Business

2016ರಲ್ಲಿ 212 ಸ್ಟಾರ್ಟ್ಅಪ್‍ ಕ್ಲೋಸ್‍!

2016 ಹೊಸ, ಯುವ ಉದ್ಯಮಿಗಳ ಪರ ಇರಲಿಲ್ಲ. ಏಕೆಂದರೆ ಈ ವರ್ಷದ ಅಂತ್ಯದ ವೇಳೆಗೆ 212 ಸ್ಟಾರ್ಟ್ಅಪ್‍ಗಳು ಬಾಗಿಲು ಮುಚ್ಚಿವೆ. ಕಳೆದ ವರ್ಷ 140 ಉದ್ಯಮಗಳು ಮುಚ್ಚಿದ್ದು, ಇದಕ್ಕೆ ಹೋಲಿಸಿದರೆ ಶೇಕಡಾ 50ರಷ್ಟು ನವೋದ್ಯಮಗಳು ನಷ್ಟಕ್ಕೆ ಒಳಗಾಗಿವೆ.

ವರ್ಷದಿಂದ ವರ್ಷಕ್ಕೆ ಉದ್ಯಮಗಳ ಪಾಲಿಗೆ ಸಂಕಷ್ಟಗಳು ಹೆಚ್ಚುತ್ತಲೇ ಇವೆ. ಅದರಲ್ಲೂ ಕೇಂದ್ರ ಸರಕಾರದ ನೋಟು ಬ್ಯಾನ್ ಮುಂದಿನ ವರ್ಷ ಸಂಕಷ್ಟ ಹೆಚ್ಚಿಸಲಿವೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಟಾರ್ಟ್ಅಪ್‍ಗಳ ದಾಖಲೆಗಳನ್ನು ಸಂಗ್ರಹಿಸುವ ಟ್ರಾಕ್ಸನ್ ಸಂಸ್ಥೆ ಈ ಅಂಕಿ-ಅಂಶ ಬಿಡುಗಡೆ ಮಾಡಿದ್ದು, ಪೆಪ್ಪರ್‍ ಟ್ಯಾಪ್‍ ಸಂಸ್ಥೆ ಅತೀ ದೊಡ್ಡ ನಷ್ಟ ಅನುಭವಿಸಿದ ಸಂಸ್ಥೆಯಾಗಿದೆ. 2014ರಲ್ಲಿ ಆರಂಭವಾದ ಈ ಸಂಸ್ಥೆ ಸೆಕ್ಯುಯಾ ಕ್ಯಾಪಿಟಲ್‍, ಸೈಫ್ ಪಾರ್ಟನರ್ಸ್ ಅಲ್ಲದೇ ಇ-ಕಾಮರ್ಸ್‍ನ ದೈತ್ಯ ಸಂಸ್ಥೆಯಾದ ಸ್ನ್ಯಾಪ್‍ಡಿಲ್‍ಗಳಿಂದ 51 ದಶಲಕ್ಷ ಡಾಲರ್‍ ಬಂಡವಾಳ ಆಕರ್ಷಿಸಿದ್ದ ಪೆಪ್ಪರ್‍ ಟ್ಯಾಪ್‍ ನಷ್ಟದಿಂದ ಬಾಗಿಲು ಮುಚ್ಚುವಂತಾಗಿದೆ. ಸಂಸ್ಥೆಯ ಸಂಸ್ಥಾಪಕಿ ನವನೀತ್‍ ಮಿಶ್ರಾ ಸಂಸ್ಥೆಯನ್ನು ಮುಚ್ಚುವ ನಿರ್ಧಾರ ಪ್ರಕಟಿಸಿದ್ದಾರೆ.

2014ರಲ್ಲಿ ಹೂಡಿಕೆದಾರರನ್ನು ಆಕರ್ಷಿಸಿದ್ದ 10 ಸ್ಟಾರ್ಟ್‍ಅಪ್‍ಗಳ ಪೈಕಿ 7 ಮುಚ್ಚಿವೆ. ಆನ್‍ಲೈನ್‍ನಲ್ಲಿ ಕೋರಿಯರ್‍ ಬುಕ್ಕಿಂಗ್‍ ಮಾಡುವ `ಪಾರ್ಸೆಲ್ಡ್‍’ ಸಂಸ್ಥೆ ನಷ್ಟಕ್ಕೆ ಒಳಗಾದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ. 2016ರ ಜೂನ್‍ನಲ್ಲಿ ಆರಂಭವಾದ ಲಾಂಡ್ರಿ ಸೇವಾ ಸಂಸ್ಥೆ `ಡೋರ್‍ಮಿಂಟ್‍’ ಬಂಡವಾಳ ಕೊರತೆಯಿಂದ ಬಾಗಿಲು ಮುಚ್ಚಿಕೊಂಡಿದೆ.

2016 ರಲ್ಲಿ ಆರಂಭವಾದ ಶೇ.20ರಷ್ಟು ಉದ್ಯಮಗಳು ಯಶಸ್ಸು ಕಾಣಲಿಲ್ಲ. ಸಾಮಾನ್ಯವಾಗಿ ಸ್ಟಾರ್ಟ್‍ ಅಪ್‍ಗಳು ನೆಲೆಕಂಡುಕೊಳ್ಳಬೇಕಾದರೆ 3 ವರ್ಷ ಅಗತ್ಯವಿದೆ. ಆದರೆ ಸ್ಪರ್ಧೆಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಸರಕಾರದ ಕ್ರಮಗಳು ಹಿನ್ನಡೆ ಉಂಟುಮಾಡುತ್ತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

Comments

comments

Amazon Big Indian Festival
Click to comment

Leave a Reply

Your email address will not be published. Required fields are marked *

Amazon Big Indian Festival
To Top