News

ಬೆಂಗಳೂರು ಮಾಫಿಯಾ ಜಗತ್ತಿಗೆ ಹೊಸದಾಗಿ ಸೇರ್ಪಡೆಯಾದ ಪಂಕ್ಚರ್ ಮಾಫಿಯಾ.!

ಬೆಂಗಳೂರು ಮಾಫಿಯಾ ಜಗತ್ತಿಗೆ ಹೊಸದಾಗಿ ಸೇರ್ಪಡೆಯಾಗಿದೆ ಪಂಕ್ಚರ್ ಮಾಫಿಯಾ.! ಏನಿದು ಪಂಕ್ಚರ್ ಮಾಫಿಯಾ ಅಂತೀರಾ? ನಿಮ್ಮ ವಾಹನ ಪದೇ ಪದೇ ಒಂದೇ ಸ್ಥಳದಲ್ಲಿ ಪಂಕ್ಚರ್ ಆಗುವುದು ಮತ್ತು ಸ್ವಲ್ಪ ದೂರದಲ್ಲೇ ನಿಮಗೆ ಪಂಕ್ಚರ್ ಹಾಕುವ ಅಂಗಡಿ ಸಿಗುವುದು ಕಾಕತಾಳೀಯವಲ್ಲ. ಇದರ ಅರ್ಥ ಅಲ್ಲಿ ಪಂಕ್ಚರ್ ಮಾಫಿಯಾ ಎದ್ದು ನಿಂತಿದೆ ಅಂತ. ಕೇಳಲು ಆಶ್ಚರ್ಯ ವಾಗುತ್ತಿದೆ ಅಲ್ಲವೇ. ಇದು ನಿಜ.

ಪಂಕ್ಚರ್ ಮಾಫಿಯಾ ಅನ್ನುವುದನ್ನು ಮೊದಲು ಕಂಡುಹಿಡಿದಿದ್ದು ಬೆನೆಡಿಕ್ಟ್ ಜೆಬಕುಮಾರ್ ಅನ್ನುವವರು. 2011ರಲ್ಲಿ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದ ಬೆನೆಡಿಕ್ಟ್ ರವರು ನಗರದ ಬನಶಂಕರಿಯಲ್ಲಿ ಮನೆ ಮಾಡಿಕೊಂಡಿದ್ದು ಅಲ್ಲಿಂದ 20 ಕಿ.ಮೀ. ದೂರದ ಎಕೋಸ್ಪೇಸ್ ಎಂಬಲ್ಲಿಗೆ ತಮ್ಮ ಸೈಕಲ್ನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಆ ರಸ್ತೆಯಲ್ಲಿ ಹೋಗುವಾಗ ಪ್ರತಿದಿನ ವಾಹನ ಪಂಚರ್ ಆಗುತ್ತಿತ್ತು. ಪದೇ ಪದೇ ಇವರ ಸೈಕಲ್ ಪಂಕ್ಚರ್ ಆಗುತ್ತಿದ್ದದ್ದು ತಲೆನೋವಾಗಿತ್ತು. ಏನಿದು ಪದೇ ಪದೇ ಸೈಕಲ್ ಪಂಕ್ಚರ್ ಆಗುತ್ತಿದೆಯಲ್ಲ ಎಂದು ತಲೆ ಕೆಡಿಸಿಕೊಂಡು ಪಂಕ್ಚರ್ ಹಿನ್ನಲೆ ಹುಡುಕಾಟ ನಡೆಸಿದಾಗಲೇ ಅವರಿಗೆ ಗೋಚರವಾದದ್ದೇ ಪಂಕ್ಚರ್ ಮಾಫಿಯಾ.

unnamed

ಪದೇ ಪದೇ ಸೈಕಲ್ ಪಂಕ್ಚರ್ ಆಗುತ್ತಿದ್ದನ್ನು ಗಮನಿಸಿದ ಬೆನೆಡಿಕ್ಟ್ ರವರು ಒಂದು ಪರೀಕ್ಷೆಯನ್ನು ಮಾಡಿದರು. ಯಾವ ಯಾವ ಸ್ಥಳಗಲ್ಲಿ ಪಂಕ್ಚರ್ ಆಗುತಿತ್ತು ಆ ಜಾಗಗಳಲ್ಲಿ ಹುಡುಕಾಡಿದಾಗ ಅವರಿಗೆ 15ಕ್ಕೂ ಹೆಚ್ಚು ಮೊಳೆಗಳು ಪತ್ತೆಯಾಗಿವೆ. ಪ್ರತಿದಿನ ಆಫೀಸ್’ಗೆ ಹೋಗುವಾಗ ಆಯಸ್ಕಾಂತವನ್ನು ತೆಗೆದುಕೊಂಡು ರಸ್ತೆಯ ಮೇಲಿರುವ ಮೊಳೆಗಳನ್ನು ಸಂಗ್ರಹಿಸಲು ಮುಂದಾದರು. ಆಶ್ಚರ್ಯದ ಸಂಗತಿ ಏನೆಂದರೆ ಮೊಳೆಗಳು ಸಿಕ್ಕ ಜಗದ ಸ್ವಲ್ಪ ದೂರದಲ್ಲಿ ಪಂಚರ್ ಶಾಪ್ ಇರುವುದು ಗಮನಾರ್ಹ.

ಇಷ್ಟೆಲ್ಲಾ ಮಾಹಿತಿಗಳನ್ನು ಪಂಕ್ಚರ್ ಮಾಫಿಯಾ ವಿರುದ್ಧ ಕಲೆ ಹಾಕಿದ ಬೆನೆಡಿಕ್ಟ್ ರವರು ಕಳೆದ 2015ರಿಂದ ಫೇಸ್ಬುಕ್ನಲ್ಲಿ ಮೈ ರೋಡ್, ಮೈ ರೆಸ್ಪಾನ್ಸಿಬಿಲಿಟಿ ಎಂಬ ಪೇಜ್ ತೆರೆದು ಪ್ರತಿನಿತ್ಯ ಅದರಲ್ಲಿ ಅವರ ಸಂಗ್ರಹಿಸುತ್ತಿರುವ ಮೊಳೆಗಳ ಸಂಖ್ಯೆ ನಮೂದಿಸುತ್ತಾ ಬಂದಿದ್ದಾರೆ. ಇಲ್ಲಿಯವರೆಗೂ ಅವರು ಸಂಗ್ರಹಿಸಿದ ಮೊಳೆಗಳ ಒಟ್ಟು ತೂಕ 70 ಕೆಜಿ. ಪ್ರಸ್ತುತ ಅವರು ತಮಿಳುನಾಡಿನಲ್ಲಿ ವಾಸವಾಗಿದ್ದು ಪಂಕ್ಚರ್ ಮಾಫಿಯಾ ವಿರುದ್ಧ ಅವರ ಹೋರಾಟ ಸಾಮಾಜಿಕ ತಾಣಗಳ ಮೂಲಕ ನಡೆಯುತ್ತಿದೆ. ಇದರಿಂದಾಗಿ ಸಂಚಾರಿ ಪೊಲೀಸರ ಕಣ್ಣು ತೆರೆಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ಸಾಮಾಜಿಕ ಕಳಕಳೆ ಉಳ್ಳವರು ತುಂಬಾ ಅಪರೂಪ.

ಸಂಚಾರಿ ಪೊಲೀಸರು ಪಂಕ್ಚರ್ ಮಾಫಿಯಾದಲ್ಲಿ ತೊಡಗಿಸಿಕೊಂಡಿದ್ದವರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸರಿಂದ ಸಾಧ್ಯವಿಲ್ಲ. ಜನರ ಬದುಕಿನೊಂದಿಗೆ ಆಟವಾಡುವ ಇಂತಹ ಮಾಫಿಯಾಗಳಲ್ಲಿ ತೊಡಗಿಸಿಕೊಂಡವರ ಮನಪರಿವರ್ತನೆಯಿಂದ ಮಾತ್ರ ಸಾಧ್ಯ. ಇಂತಹ ಘಟನೆಗಳು ತಮ್ಮ ಗಮನಕ್ಕೆ ಬಂದರೆ ತಕ್ಷಣ ಸಂಚಾರಿ ಪೊಲೀಸ್ ಇಲಾಖೆಗೆ ತಿಳಿಸಿ ಮತ್ತು ಪಂಕ್ಚರ್ ಮಾಫಿಯಾದ ವಿರುದ್ಧ ದ್ವನಿ ಎತ್ತಿ.

Health Articles written here, are only a guideline. Please consult a doctor before adopting these changes.

ಈ ಅರೋಗ್ಯ ಮಾಹಿತಿಯು ನಿಮಗೆ ಒಂದು ಮಾರ್ಗದರ್ಶಿ ಮಾತ್ರ, ಇದನ್ನು ಪಾಲನೆ ಮಾಡುವ ಮುನ್ನ ವೈದ್ಯರನ್ನು ಸಂಪರ್ಕಿಸಿ..

Comments

comments

Click to comment

Leave a Reply

Your email address will not be published. Required fields are marked *

To Top