Travel

ಅಂದದ ಅಂಡಮಾನ್

ಅಂದದ ಅಂಡಮಾನ್

ಅಂಡಮಾನ್ ದ್ವೀಪ ಹಲವು ಸಣ್ಣ ಸಣ್ಣ ದ್ವೀಪ ಸಮೂಹವನ್ನೊಳಗೊಂಡಿದೆ. ಶಾಂತ ಉಷ್ಣವಲಯ, ಹವಳದ ದಿಬ್ಬಗಳು,

ಅಂಡಮಾನ್ ತನ್ನ ಸ್ವಾಭಾವಿಕ ಸೌಂದರ್ಯದಿಂದ ವಿಶ್ವದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಭಾರತದ ಸುಂದರ ಕೇಂದ್ರಾಡಳಿತ ಪ್ರೇಮಿಗಳು. ಬೀಚ್ ಲವರ್ಸ್ ಅಡ್ವೆಂಚರ್ ಟೂರ್ ಇಷ್ಟಪಡುವವರು ಇಲ್ಲಿಗೆ ಪ್ರವಾಸ ಕೈಗೊಳ್ಳಬಹುದು. ಇಲ್ಲಿಗೆ ಬಂದರೆ ಬೀಚ್ ನಲ್ಲಿ ನೀರಾಟವಾಡಬಹುದು, ಇಲ್ಲವೇ ಪ್ರಕೃತಿ ಸೊಬಗನ್ನು ಸವಿಯಬಹುದು, ಕಡಲ ತೀರದಲ್ಲಿ ಸಾಹಸ ಕ್ರೀಡೆಗಳನ್ನು, ವಾಟರ್ ಸ್ಪೋರ್ಟ್ಸ್, ಸ್ಕೂಬಾ ಡೈವಿಂಗ್, ಡೀಪ್ ಸೀ ಫಿಶಿಂಗ್ ಮಾಡಬಹುದು. ಹಿತವಾಗಿ ಬೀಸುವ ತಂಗಾಳಿ, ತಾಳಿ ಮರಗಳ ತಂಪಿನಲ್ಲಿ ವಿಶ್ರಾಂತಿ ಪಡೆದುಕೊಳ್ಳಬಹುದು.

1

ಅಂಡಮಾನ್ ಹತ್ತಿರದಲ್ಲೇ ಮ್ಯೂಸಿಯಂ, ಗಾಂಧಿಪಾರ್ಕ್, ಬಂಜರು ದ್ವೀಪ, ಕಾರ್ಬಿನ್ ಕೇವ್, ಕಟ್ ಬೆರಿ ಬೇ ಬೀಚ್, ಸುಣ್ಣದ ಕಲ್ಲಿನ ಗುಹೆಗಳು, ರಾಸ್ ಐಲ್ಯಾಂಡ್, ವೈಪರ್ ಐಲ್ಯಾಂಡ್ ಇವೇ ಮೊದಲಾದ ಪ್ರವಾಸಿ ಆಕರ್ಷಣೆಗಳನ್ನು ನೋಡಬಹುದು.

3

ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯಾನದಲ್ಲಿ ರಸವತ್ತಾದ ಪಪ್ಪಾಯ, ಫೈನಾಪಲ್ ಹಾಗೂ ಅಲ್ಲಿನ ಸ್ಥಳೀಯ ಹಣ್ಣುಗಳನ್ನು ಸವಿಯಬಹುದು.

mahatma-gandhi-marine

ಅಂಡಮಾನ್ ಪ್ರಮುಖ ಹನಿಮೂನ್ ಡೆಸಿಮೂನ್ ಡೆಸ್ಟಿನೇಷನ್ ಎಂದು ಕರೆಸಿಕೊಂಡಿದೆ. ಇಲ್ಲಿನ ಅದ್ಭುತ ಸೌಂದರ್ಯ ಪ್ರೀತಿಯ ಉನ್ಮಾದವನ್ನು ಹೆಚ್ಚಿಸುತ್ತದೆ. ಇಲ್ಲಿಗೆ ವಿವಿಧ ಬಗೆಯ ಹಾಲಿಡೇ ಪ್ಯಾಕೇಜ್ ಲಭ್ಯವಿದ್ದು, ಪ್ರವಾಸಿಗರು ಟ್ರಾವೆಲ್ ಏಜೆನ್ಸಿ ಮೂಲಕ ಪ್ರವಾಸ ಕೈಗೊಳ್ಳಬಹುದು. ಬೋರ್ಡಿಂಗ್, ಲಾಡ್ಜಿಂಗ್ ಒಳಗೊಂಡಿರುವ ಟ್ರಾವೆಲ್ ಪ್ಯಾಕೇಜ್ ಲಭ್ಯ. ಭಾರತಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೂ ಮೊದಲು, ಸ್ವಾತಂತ್ರ್ಯ ಹೋರಾಟಗಾರರನ್ನು ಇಲ್ಲಿರುವ ಸೆಲ್ಯುಲರ್ ಜೈಲಿನಲ್ಲಿ ಬಂಧಿಸಿದ್ದರಂತೆ. ಈ ಜೈಲು ಈಗ ಮ್ಯೂಸಿಯಂ ಆಗಿದೆ. ಭೇಟಿ ನೀಡಲು ಸೂಕ್ತ ಕಾಲ: ಜನವರಿಯಿಂದ – ಏಪ್ರಿಲ್.

andaman-chalet

ಹತ್ತಿರದ ಆಕರ್ಷಣೆಗಳು

ಅಂಡಮಾನ್ ಕ್ಯಾಪಿಟಲ್ ಸಿಟಿ ಪೋರ್ಟ್ ಬ್ಲೇರ್’ನಲ್ಲಿ ಹಸಿರಿನಿಂದ ಕೂಡಿರುವ ಅರಣ್ಯ ಪ್ರದೇಶ, ಹಾಗೂ ಮರಳಿನಿಂದ ತುಂಬಿರುವ ಕಡಲಿನ ಸೌಂದರ್ಯ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

cellular

ಸೆಲ್ಯುಲರ್ ಜೈಲು: ಇದು ಪೋರ್ಟ್’’ಬ್ಲೇರ್ ನಲ್ಲಿದೆ. 1896ರಲ್ಲಿ ನಿರ್ಮಾಣ  ಮಾಡಲಾಗಿದೆ. ಇಲ್ಲಿ ಪ್ರತಿದಿನ ಸಂಜೆ ಸೌಂಡ್ ಹಾಗೂ ಲೈಟ್ ಶೋ ನಡೆಯುತ್ತದೆ.

4

ಅಂಡಮಾನ್ ಬೀಚ್ ನಲ್ಲಿ ರೋಯಿಂಗ್ ಬೋಟ್, ಪೆಡಲ್ ಬೋಟ್, ವಾಟರ್ ಸ್ಕೀಯಿಂಗ್ ಸೌಲಭ್ಯ, ವಾಟರ್ ಸ್ಕೂಟರ್ ಇವೇ ಮೊದಲಾದ ಸಾಹಸಿ ಕ್ರೀಡೆಗಳನ್ನು ಕೈಗೊಳ್ಳಬಹುದು. ಸಮುದ್ರ ನೀರಿನ ಸ್ವಿಮಿಂಗ್ ಪೂಲ್, ಮಾನವ ನಿರ್ಮಿತ ಜಲಪಾತ ಪ್ರವಾಸಿಗರನ್ನು ಆಕರ್ಷಿಸುತ್ತದೆ.

scuba-diving-andaman-1-800x600

ಗಾಂಧಿ ಪಾರ್ಕ್ ನಲ್ಲಿರುವ ಜಿಂಕೆ ಹಾಗೂ ಪಕ್ಷಿಗಳ ಉದ್ಯಾನದಲ್ಲಿ ಚುಕ್ಕಿ ಸೇರಿದಂತೆ, ವಿಭಿನ್ನ ಜಿಂಕೆಗಳನ್ನು ನೋಡಬಹುದು. ಇದು ಐತಿಹಾಸಿಕವಾಗಿಯೂ ಮಹತ್ವ ಪಡೆದಿದೆ. ಇಲ್ಲಿ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್ ನವರು ನಿರ್ಮಿಸಿದ ಜಪಾನೀಸ್ ದೇವಾಸ್ಥಾನ ಹಾಗೂ ಬಂಕರ್ ಇದೆ. ಅಂಡಮಾನ್ ನಲ್ಲಿ ರಾಸ್ ಐಲ್ಯಾಂಡ್ ಗೆ ಬೋಟಿಂಗ್ ಹೋಗುವುದು ರೋಮಾಂಚನಕಾರಿ ಅನುಭವ ನೀಡುತ್ತದೆ. ರಾಸ್ ಐಲ್ಯಾಂಡ್ ಪೋರ್ಟ್ ಬ್ಲೇರ್ ನ ಅಬರ್ಡೀನ್ ಜೆಟ್ಟಿಯಿಂದ 20 ನಿಮಿಷ ಬೋಟ್ ಮೂಲಕ ಪ್ರಯಾಣ ಬೆಳೆಸಬೇಕು, ಇಲ್ಲಿ ಚರ್ಚ್, ಸ್ವಿಮ್ಮಿಂಗ್ ಪೂಲ್, ಮುಖ್ಯ ಆಯುಕ್ತರ ನಿವಾಸವಿದೆ.

andaman-nicobar-tour-packages

ಹೋಗುವುದು ಹೇಗೆ?

ಬೆಂಗಳೂರಿನಿಂದ 1030 ಕಿ.ಮೀ. ದೂರವಿದೆ. ಹಡಗು ಮತ್ತು ವಿಮಾವದ ಮೂಲಕ ಅಂಡಮಾನ್ ದ್ವೀಪ ತಲುಪಬಹುದು. ಬೆಂಗಳೂರಿನಿಂದ ಪೋರ್ಟ್ ಬ್ಲೇರ್ ಗೆ ವಿಮಾನಯಾನ ಸೌಲಭ್ಯವಿದೆ. ಅಲ್ಲಿಂದ ಸಿಲಭವಾಗಿ ಅಂಡಮಾನ್ ನಲ್ಲಿಸುತ್ತಾಡಬಹುದು. ಚೆನ್ನೈ, ಕೊಲ್ಕತ್ತಾ ಹಾಗೂ ಪೋರ್ಟ್ ಬ್ಲೇರ್ ನಿಂದ ಪ್ರತಿದಿನ ವಿಮಾನ ಹಾರಟವಿದೆ. ಜೆಟ್ ಏರ್ವೇಸ್, ಇಂಡಿಯನ್ ಏರ್ ಲೈನ್ಸ್ ಹಾಗೂ ಏರ್ ಡೆಕ್ಕನ್ ಮೂಲಕ ಪ್ರಯಾಣ ಮಾಡಬಹುದು. ಻ಂಡಮಾನ್ ದ್ವೀಪ ಅರಬ್ಬಿ ಸಮುದ್ರದ ಮಧ್ಯಭಾಗದಲ್ಲಿದೆ. ಹಡಗಿನಲ್ಲಿ ಪ್ರಯಾಣ ಮಾಡಿ ಸಿಗುವ ಮಜಾವನ್ನು ಮಿಸ್ ಮಾಡಿಕೊಳ್ಳದಿರಿ. ಕೊಲ್ಕತ್ತಾ, ಚೆನ್ನೈ ಹಾಗೂ ವಿಶಾಖಪಟ್ಟಣಂದಿಂ ಪ್ಯಾಸೆಂಜರ್ ಶಿಪ್ ಸಂಪರ್ಕಿಸುತ್ತದೆ. ಹಡಗಿನ ಮೂಲಕ ಪೋರ್ಟ್ ಬ್ಲೇರ್ ತಲುಪಲು ಮೂರು ದಿನ ಬೇಕು.

Amazon Big Indian Festival
Amazon Big Indian Festival

Copyright © 2016 TheNewsism

To Top