Health

ಖರ್ಜೂರ : ಕಾಯಿಲೆಗಳಿಗೆ ಒಂದು ಉತ್ತಮ ಮನೆ ಮದ್ದು

ನಾನಾ ಖಾಯಿಲೆಗಳಿಗೆ ಮನೆಯ ಮಾಸಾಲೆ ಡಬ್ಬಿಯಲ್ಲಿ ಅದೆಷ್ಟೋ ಔಷಧಿಗಳು ಇರುತ್ತವೆ ಎನ್ನುವ ಮಾತೊಂದಿದೆ. ಸಣ್ಣ ಪುಟ್ಟ ಆರೋಗ್ಯದ ತೊಂದರೆಗಳಿಗೆ ಆಸ್ಪತ್ರೆಗಳ ಮೇಟ್ಟಿಲೇರುವ ಅಭ್ಯಾಸವನ್ನು ಎಂದೂ ಬೆಳಸಿಕೊಳ್ಳಬಾರದು. ಮುಂದೊಂದು ದಿನ ಆಸ್ಪತ್ರೆಗಳೇ ನಮ್ಮ ಮನೆಗಳಾಗಿಬಿಡುತ್ತದೆ. ಸಾಮಾನ್ಯವಾಗಿ ಎಲ್ಲರಿಗೂ ಬಿಡದೇ ಕಾಡುವ ಕೆಲವು ಕಾಯಿಲೆಗಳಿಗೆ ಒಂದು ಉತ್ತಮ ಮನೆಮದ್ದಾಗಿ ಖರ್ಜೂರದ ಮಹತ್ವವನ್ನು ಆಯುರ್ವೇದದಲ್ಲಿ ಕೊಂಡಾಡಿದ್ದಾರೆ.ಈ ವಿಡಿಯೋ ನೋಡಿ ನಿಮಗೆ ಗೊತ್ತಾಗುತ್ತದೆ

ಸಾಮಾನ್ಯವಾಗಿ ಖರ್ಜೂರವನ್ನು ಇಷ್ಟಪಡದವರಿಲ್ಲ. ಅದು ಖರ್ಜೂರದ ಚಟ್ನಿಯೇ ಆಗಿರಲಿ, ಖರ್ಜೂರದ ಸಿಹಿತಿನಿಸೇ ಆಗಿರಲಿ ಅಥವಾ ಸಾದಾ ತಾಜಾ ಅಥವಾ ಒಣಗಿರುವ ಖರ್ಜೂರವೇ ಆಗಿರಲಿ, ಯಾವ ರೂಪದಲ್ಲಾದರು ಸರಿಯೇ ಖರ್ಜೂರವಂತೂ ಎಲ್ಲರಿಗೂ ಅಚ್ಚುಮೆಚ್ಚು. ಖರ್ಜೂರ ಎಂದೂ ಕರೆಯಲ್ಪಡುವ ಈ ಸಾದಾ ಖರ್ಜೂರವು ಅನೇಕ ದೈಹಿಕ ಚಟುವಟಿಕೆಗಳು ಸರಾಗವಾಗಿ ನೆರವೇರಲು ಬೇಕಾದ ಎಲ್ಲಾ ತೆರನಾದ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಖರ್ಜೂರವನ್ನು ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ನೀವು ಅಳವಡಿಸಿಕೊಂಡರೆ ಏನೆಲ್ಲ ಲಾಭಗಳಿವೆ ಎಂಬುದಕ್ಕೆ ಕೆಲವು ಕಾರಣಗಳು ಇಲ್ಲಿವೆ.

dates

ಖರ್ಜೂರ ಸೇವನೆಯಿಂದ ದೇಹದ ಆರೋಗ್ಯಕ್ಕೆ ಅಸಂಖ್ಯಾತ ಪ್ರಯೋಜನಗಳಿವೆ. ವಾಸ್ತವವಾಗಿ ಇದೊಂದು ರುಚಿಯಲ್ಲಿ ಅತ್ಯಂತ ಸಿಹಿಯಾಗಿರುವ ಹಾಗೂ ಖನಿಜಾಂಶಗಳು ಹಾಗೂ ವಿಟಾಮಿನ್‍ಗಳು ಸಮೃದ್ಧವಾಗಿರುವ ಒಣ ಹಣ್ಣಾಗಿದೆ. ಖರ್ಜೂರದ ಕೃಷಿಗೆ ನೂರಾರು ವರ್ಷಗಳ ಇತಿಹಾಸವಿದೆ. ಪ್ರೋಟೀನ್ ಹಾಗೂ ನಾರಿನ (ಫೈಬರ್)ಅಂಶಗಳೂ ಖರ್ಜೂರದಲ್ಲಿ ಹೇರಳವಾಗಿವೆ. ವಿಟಮಿನ್1 ಹಾಗೂ ಸಿ ಜೊತೆಗೆ ಬಿ1,ಬಿ2,ಬಿ3 ಹಾಗೂ ಬಿ5 ವಿಟಮಿನ್‍ಗಳೂ ಆ ಹಣ್ಣಿನಲ್ಲಿ ಅಧಿಕವಾಗಿವೆ. ಖರ್ಜೂರವು ಕರಗುವ ಹಾಗೂ ಕರಗಲಾರದ ಫೈಬರ್ ಅಂಶಗಳು ಹಾಗೂ ವಿವಿಧ ರೀತಿಯ ಆಮಿನೊ ಯಾಸಿಡ್‍ಗಳನ್ನು ಹೊಂದಿರುವುದರಿಂದ ಅದು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.

ಖರ್ಜೂರಗಳು ಗ್ಲೂಕೋಸ್, ಸುಕ್ರೋಸ್ ಹಾಗೂ ಫ್ರಕ್ಟೋಸ್‍ಗಳಂತಹ ನೈಸರ್ಗಿಕ ಶರ್ಕರ ಅಂಶಗಳನ್ನು ಹೊಂದಿರುವುದರಿಂದ ಅವು ದೇಹದ ಶಕ್ತಿಯನ್ನು ಉತ್ತೇಜಿಸುತ್ತವೆ. ಖರ್ಜೂರವನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಿದಲ್ಲಿ ಅದರಿಂದ ಆರೋಗ್ಯಕ್ಕೆ ಇನ್ನೂ ಹೆಚ್ಚಿನ ಪ್ರಯೋಜನವಾಗಲಿದೆ. ಖರ್ಜೂರದಲ್ಲಿ ಪೋಟ್ಯಾಶಿಯಂ ಹೇರಳವಾಗಿದ್ದು, ಸೋಡಿಯಂ ಕಡಿಮೆ ಪ್ರಮಾಣದಲ್ಲಿರುವುದರಿಂದ ನರಮಂಡಲವನ್ನು ಆರೋಗ್ಯಕರವಾಗಿಡಲು ಅದು ನೆರವಾಗುತ್ತದೆ ಪೋಟ್ಯಾಶಿಯಂ ಅಂಶವನ್ನು ನಿರ್ದಿಷ್ಟ ಪ್ರಮಾಣದವರೆಗೆ ಸೇವಿಸಿದಲ್ಲಿ ಪಾಶ್ರ್ವವಾಯುವಿನ ಅಪಾಯವನ್ನು ಕಡಿಮೆಗೊಳಿಸಬಹುದೆಂಬುದನ್ನು ಇತ್ತೀಚಿನ ಸಂಶೋಧನೆಗಳು ಬಹಿರಂಗಪಡಿಸಿವೆ. ಖರ್ಜೂರದಲ್ಲಿ ಅತ್ಯಧಿಕ ಪ್ರಮಾಣದ ಕಬ್ಬಣದ ಅಂಶವಿದ್ದು, ರಕ್ತಹೀನತೆಗೆ ಚಿಕಿತ್ಸೆ ನೀಡಲು ಅದು ಅತ್ಯಂತ ಪ್ರಯೋಜನಕಾರಿಯಾಗಿದೆ. ಖರ್ಜೂರವನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದಲ್ಲಿ ಮಾತ್ರ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಖರ್ಜೂರದಲ್ಲಿ ಪ್ರೋಟೀನ್ ಅಂಶವೂ ಇರುವುದರಿಂದ ದಂತಕ್ಷಯವನ್ನು ಅದು ತಡೆಯುತ್ತದೆ.

ಮಲಬದ್ಧತೆಯಿಂದ ನರಳುವವರಿಗೂ ಅದು ಪ್ರಯೋಜನಕರವಾಗಿದೆ. ರಾತ್ರಿ ಖರ್ಜೂರವನ್ನು ನೀರಿನಲ್ಲಿ ನೆನೆಸಿಟ್ಟು, ಅದೇ ನೀರಿನೊಂದಿಗೆ ಅದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಇನ್ನೂ ಹೆಚ್ಚು ಪ್ರಯೋಜನವಿದೆ. ಖರ್ಜೂರವು ಲೈಂಗಿಕ ಸಾಮಥ್ರ್ಯವನ್ನೂ ಹೆಚ್ಚಿಸಲು ನೆರವಾಗುತ್ತದೆ. ಖರ್ಜೂರಗಳಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನ ಗಳಿರುವುದರಿಂದ, ಖರ್ಜೂರವನ್ನು ಖರೀದಿಸುವಾಗ ಅವುಗಳ ಗುಣಮಟ್ಟದ ಬಗ್ಗೆ ಜಾಗ್ರತೆ ವಹಿಸಬೇಕಾಗುತ್ತದೆ. ಸಮರ್ಪಕವಾಗಿ ಪ್ಯಾಕ್ ಮಾಡಿದ ಹಾಗೂ ಸಂಸ್ಕರಿಸಿದ ಖರ್ಜೂರ ಸೇವನೆ ಉತ್ತಮ. ಖರ್ಜೂರ ಖರೀದಿಸುವಾಗ ಬೆಲೆ ತುಸು ಹೆಚ್ಚಾದರೂ ಸಹ ಪರವಾಗಿಲ್ಲ ಉತ್ತಮ ಗುಣಮಟ್ಟದನ್ನು ಆಯ್ಕೆ ಮಾಡುವುದು ಒಳಿತು.

ಗರ್ಭಿಣಿಯರ ಆರೋಗ್ಯಕ್ಕೆ :

%e0%b2%97%e0%b2%b0%e0%b3%8d%e0%b2%ad%e0%b2%bf%e0%b2%a3%e0%b2%bf%e0%b2%af

ಗರ್ಭಿಣಿಯರ ಆರೋಗ್ಯ ಕಾಪಾಡುವಲ್ಲಿ ಮತ್ತು ಬೆಳವಣಿಗೆ ಹಂತದಲ್ಲಿರುವ ಮಗುವಿನ ಸೂಕ್ತ ಬೆಳವಣಿಗೆಗೆ ಬೇಕಾಗುವ ಪೋಷಕಾಂಷ ಗಳನ್ನು ಒದಗಿಸುವಲ್ಲಿ ಖರ್ಜೂರ ಮಹತ್ವವೆನಿಸಿದೆ.

ಗರ್ಭಿಣಿ ಯಾದಾಗ ಕೆಲವರಲ್ಲಿ ಹಿಮೋ ಗ್ಲೋಬಿನ್ ಅಂಶ ಕಡಿಮೆ ಇದ್ದಾಗ ಖರ್ಜೂರ ಸೇವನೆ ಯಿಂದ ದೇಹದಲ್ಲಿ ರಕ್ತಕಣಗಳು ಹೆಚ್ಚಾಗಿ ಆರೋಗ್ಯ ವೃದ್ಧಿಸುವುದಲ್ಲದೆ ಭ್ರೂಣದ ಬೆಳವಣಿಗೆಗೆ ಸಹಕಾರಿ. ಹೆರಿಗೆಯ ನಂತರ ಹಾಲು ಹೆಚ್ಚು ಉತ್ಪತ್ತಿ ಮಾಡುತ್ತದೆ. ಜೊತೆಗೆ ದೈಹಿಕವಾಗಿ ಸದೃಢವಾಗಿರಲು ನೆರವಾಗುತ್ತದೆ. 

For Any Health Related Issues, Visit MRRNuLife, Yoga & Naturopathy for Women Wellness

For Appointments Contact: 9071904622

Dr. Ganga:

Dr.Arya:

Comments

comments

Click to comment

Leave a Reply

To Top