Awareness

ಗ್ರಾಹಕರೇ ಎಚ್ಚರ..! ಆರೋಗ್ಯಕ್ಕೆ ಮಾರಕವಾಗಿ ಬರುತ್ತಿದೆ ಪ್ಲಾಸ್ಟಿಕ್‌ ಅಕ್ಕಿ..!

ನಕಲಿ ವಸ್ತುಗಳ ನಿರ್ಮಾಣದಲ್ಲಿ ಕುಖ್ಯಾತಿ ಪಡೆದಿರುವ ಚೀನಾ ಜನರನ್ನು ಮೋಸಗೊಳಿಸುವುದರಲ್ಲಿ ಮೀರಿಸುವವರಿಲ್ಲ. ಆ ದೇಶದಲ್ಲಿ ತಯಾರಿಸುವ ನಕಲಿ ವಸ್ತುಗಳು ಅಷ್ಟಿಷ್ಟಲ್ಲ. ಎಲೆಕ್ಟ್ರಾನಿಕ್ ವಸ್ತುಗಳಿಂದ ಮೊದಲ್ಗೊಂಡು ತಿನ್ನುವ ಆಹಾರ ಪದಾರ್ಥಗಳ ವರೆಗೆ ಎಲ್ಲವನ್ನೂ ನಕಲಿ ಮಾಡಿ ಪ್ರಪಂಚದಾದ್ಯಂತ ಮಾರುಕಟ್ಟೆಗಳಿಗೆ ಬಿಡುಗಡೆಗೊಳಿಸಿದ್ದಾರೆ. ಮೊನ್ನೆ ಯವರೆಗೂ ನಕಲಿ ಕ್ಯಾಬೇಜ್, ನಂತರ ಕೋಳಿ ಮೊಟ್ಟೆ ಈಗ ನಕಲಿ ಅಕ್ಕಿya ಹಾವಳಿ..

ಈಗ ಆರೋಗ್ಯಕ್ಕೆ ಮಾರಕವಾಗಿರುವ ‘ಪ್ಲಾಸ್ಟಿಕ್‌ ಅಕ್ಕಿ’ಯನ್ನು ಭಾರತ ಸೇರಿದಂತೆ ಹಲವಾರು ದೇಶಗಳಿಗೆ ಅಕ್ರಮವಾಗಿ ಪೂರೈಸುತ್ತಿದೆ ಎಂಬ ಆತಂಕಕಾರಿ ಮಾಹಿತಿ ಬಯಲಾಗಿದೆ. ಹಲವು ದಿನಗಳ ಹಿಂದೆ ಕಣ್ಣೂರು ಜಿಲ್ಲೆಯಲ್ಲಿ `ನಕಲಿ ಅಕ್ಕಿ’ಯನ್ನು ಪತ್ತೆ ಹಚ್ಚಲಾಗಿತ್ತು. ಇದನ್ನು ಬೇಯಿಸಿದಾಗ ಕರಗಿ ಪ್ಲಾಸ್ಟಿಕ್ ರೂಪ ಪಡೆದಾಗಲೇ ಇದು ನಕಲಿ ಅಕ್ಕಿಯೆಂದು ಪತ್ತೆ ಹಚ್ಚಲು ಸಾಧ್ಯವಾದದ್ದು! ಹಾಗಾದರೆ ನಾವು ಮೊದಲು ತಿಳಿಯಬೇಕಾದ ವಿಷಯ ವೇನೆಂದರೆ ಪ್ಲಾಸ್ಟಿಕ್ (ನಕಲಿ )ಅಕ್ಕಿ, ಅಸಲಿ(ನೈಜ) ಅಕ್ಕಿಯನ್ನು ಗುರುತಿಸುವುದು ಹೇಗೆಂದು.

ಮೊದಲು ಪ್ಲಾಸ್ಟಿಕ್ (ನಕಲಿ )ಅಕ್ಕಿ ಹೇಗಿರುತ್ತೆ ಎಂದು ತಿಳಿದುಕೊಳ್ಳೋಣ. ನೋಡಲು ಅಸಲಿ ಅಕ್ಕಿಯನ್ನು ಹೋಲುವ ಅಕ್ಕಿ ಆಲೂಗಡ್ಡೆ, ಗೆಣಸು, ಪ್ಲಾಸ್ಟಿಕ್ ಹಾಗು ಇತರೆ ಕೃತಕ ರಾಸಾಯನಿಕಗಳ ಮಿಶ್ರಣದೊಂದಿಗೆ , ವಿಶೇಷ ಯಂತ್ರಗಳ ಮೂಲಕ ಪ್ಲಾಸ್ಟಿಕ್ ಅಕ್ಕಿಯನ್ನು ತಯಾರಿಸುತ್ತಾರೆ.  ಈ ರೀತಿಯಾಗಿ ತಯಾರಿಸಲಾಗುವ ಅಕ್ಕಿಗೆ ಚೆನ್ನಾಗಿ ಪಾಲಿಷ್ ಮಾಡಿ ಅಸಲೀ(ನೈಜ)ಅಕ್ಕಿಯಂತೆ ಕಾಣುವ ಹಾಗೆ ಮತ್ತು  ನೈಜ ಅಕ್ಕಿಯ ವಾಸನೆಯನ್ನು ಹೋಲುವಂತೆ ರಾಸಾಯನಿಕ ಗಳನ್ನು ಸಿಂಪಡಿಸುತ್ತಾರೆ. ಹೀಗೆ ತಯಾರಾದ ನಕಲಿ ಅಕ್ಕಿಯನ್ನು ಅಸಲಿ ಅಕ್ಕಿಯೊಂದಿಗೆ ಮಿಶ್ರಮಾಡಿ ಮಾರಾಟಮಾಡುತ್ತಿದ್ದಾರೆ. ಈಗಾಗಲೇ ಚೀನಾದಿಂದ ಪ್ಲಾಸ್ಟಿಕ್‌ ಅಕ್ಕಿ ದೇಶಕ್ಕೆ ಸರಬರಾಜಾಗುತ್ತಿರುವ ಬಗ್ಗೆ ಫಿಲಿಪ್ಪೀನ್ಸ್‌ ಆತಂಕಗೊಂಡಿದ್ದು ಈ ಕೃತ್ಯವೆಸಗುವರಿಗೆ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ.

ಅಸಲಿ ಅಕ್ಕಿಯಂತೆ ಕಂಡರೂ ಕೆಲವು ಕ್ರಮಗಳಿಂದ ನಕಲಿ ಅಕ್ಕಿಯನ್ನು ಗುರುತಿಸಬಹುದು.

  • ಅಕ್ಕಿಯನ್ನು ತಣ್ಣಗಿನ ನೀರಿಗೆ ಹಾಕಿದಾಗ ನೀರಿನ ಮೇಲೆ ಅಕ್ಕಿ ತೇಲಿದರೆ ಅದು ನಕಲಿ ಅಕ್ಕಿಯೆಂದೂ ಮತ್ತು ನೀರಿನಲ್ಲಿ ಮುಳುಗಿದರೆ ಅದು ಅಸಲಿ ಅಕ್ಕಿ ಎಂದು ತಿಳಿಯುತ್ತದೆ.
  • ಬೆಂಕಿಕಡ್ಡಿಯನ್ನು ಗೀರಿ ಅಕ್ಕಿಗೆ ಮುಟ್ಟಿಸಿದರೆ, ಅಕ್ಕಿ ನಕಲಿಯಾಗಿದ್ದರೆ ಉರಿದು ದುರ್ವಾಸನೆ ಬರುತ್ತದೆ.
  • ಅಕ್ಕಿಯನ್ನು ಬೇಯಿಸಿದಾಗ ಮೆತ್ತಗಾಗದೆ ಗಟ್ಟಿಯಾಗಿದ್ದರೆ ಅದು ನಕಲಿ(ಕೃತಕ) ಅಕ್ಕಿಯೆಂದು ತಿಳಿಯಬೇಕು.
  • ಅಕ್ಕಿಯನ್ನು ಬೇಯಿಸುವಾಗ, ನೀರಿನ ಮೇಲೆ ತೆಳುವಾದ ಪದರ ಏರ್ಪಟ್ಟು ಛಿದ್ರವಾಗದೆ ಇದ್ದರೆ ಅದು ನಕಲಿ ಅಕ್ಕಿಯೆಂದು ತಿಳಿಯ ಬೇಕು.
  • ಅಸಲಿ ಅಕ್ಕಿಯ ಅನ್ನ ಮಾಡಿದಾಗ ಒಂದು ದಿನದ ಒಳಗೆ ಅನ್ನ ಹಳಸುತ್ತದೆ.
  • ಒಂದು ಹೆಂಚಿನ ಮೇಲೆ ಸ್ವಲ್ಪ ಎಣ್ಣೆ ಹಾಕಿ ಕಾದನಂತರ ಅಕ್ಕಿಯನ್ನು ಹಾಕಬೇಕು.

ಗ್ರಾಹಕರೇ ಇಂತಹ ಚೀನೀ ಪ್ಲಾಸ್ಟಿಕ್‌ ಅಕ್ಕಿಗಳ ಹಾವಳಿಯಿಂದ ಜಾಗರುಕರಾಗಿರಿ ಮತ್ತು ತಮ್ಮಆರೋಗ್ಯವನ್ನು ರಕ್ಷಿಸಿಕೊಳ್ಳಿ.

Comments

comments

Amazon Big Indian Festival
Click to comment

Leave a Reply

Your email address will not be published. Required fields are marked *

Amazon Big Indian Festival
To Top