ಬೆಳ್ಳುಳ್ಳಿಯು ಆಹಾರ ಪದಾರ್ಥಗಳ ರುಚಿ ಹೆಚ್ಚಿಸುವುದಷ್ಟೆ ಅಲ್ಲದೆ, ಆರೋಗ್ಯಕ್ಕೂ ಲಾಭದಾಯಕವಾಗಿದೆ. ಹಾಗಾದರೆ ಬೆಳ್ಳುಳ್ಳಿಯಿಂದ ಏನೆಲ್ಲಾ ಆರೋಗ್ಯಕರ ಲಾಭಗಳಿವೆ ಎಂಬುದು ಹಲವು ಬಾರಿ ಸಾಬೀತಾಗಿದೆ. ಅದರಂತೆ ಅದರಲ್ಲಿನ ಕೆಲ ಗುಣಗಳು ಹೆಚ್ಚು ಪರಿಣಾಮಕಾರಿಯಾಗಿದೆ.
*ಶ್ವಾಸಕೋಶ ಕಾಯಿಲೆಗಳಿಂದ ಬಳಲುತ್ತಿರುವವರಿಗೂ ಇದು ರಾಮಬಾಣ.
*ಅಸ್ತಮಾ ಮತ್ತು ನ್ಯುಮೋನಿಯ ರೋಗಿಗಳಿಗೂ ಬೆಳ್ಳುಳ್ಳಿ ಔಷಧಿಯಾಗಿ ಕೆಲಸ ಮಾಡುತ್ತದೆ.
*ಆಹಾರ ಪದಾರ್ಥಗಳ ಜೊತೆ ಪ್ರತಿದಿನ ಬೆಳಗ್ಗಿನ ಉಪಹಾರದ ಮುನ್ನ ಬೆಳ್ಳುಳ್ಳಿ ತಿಂದರೆ ಅದು ಆಂಟಿಬಯೋಟಿಕ್ ಆಗಿ ಕೆಲಸ ಮಾಡುತ್ತದೆ.
*ಬೆಳ್ಳುಳ್ಳಿಯು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೊಟ್ಟೆಯನ್ನು ಬ್ಯಾಕ್ಟೀರಿಯಾಗಳಿಂದ ಮುಕ್ತಗೊಳಿಸುತ್ತದೆ.
*ಬೆಳಗ್ಗೆ ಬೆಳ್ಳುಳ್ಳಿ ಸೇವಿಸಿದರೆ ಹಸಿವು ಹೆಚ್ಚಾಗುತ್ತದೆ ಮತ್ತು ಕರುಳು ಸಕ್ರಿಯವಾಗಿ ಕೆಲಸ ಮಾಡುತ್ತದೆ.
*ಬೆಳ್ಳುಳ್ಳಿಯಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಹಾಗೂ ಒತ್ತಡವನ್ನು ಕಡಿಮೆ ಮಾಡುತ್ತದೆ.
*ಕೆಲವೊಬ್ಬರಿಗೆ ಬೆಳ್ಳುಳ್ಳಿ ತಿಂದ ತಕ್ಷಣ ತಲೆನೋವು ಕಾಣಿಸಿಕೊಳ್ಳುತ್ತದೆ. ಅಂಥವರು ಇದನ್ನು ಸೇವಿಸಬೇಡಿ.
