cinema

ನಾವು ನೋಡಿದ ಸಿನಿಮಾ : ಕಿರಿಕ್ Party

theNewsism rating:

four_half-stars_0-1024x238

ವರ್ಷದ ಕೊನೆಯಲ್ಲಿ ಬಂದ ಕನ್ನಡದ ಸಿನಿಮಾ ಕಿರಿಕ್ ಪಾರ್ಟಿ ರಾಜ್ಯಾದ್ಯಂತ ಗಲ್ಲಾ ಪೆಟ್ಟಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳ ನಿದ್ದೆ ಕೆಡಿಸಿ ಮತ್ತೆ ಮತ್ತೆ ಟಾಕಿಸಿನತ್ತರ ಬರುವಂತೆ ಮಾಡುತ್ತಿದೆ .

ಅಸಲಿಗೆ ಸಿನಿಮಾದ ಕಥೆ ಏನು ಎಂದು ತಿಳಿದುಕೊಳ್ಳಲು ಕಿರಿಕ್ ಮಾಡಿಕೊಂಡು ಹೋಗುವ ಪ್ರೇಕ್ಷಕನಿಗೆ ಸಿಗುವ ಹೊಸ ಗೆಳೆಯನೇ ಸಿನಿಮಾದ ಸ್ಕ್ರೀನ್ ಪ್ಲೇ . ನವ ನಿರ್ದೇಶಕ ರೀಶಬ್ ಶೆಟ್ಟಿಯವರ ನಿರ್ದೇಶನದಲ್ಲಿ ಮತ್ತು ರಕ್ಷಿತ್ ಶೆಟ್ಟಿಯವರ ಸ್ಕ್ರೀನ್ ಪ್ಲೇ ಜುಗಲ್ಬಂದಿಯಲ್ಲಿ ಬಂದಿರುವಂತ ಕಿರಿಕ್ ಪಾರ್ಟಿ ಎಲ್ಲ ವರ್ಗದ ಪ್ರೇಕ್ಷಕನಿಗೆ ಹಿಡಿಸುತ್ತದೆ ಎಂದು ಹೇಳಿದರೆ ತಪ್ಪಿನ ಮಾತೇ ಇಲ್ಲ . ಸಿನಿಮಾದ ಕಥೆ ಸಿಂಪಲ್ ಸ್ಟಾರ್ರಂತೆ ಸಿಂಪಲ್ ಆಗಿದ್ದು , engineering ಓದುವ ಹುಡುಗರ ಮೋಜು – ಮಸ್ತಿ , ಕಿರಿಕ್ , ಪ್ರೀತಿ – ಪ್ರೇಮ ಮತ್ತು ಗೆಳೆತನದ emotions ಸಾರುವ ಕಥೆಯೇ ಕಿರಿಕ್ ಪಾರ್ಟಿಯದ್ದು

ಸಿನಿಮಾದ first half ರಕ್ಷಿತ್ ಮತ್ತು ದೇವಲೋಕದ ಸುಂದರಿ rashmikaರವರ ತುಂಟಾಟದ ಕಾಮಿಡಿ track ಸಕ್ಕತ್ ಸ್ಪೀಡಿನಲ್ಲಿ ಪ್ಲೇ ಆಗಿ intervel ನ ಮುನ್ನ ಕೊನೆಯ ನಿಮಿಷಗಳಲ್ಲಿ ಹೊಸ ತಿರುವಿನೊಂದಿಗೆ ಹಿರೋನ ಇನ್ನೊಂದು ಇಮೇಜ್ ಗೆ ಕರೆತರುತ್ತದೆ . Second – halfನಲ್ಲಿ ಬರುವ ಆರ್ಯ ( samyukta Hegde) ಎಂಬ character ಸಿನಿಮಾಗೆ ಇನ್ನೊಂದು ರೂಪ ಕೊಡುತ್ತದೆ, ghouse ಎಂಬ ಹೆಸರಿನ ಪಾತ್ರದಲ್ಲಿ ನಟಿಸಿರುವ achuyth Rao ಎಂದಿನಂತೆ first class ! ಹೊಸ ಹುಡ್ಗರನ್ನು ಹಾಕಿಕೊಂಡು ನಟನೆ ಮಾಡಿಸಿದರು , ಅವರ ನಟನೆಯನ್ನು ಕಂಡಾಗ 100 ಚಿತ್ರದಲ್ಲಿ ನಿಟಿಸಿದ maturity ಆ ನಟನೆಯಲ್ಲಿ ಕಾಣುತ್ತದೆ. Ajaneesh looknath ಸಂಗೀತ ಸಿನಿಮಾಕಿದ್ದು ಎಲ್ಲ ಹಾಡುಗಳು ಚೆನ್ನಾಗಿ ಮೂಡಿಬಂದಿದೆ. ಸಂಬಾಷಣೆ , ಛಾಯಾಗ್ರಹಣ supero superu ! ಒಟ್ಟಿನಲ್ಲಿ ಕಿರಿಕ್ ಪಾರ್ಟಿ ಕಿರಿಕಿರಿ ಮಾಡದೆ ಕನ್ನಡ bloclbuster ಸಿನಿಮಾಗಳ ಪಾಲಿಗೆ ಸೇರೋ ಎಲ್ಲ ಲಕ್ಷಣವು ಕಾಣುತ್ತಿದೆ. ಎಲ್ಲರು ನಿಮ್ಮ ಕಾಲೇಜು ದಿನಗಳನ್ನು ಮೇಲಕು ಹಾಕಲು ಒಮ್ಮೆ ಕಿರಿಕ್ ಪಾರ್ಟಿ ವೀಕ್ಷಿಸಿ ಪಾರ್ಟಿ ಮಾಡಿಬಿಡಿ .

Health Articles written here, are only a guideline. Please consult a doctor before adopting these changes.

ಈ ಅರೋಗ್ಯ ಮಾಹಿತಿಯು ನಿಮಗೆ ಒಂದು ಮಾರ್ಗದರ್ಶಿ ಮಾತ್ರ, ಇದನ್ನು ಪಾಲನೆ ಮಾಡುವ ಮುನ್ನ ವೈದ್ಯರನ್ನು ಸಂಪರ್ಕಿಸಿ..

Comments

comments

Click to comment

Leave a Reply

Your email address will not be published. Required fields are marked *

To Top