News

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ ಶೂ ಎಸೆತ

ಭಾನುವಾರ ನಡೆದ ರ್ಯಾಲಿಯಲ್ಲಿ ನೋಟು ರದ್ದತಿ ನಿರ್ಧಾರವನ್ನು ಖಂಡಿಸಿ ಮಾತನಾಡುತ್ತಿದ್ದಾಗ ವಿಕಾಸ್ ಎಂಬ ಹೆಸರಿನ ವ್ಯಕ್ತಿಯೊಬ್ಬ ಕೇಜ್ರಿವಾಲ್‍ರತ್ತ ಶೂ ಎಸೆದಿದ್ದಾರೆ.

ಹರ್ಯಾಣದ ರೋಹ್ಟಕ್‍ನಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ ವ್ಯಕ್ತಿಯೊಬ್ಬರು ಶೂ ಎಸೆದಿದ್ದಾರೆ.  ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹರ್ಯಾಣದ ದಾದ್ರಿ ನಿವಾಸಿಯಾಗಿದ್ದಾರೆ ವಿಕಾಸ್. ಸಟ್ಲೇಜ್- ಯಮುನಾ ಕಾಲುವೆ ವಿವಾದದ ಬಗ್ಗೆ ಕೇಜ್ರವಾಲ್ ಅವರ ನಿಲುವುಗಳನ್ನು ವಿರೋಧಿಸಿ ವಿಕಾಸ್ ಶೂ ಎಸೆದಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಕಾಸ್ ಎಸೆದ ಶೂ ವೇದಿಕೆಗೆ ತಾಕಿ, ಕೇಜ್ರಿವಾಲ್ ಅವರ ಮೈಗೆ ತಾಗಿತ್ತು. ಆದಾಗ್ಯೂ, ಶೂ ಎಸೆದ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದೆ.

ತಮ್ಮ ಮೇಲೆ ಶೂ ಎಸೆದಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಿಗರು ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

untitled

ಮೋದಿ ಒಬ್ಬ ಹೇಡಿ. ಅವರ ಬೆಂಬಲಿಗರು ಇಂದು ನನ್ನ ಮೇಲೆ ಶೂ ಎಸೆದಿದ್ದಾರೆ. ನಾವೂ ಇದೇ ರೀತಿ ಮಾಡಬಹುದು. ಆದರೆ ನಮ್ಮ ಮೌಲ್ಯಗಳು ಇಂಥಾ ಕೃತ್ಯಗಳನ್ನು ಮಾಡಲು ಬಿಡುವುದಿಲ್ಲ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

untitled-png1

ಸಿಬಿಐ ದಾಳಿ ನಡೆದರೂ ಶೂ ಎಸೆದರೂ ನೋಟು ರದ್ದತಿಯ ಹಿಂದಿರುವ ಸತ್ಯ ಮತ್ತು ಸಹಾರಾ ಬಿರ್ಲಾ ಲಂಚ ಪ್ರಕರಣದ ಹಿಂದಿರುವ ನಿಜ ಸಂಗತಿಯನ್ನು ನಾನು ಬಹಿರಂಗ ಪಡಿಸುತ್ತೇನೆ ಎಂದು ಕೇಜ್ರಿವಾಲ್ ಗುಡುಗಿದ್ದಾರೆ.



Comments

comments

Click to comment

Leave a Reply

To Top