News

ಶಾಸಕನ ಬಾಡಿಗಾರ್ಡ್ ಖಾತೆಯಲ್ಲಿ ಕಂಡಿದ್ದು 100 ಕೋಟಿ ರೂ.!

ಉತ್ತರಪ್ರದೇಶದ ಕಾನ್ಪುರದ ಸಮಾಜವಾದಿ ಪಕ್ಷದ ಶಾಸಕನ ಬಾಡಿಗಾರ್ಡ್ ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದಾಗ ತನ್ನ ಅಕೌಂಟ್‍ನಲ್ಲಿದ್ದ ಮೊತ್ತ ನೋಡಿ ಬೆಚ್ಚಿಬಿದ್ದಿದ್ದಾನೆ. ಏಕೆಂದರೆ ಆತನ ಬ್ಯಾಂಕ್ ಖಾತೆಯಲ್ಲಿ ಇದ್ದ ಹಣ ಬರೋಬ್ಬರಿ 99,99,02,724 ಅಂದರೆ ಸುಮಾರು 100 ಕೋಟಿ ರೂ.!

ಶಾಸಕ ಇರ್ಫಾನ್‍ ಸೋಲಂಕಿ ಅವರ ಬಾಡಿಗಾರ್ಡ್ ಗುಲಾಮ್‍ ಜಿಲಾನಿ ಮಂಗಳವಾರ ರಾತ್ರಿ ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದಾಗ ಈ ವಿಷಯ ಬೆಳಕಿಗೆ ಬಂದಿದ್ದು, ಕೂಡಲೇ ಗುಲಾಮ್‍, ಶಾಸಕರನ್ನು ಭೇಟಿ ಮಾಡಿ ತನ್ನ ಗಮನಕ್ಕೆ ಬಾರದೇ 100 ರೂ. ಜಮೆ ಆಗಿರುವ ವಿಷಯವನ್ನು ತಿಳಿಸಿದ್ದಾರೆ. ನಂತರ ಜಿಲ್ಲಾ ಮ್ಯಾಜಿಸ್ಟ್ರೈಟ್‍ ಗಮನಕ್ಕೆ ಈ ವಿಷಯವನ್ನು ತರಲಾಗಿದೆ.

ಎಸ್‍ಬಿಐನ ಮಾಲ್‍ ರೋಡ್‍ ಶಾಖೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಹಣ ಪತ್ತೆಯಾಗಿದ್ದು, ಕೂಡಲೇ ಮ್ಯಾನೇಜರ್‍ ಗಮನಕ್ಕೆ ತರಲಾಗಿದ್ದು, ಈ ಹಣ ತಮ್ಮದಲ್ಲ ಎಂದು ಪತ್ರ ಬರೆದುಕೊಡುವಂತೆ ಸೂಚಿಸಿದ್ದಾರೆ.

Comments

comments

Amazon Big Indian Festival
Click to comment

Leave a Reply

Your email address will not be published. Required fields are marked *

Amazon Big Indian Festival
To Top