೆಂಬರ್‍ನಲ್ಲಿ ಎಕ್ಸ್‍ಪ್ರೈಜ್ ಉಪಗ್ರಹವನ್ನು ಚಂದ್ರನಲ್ಲಿಗೆ ಕಳುಹಿಸಲಾಗುವುದು. ಬಳಿಕ ರೋವರ್ ಚಂದ್ರನ ಮೇಲೆ ಇಳಿಯಲಿದೆ. 2018ರ ಜ. 26ರ ಗಣರಾಜ್ಯೋತ್ಸವ ದಿನದಂದು ರೋವರ್ ಮೂಲಕ ವಿಜ್ಞಾನಿಗಳು ರಾಷ್ಟ್ರ ಧ್ವಜಾರೋಹಣ ಮಾಡಲಿದ್ದಾರೆ.

Image result for PSLVlike our Facebook page @ fb.com/thenewsism

Comments

comments

Click to comment

Leave a Reply

To Top