News

ಬಿಗ್ ಬಾಸ್ ನ ಲಾರ್ಡ್ ಪ್ರಥಮ್ ಯಾರು ಗೊತ್ತಾ..?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಬಿಗ್ ಬಾಸ್’ ಸೀಸನ್ ೪ ರಲ್ಲಿ ಎಲ್ಲರ ಗಮನ ತನ್ನೆಡೆಗೆ ಸೆಳೆಯುತ್ತಾ ಅಪಾರ ಅಭಿಮಾನಿಗಳನ್ನು ಹೊಂದಿರುವ ಒಳ್ಳೆ ಹುಡುಗ ಪ್ರಥಮ್. ಹಳ್ಳಿಯಿಂದ ಬಂದು ಜನಸಾಮಾನ್ಯನಂತೆ ಪರಿಚಯವಾದ ಪ್ರಥಮ್ ಈಗ ಸೆಲೆಬ್ರೆಟಿ. ನಿಮಗೆಲ್ಲ ತಿಳಿದಿರುವ ಹಾಗೆ ಪ್ರಥಮ್ ಬಿಗ್ ಬಾಸ್ ನಲ್ಲಿ ಕಿರಿಕ್ ಮಾಡುವಂತಹ ಹುಡುಗ, ಪ್ರತಿಯೊಂದು ಸಣ್ಣ ಪುಟ್ಟ ವಿಷಯಕ್ಕೆ ರಿಯಾಕ್ಟ್ ಆಗಿ ದೊಡ್ಡದಾಗಿ ಮಾಡುತ್ತಾನೆ. ಹಾಗೆ ಜನರನ್ನು ರಂಜಿಸುತ್ತಾನೆ. ಇವರ ಬಗ್ಗೆ ನಿಮಗೆಷ್ಟು ಗೊತ್ತು?? ಪ್ರಥಮ್ ಅವರ ಜೀವನದ ಬಗ್ಗೆ ನಿಮಗೆ ತಿಳಿಯಬೇಕಾ? ಹಾಗಾದರೆ ಮುಂದೆ ಓದಿ…

ಸ್ಕೀನ್ ಮುಂದೆ ಮಾತ್ರ ತಿಕ್ಲು…. ವೈಯುಕ್ತಿಕವಾಗಿ ಪ್ರಥಮ್ ಪ್ರತಿಭಾನ್ವಿತ

ಮೈಸೂರು ಕೊಳ್ಳೆಗಾಲ ತಾಲ್ಲೂಕಿನ ಹಲಗಪುರದ ಹುಡುಗ ಪ್ರಥಮ್. ಹಲಗಪುರ ಪುಟ್ಟ ಗ್ರಾಮವಾದರೂ ಜಮೀನು ಮತ್ತು ತೋಟದಲ್ಲಿ ಮನೆ ಇರುವ ಅನುಕೂಲಸ್ಥರ ಮನೆಯಲ್ಲಿ ಹುಟ್ಟಿ ಬೆಳೆದ ಹುಡುಗ ಪ್ರಥಮ್. ಸರಕಾರಿ ಕೆಲಸದಲ್ಲಿರುವ ಶ್ರೀ ಮಲ್ಲಣ್ಣ, ಲಕ್ಷ್ಮಿಯವರ ಮೊದಲ ಪುತ್ರ. ಮಲ್ಲಣ್ಣ ರೇಷ್ಮೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದರು. ತಾಯಿ ಲಕ್ಷ್ಮೀ ಟೀಚರ್ ಕೆಲಸ ಮಾಡುತ್ತಿದ್ದಾರೆ.

ಪ್ರಥಮ್ ತಂದೆ ತಾಯಿ ಜೊತೆ ಇದ್ದದ್ದು ಕಡಿಮೆ. ಪ್ರಥಮ್ ಅವರ ತಂದೆ ಅವರ ಬಣ್ಣದ ಬದುಕಿನ ಆಸೆಯನ್ನು ಒಪ್ಪಿಕೊಳಲಿಲ್ಲ ಇದರಿಂದಾಗಿ 8 ವರ್ಷಗಳ ಕಾಲ ತಂದೆಯೊಂದಿಗೆ ಮಾತು ಬಿಟ್ಟಿದ್ದರು. ಅಷ್ಟು ಹಠವಾಧಿ ಪ್ರಥಮ್. ಬೆಳೆದದ್ದು ಅಜ್ಜ ಅಜ್ಜಿಯ ಮನೆಯಲ್ಲಿ. ಹೀಗಾಗಿ ತಂದೆ ತಾಯಿಗಿಂತಲೂ ಅಜ್ಜ ಅಜ್ಜಿ ಬಗ್ಗೆ ಇನ್ನಿಲ್ಲದ ಪ್ರೀತಿ. ಚಿತ್ರರಂಗಕ್ಕೆ ಕಾಲಿಡಬೇಕು ಅನ್ನುವುದು ಈತನ ಬಾಲ್ಯದ ಬಯಕೆಯಾಗಿತ್ತು.

ಪ್ರಥಮ್ ಗೆ ಮೊದಲಿನಿಂದಲೂ ಸಾಧನೆ ಮಾಡಬೇಕು ಅನ್ನುವ ಛಲ ಹೊಂದಿರುವಂತಹ ವ್ಯಕ್ತಿ. ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಪ್ರಥಮ್ ಚಿಕ್ಕವಯಸ್ಸಿನಲ್ಲೆ ಆಶುಕವಿತೆ ಬರೆದು ಅನೇಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೈಸೂರಿನ ಟಿ ನರಸಿಂಹಪುರದಲ್ಲಿ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾಭ್ಯಾಸ ಮುಗಿಸಿದ್ದಾರೆ. 6 ನೇ ತರಗತಿಯಲ್ಲೇ ಸಿನಿಮಾ ನಿರ್ದೇಶಕನಾಗ ಬೇಕೆನ್ನುವ ಬಯಕೆಯನ್ನು ಹೊಂದಿದ್ದರು.

ತಂದೆಯ ಮಾತನ್ನು ಧಿಕ್ಕರಿಸಿ ಬೆಂಗಳೂರು ಬಸ್ ಹತ್ತಿದ ಯುವಕ ಗಾಂಧಿನಗರಕ್ಕೆ ಬಂದಿದ್ದ. ಗೆಳೆಯರೊಂದಿಗೆ ಚಿತ್ರರಂಗ ಪ್ರವೇಶ ಮಾಡಿದ್ದ. ಅದೃಷ್ಟಕ್ಕೆ ಬೆನ್ನು ತಟ್ಟುವವರು ಸಿಕ್ಕಿದ್ದರು. ಗಾಂಧಿ ನಗರದ ಅನೇಕ ತಾರೆಯರೊಂದಿಗೆ ತೀರಾ ಆಪ್ತರಂತೆ ನಿಂತು ಫೋಟೋ ತೆಗಿಸಿಕೊಂಡುರುವ ಪ್ರಥಮ್ ಸದ್ಯಕ್ಕೆ ಒಂದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಥಮ್ ಅವರೇ ಹೇಳಿಕೊಂಡಿರುವ ಹಾಗೆ ಇನ್ನೊಂದು ಕಥೆಯೊಂದನ್ನು ರೆಡಿ ಮಾಡಿಕೊಂಡ ಪ್ರಥಮ್ ಅಕುಲ್ ಬಾಲಾಜಿ ನಟಿಸಲಿರುವ ‘ದೇವರವ್ನೇ ಬಿಡು ಗುರು’ ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಇದರ ಜೊತೆಗೆ ಒಳ್ಳೆ ಹುಡುಗ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಪ್ಲಾನ್ ಕೂಡ ಪ್ರಥಮ್ ತೆಲೆಯಲ್ಲಿದೆ.

ಬಿಗ್ಗ್ ಬಾಸ್ ನಲ್ಲಿ ಅಪ್ಪಟ ಕನ್ನಡ ಮಾತನಾಡಬೇಕು ಎನ್ನುವುದರ ಬಗ್ಗೆ ರಂಪಾಟ ಮಾಡಿರುವುದನ್ನು ನೀವೇ ನೋಡಿದ್ದೀರಾ. ನಿಜ ಜೀವನದಲ್ಲೂ ಪ್ರಥಮ್ ಅವರ ವ್ಯಕ್ತಿತ್ವ ಸೇಮ್ ಟು ಸೇಮ್ ಹೀಗೆ ಅಂತ ಅವರ ರೂಮ್ಮೇಟ್ ವಿವೇಕ್ ಹೇಳುತ್ತಾರೆ. ಕನ್ನಡ ಗೊತ್ತಿದ್ದರೂ ಮಾತನಾಡದವರಿಗೆ ಅನೇಕ ಬಾರಿ ಛೀಮಾರಿ ಹಾಕಿದ್ದರಂತೆ. ಒಟ್ಟಿನಲ್ಲಿ ಪ್ರಥಮ್ ಕನ್ನಡದ ಕುವರ ಅಂತ ಹೇಳಿದರೆ ತಪ್ಪಾಗುವುದಿಲ್ಲ.

Amazon Big Indian Festival
Amazon Big Indian Festival

Copyright © 2016 TheNewsism

To Top