Achivers

ವಿಶ್ವದಾಖಲೆ ಮೇಲೆ ಇಸ್ರೊ ಕಣ್ಣು: ಒಂದೇ ಬಾರಿ 103 ಸ್ಯಾಟಲೈಟ್‍ ಉಡಾವಣೆಗೆ ಸಜ್ಜು

ಹೊಸ ಪ್ರಯೋಗಗಳ ಮೂಲಕ ವಿಶ್ವದ ಗಮನ ಸೆಳೆಯುತ್ತಿರುವ ಭಾರತದ ಬಾಹ್ಯಕಾಶ ಸಂಸ್ಥೆ ಇಸ್ರೊ ವಿಶ್ವದಾಖಲೆ ನಿರ್ಮಿಸಲು ಸಜ್ಜಾಗಿದೆ.

ಮುಂದಿನ ಬಾರಿ ಪಿಎಸ್‍ಎಲ್‍ವಿ ಉಪಗ್ರಹ ಉಡಾವಣೆ ವೇಳೆ ಒಂದೇ ಬಾರಿಗೆ 103 ಸ್ಯಾಟಲೈಟ್‍ಗಳನ್ನು ಗಗನಕ್ಕೆ ಯಶಸ್ವಿಯಾಗಿ ಚಿಮ್ಮಿಸುವ ಮೂಲಕ ಈ ಅಪರೂಪದ ಸಾಧನೆ ಮಾಡಲು ಭರದ ಸಿದ್ಧತೆ ನಡೆಸಿದೆ.

ತಿರುಪತಿಯಲ್ಲಿ ಬುಧವಾರ ನಡೆದ ಇಂಡಿಯನ್‍ ಸೈನ್ಸ್‍ ಕಾಂಗ್ರೆಸ್‍ ಸಮಾವೇಶದಲ್ಲಿ ಇಸ್ರೊ ಈ ಪ್ರಕಟಣೆ ಹೊರಡಿಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಫೆಬ್ರವರಿ ಮೊದಲ ವಾರದಲ್ಲಿ ಈ ಸಾಹಸಕ್ಕೆ ಕೈಹಾಕಲಿದೆ.

ಇಸ್ರೊ ಪಾಲಿಗೆ ಇದು ಅತ್ಯಂತ ಮಹತ್ವಕಾಂಕ್ಷಿ ಯೋಜನೆ ಇದಾಗಿದೆ. ಈ ರೀತಿಯ ಸಾಹಸಕ್ಕೆ ಹಿಂದೆ ಯಾರೂ ಕೈ ಹಾಕಿರಲಿಲ್ಲ. ರಷ್ಯಾ 2014ರ ಜೂನ್‍ನಲ್ಲಿ ಒಂದೇ ಬಾರಿ 39 ಸ್ಯಾಟಲೈಟ್‍ ಹಾರಿಬಿಟ್ಟಿದ್ದು ಇದುವರೆಗೆ ವಿಶ್ವದಾಖಲೆಯಾಗಿದೆ.

  • ಪೋಲಾರ್ ಸ್ಯಾಟಲೈಟ್‍ ಲಾಂಚ್‍ ವೆಹಿಕಲ್ (ಪಿಎಸ್‍ಎಲ್‍ವಿ) ಉಪಗ್ರಹ ಉಡಾವಣೆ ವೇಳೆ 3 ದೊಡ್ಡ ಹಾಗೂ 100 ಸಣ್ಣ ಸ್ಯಾಟಲೈಟ್‍ಗಳನ್ನು ಹಾರಿಬಿಡಲಿದೆ.
  • ಕಳೆದ ವಾರದವರೆಗೂ 83 ಸ್ಯಾಟಲೈಟ್‍ ಹಾರಿಬಿಡಲು ನಿರ್ಧರಿಸಲಾಗಿತ್ತು. ಆದರೆ 20 ವಿದೇಶೀ ಸ್ಯಾಟಲೈಟ್‍ಗಳಿಗೆ ಬೇಡಿಕೆ ಬಂದಿದ್ದರಿಂದ 100ಕ್ಕೇರಿಸಲು ತೀರ್ಮಾನಿಸಲಾಯಿತು. ಈ ಕಾರಣಕ್ಕಾಗಿಯೇ ಒಂದು ವಾರ ತಡವಾಗಿ ಉಡಾವಣೆ ಮುಂದೂಡಲಾಗಿದೆ.
  • ಪಿಎಸ್‍ಎಲ್‍ವಿ ಸಿ-37 ಉಪಗ್ರಹ ಕಾರ್ಟೊಸ್ಯಾಟ್‍ ಮತ್ತು ಎರಡು ಇಸ್ರೊದ ಸ್ಯಾಟಲೈಟ್‍ ಹೊತ್ತೊಯ್ಯಲಿದ್ದು, ಉಳಿದ 100 ವಾಣಿಜ್ಯ ಸ್ಯಾಟಲೈಟ್‍ಗಳಾಗಿವೆ.
  • ಬಹುತೇಕ ವಾಣಿಜ್ಯ ಸ್ಯಾಟಲೈಟ್‍ಗಳು ಅಮೆರಿಕದ್ದಾಗಿವೆ. ಬೆರಳೆಣಿಕೆಯ ಸ್ಯಾಟಲೈಟ್‍ಗಳು ಫ್ರಾನ್ಸ್ ಮತ್ತು ಜರ್ಮನಿಯದ್ದಾಗಿವೆ.
  • ಸಣ್ಣ ಸ್ಯಾಟಲೈಟ್‍ಗಳು 500 ರಿಂದ 600 ಕೆಜಿ ತೂಕದ್ದಾಗಿರುತ್ತವೆ. ಸ್ಪೇಸ್‍ ಏಜೆನ್ಸಿ ಅತೀ ಭಾರದ ಪಿಎಸ್‍ಎಲ್‍ವಿ ರಾಕೆಟ್‍ಗಳನ್ನು ನಿರ್ಮಿಸಲಿದೆ.
  • ಕಳೆದ ವರ್ಷ ಇಸ್ರೊ 22 ಸ್ಯಾಟಲೈಟ್‍ಗಳನ್ನು ಒಮ್ಮೆಲೆ ಹಾರಿಬಿಟ್ಟಿತ್ತು. ಇದಕ್ಕೆ ಹೋಲಿಸಿದರೆ ಐದು ಪಟ್ಟು ಹೆಚ್ಚು ಎಂದು ಹೇಳಬಹುದು.

Comments

comments

Amazon Big Indian Festival
Click to comment

Leave a Reply

Your email address will not be published. Required fields are marked *

Amazon Big Indian Festival
To Top