News

ಹೋಟೆಲ್‌ನಲ್ಲಿ ಸರ್ವಿಸ್‌ ಚಾರ್ಜ್‌ ಕಡ್ಡಾಯವಲ್ಲ

ಹೊಟೇಲ್ ನ ಬಿಲ್ ಅನ್ನು ಗಮನಿಸಿದರೆ ಸರ್ವಿಸ್ ಟ್ಯಾಕ್ಸ್ ಮತ್ತು ಸರ್ವಿಸ್ ಚಾರ್ಜ್ ಎರಡೂ ಒಳಗೊಂಡಿರುತ್ತದೆ. ಇದು ಕೆಲವರಿಗೆ ಗೊಂದಲ ಮೂಡಿಸಬಹುದು.

800-2

ಸರ್ವಿಸ್ ಟ್ಯಾಕ್ಸ್ ಅಂದರೆ: ಹೆಸರೇ ಹೇಳುವಂತೆ ಇದು ಸರಕಾರ ವಿಧಿಸುವ ಒಂದು ತೆರಿಗೆಯಾಗಿದೆ. ಸರ್ವಿಸ್ ಟ್ಯಾಕ್ಸ್, ವ್ಯಾಲ್ಯೂ ಆ್ಯಡೆಡ್ ಟ್ಯಾಕ್ಸ್(ವ್ಯಾಟ್) ಮೊದಲಾದವನ್ನು ಸರಕಾರವೇ ಹೇರುತ್ತದೆ. ಇವು ಸಾಮಾನ್ಯವಾಗಿ ಸರಕಾರ ನಿಗದಿಪಡಿಸಿರುವ ಪ್ರಕಾರವೇ ಹೊಟೇಲ್’ನವರು ತೆರಿಗೆಯನ್ನು ಹೇರಬೇಕಾಗುತ್ತದೆ.

ಸರ್ವಿಸ್ ಚಾರ್ಜ್ ಅಂದರೆ: ಇದು ಹೊಟೇಲ್’ನವರು ತಮ್ಮ ಇಚ್ಛಾನುಸಾರ ಗ್ರಾಹಕರಿಗೆ ವಿಧಿಸುವ ಸೇವಾ ಶುಲ್ಕವಾಗಿದೆ. ಸಾಮಾನ್ಯವಾಗಿ ಇದರ ಪ್ರಮಾಣವು ಬಿಲ್ ಮೊತ್ತಕ್ಕೆ ಶೇ.5ರಿಂದ 20ರಷ್ಟಿರುತ್ತದೆ. ಕೆಲ ಹೊಟೇಲ್’ಗಳು ಇನ್ನೂ ಹೆಚ್ಚು ಸರ್ವಿಸ್ ಚಾರ್ಜ್ ವಿಧಿಸುವುದುಂಟು.

ಹೋಟೆಲ್‌, ರೆಸ್ಟೊರಂಟ್‌ಗಳಲ್ಲಿ ಪೂರೈಸುವ ಆಹಾರ , ತಿಂಡಿ ಬಿಲ್‌ಗೆ ಸರ್ವಿಸ್‌ ಚಾರ್ಜ್‌ (ಸೇವಾ ಶುಲ್ಕ) ಪಾವತಿಸುವುದು ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಊಟೋಪಚಾರ ತೃಪ್ತಿಕರವಾಗಿರದಿದ್ದರೆ ಗ್ರಾಹಕರು ಸರ್ವಿಸ್‌ ಚಾರ್ಜ್‌ ಪಾವತಿಸದಿರಲು ಅವಕಾಶ ಇರಬೇಕು ಎಂದೂ ಸೂಚಿಸಿದೆ.

ಫಲಕ ಅಳವಡಿಕೆ: ಸರ್ವಿಸ್‌ ಚಾರ್ಜ್‌ ಕಡ್ಡಾಯವಾಗಿ ವಸೂಲಿ ಮಾಡದ ಮತ್ತು ಸೇವೆ ತೃಪ್ತಿ ತರದಿದ್ದರೆ ಗ್ರಾಹಕರು ಬಿಲ್‌ ಪಾವತಿಸುವಾಗ ಈ ಸೇವಾ ತೆರಿಗೆ ಕೈಬಿಡಬಹುದು ಎನ್ನುವ ಸೂಚನಾ ಫಲಕವನ್ನು ಹೋಟೆಲ್‌ ಮತ್ತು ರೆಸ್ಟೊರಂಟ್‌ಗಳಲ್ಲಿ ಸೂಕ್ತ ಸ್ಥಳದಲ್ಲಿ ಪ್ರದರ್ಶಿಸುವ ಕುರಿತು ರಾಜ್ಯ ಸರ್ಕಾರಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದೂ ಕೇಂದ್ರ ಸರ್ಕಾರ ಸೂಚಿಸಿದೆ.

ಗ್ರಾಹಕರ ದೂರು: ಹೋಟೆಲ್‌ ಮತ್ತು ರೆಸ್ಟೋರಂಟ್‌ಗಳು ಶೇ 5 ರಿಂದ ಶೇ 20ರವರೆಗೆ ದುಬಾರಿ ಮಟ್ಟದಲ್ಲಿ ಸರ್ವಿಸ್‌ ಚಾರ್ಜ್‌ ವಿಧಿಸುತ್ತಿವೆ. ತಮಗೆ ಒದಗಿಸಿದ ಸೇವೆ ತೃಪ್ತಿಕರವಾಗಿರಲಿ ಅಥವಾ ಬಿಡಲಿ ಕಡ್ಡಾಯವಾಗಿ ಸರ್ವಿಸ್‌ ಚಾರ್ಜ್‌ ಪಾವತಿಸಬೇಕಾಗಿದೆ ಎಂದು ಗ್ರಾಹಕರಿಂದ ವ್ಯಾಪಕ ದೂರುಗಳು ಕೇಳಿ ಬಂದಿದ್ದವು. ಈ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಮತ್ತು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವಾಲಯವು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಸಚಿವಾಲಯವು ಭಾರತದ ಹೋಟೆಲ್‌ ಸಂಘದ ಅಭಿಪ್ರಾಯ ಕೇಳಿತ್ತು. ‘ಸರ್ವಿಸ್‌ ಚಾರ್ಜ್‌ ಸಂಪೂರ್ಣವಾಗಿ ಗ್ರಾಹಕರ ವಿವೇಚನೆಗೆ ಒಳಪಟ್ಟ ವಿಷಯವಾಗಿದೆ. ಊಟೋಪಚಾರ ವಿಷಯದಲ್ಲಿ ಗ್ರಾಹಕರಿಗೆ ತೃಪ್ತಿಯಾಗಿರದಿದ್ದರೆ ಅಂತಹ ಗ್ರಾಹಕರು ಸರ್ವಿಸ್‌ ಚಾರ್ಜ್‌ ಪಾವತಿಸಬೇಕಾಗಿಲ್ಲ.ಗ್ರಾಹಕರು ಸ್ವಇಚ್ಛೆಯಿಂದ ಮಾತ್ರ ಪಾವತಿಸಬಹುದು ಎಂದು ಸಂಘ ಅಭಿಪ್ರಾಯಪಟ್ಟಿತ್ತು.

1986ರ ಗ್ರಾಹಕರ ಹಿತರಕ್ಷಣಾ ಕಾಯ್ದೆ ಪ್ರಕಾರ, ಮಾರಾಟ ಉತ್ತೇಜನ, ಸರಕಿನ ಪೂರೈಕೆ, ಸೇವೆ ಒದಗಿಸುವ ವಿಷಯದಲ್ಲಿ ಯಾರಾದರೂ ನ್ಯಾಯಯುತವಲ್ಲದ ವಿಧಾನ ಅಳವಡಿಸಿಕೊಂಡಿದ್ದರೆ ಅಥವಾ ವಂಚನೆ ಪದ್ಧತಿ ಅನುಸರಿಸುತ್ತಿದ್ದರೆ ಅದೊಂದು ನ್ಯಾಯಯುತವಲ್ಲದ ವ್ಯಾಪಾರ ಆಚರಣೆಯಾಗಿರಲಿದೆ. ಇಂತಹ ಪದ್ಧತಿ ವಿರುದ್ಧ ಗ್ರಾಹಕರು ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಬಹುದಾಗಿದೆ.

Comments

comments

Amazon Big Indian Festival
Click to comment

Leave a Reply

Your email address will not be published. Required fields are marked *

Amazon Big Indian Festival
To Top