god

ಶಿವಾರಾಧಕರು ರುದ್ರಾಕ್ಷಿಗೆ ಯಾಕೆ ಮಹತ್ವವನ್ನು ನೀಡುತ್ತಾರೆ… ಇಲ್ಲಿ ಓದಿ……..

ರುದ್ರಾಕ್ಷಿಯಲ್ಲಿ ಶಿವನ ಸಾನಿಧ್ಯ ಇದೆ ಎಂಬುದು ರೂಢಿಗತ ನಂಬಿಕೆ. ಸಾಲಿಗ್ರಾಮ, ಶಿವಲಿಂಗ, ಬಿಲ್ವಪತ್ರೆ, ತುಳಸಿ, ವಿಭೂತಿಗಳಂತೆ ಅದು ವಿಶಿಷ್ಟ. ರುದ್ರಾಕ್ಷವು ಶಿವಾರಾಧಕರಿಗೆ ಅತ್ಯಂತ ಪವಿತ್ರ.

`ಶಿವ ರಹಸ್ಯ’ದಲ್ಲಿ ತಿಳಿಸಿರುವಂತೆ ಶಿವನ ನೇತ್ರಗಳಿಂದ ಹುಟ್ಟಿ ರುದ್ರನ ಅಕ್ಷಿಗಳೆಂದು ಹೇಳಲ್ಪಟ್ಟು `ರುದ್ರಾಕ್ಷಿ’ ಎಂದಾಯಿತು.
ರುದ್ರಾಕ್ಷಿ ಮಣಿಗೆ ಒಂದರಿಂದ ಹದಿನಾಲ್ಕು ಮುಖಗಳಿರುತ್ತವೆ. ಇವುಗಳ ಮಾಲೆಯನ್ನು ಧರಿಸುವುದರಿಂದ ರೋಗಗಳ ನಿವಾರಣೆಯಾಗಿ ಮಂತ್ರಸಿದ್ಧಿಯಾಗತ್ತದೆಯೆಂದು ನಂಬಿಕೆ.

ಒಂದು ಮುಖವುಳ್ಳ ರುದ್ರಾಕ್ಷಿ ಪರಬ್ರಹ್ಮ ಸ್ವರೂಪವಾಗಿದ್ದು, ಅದನ್ನು ಧರಿಸಿದವರು ಜಿತೇಂದ್ರಿಯರಾಗುತ್ತಾರೆ. ಎರಡು ಮುಖವುಳ್ಳ ರುದ್ರಾಕ್ಷಿಯು ಅರ್ಧನಾರೀಶ್ವರ ರೂಪಿ. ಅದರ ಧಾರಣೆಯಿಂದ ಶಿವನಿಗೆ ಪರಮಪ್ರಿಯರಾಗುವರೆಂದು ನಂಬಿಕೆ. ಮೂರು ಮುಖಗಳ ರುದ್ರಾಕ್ಷಿಯು ಅಗ್ನಿತ್ರಯ ಸ್ವರೂಪ. ನಾಲ್ಕು ಮುಖದ ರುದ್ರಾಕ್ಷಿ ಪರಬ್ರಹ್ಮದ ಪ್ರತೀಕ. ಐದು ಮುಖದ್ದು ಸಾಕ್ಷಾತ್ ಪರಶಿವ ಸ್ವರೂಪ ಎಂಬ ಭಾವನೆ.

ಅದಕ್ಕೆ ಕಾಲಾಗ್ನಿ ಎಂಬ ಹೆಸರು. ಆರು ಮುಖದ ರುದ್ರಾಕ್ಷಿಯು ಷಣ್ಮುಖ ಮತ್ತು ಗಣಪತಿ ದೇವತಾ ಸ್ವರೂಪಿ. ಏಳು ಮುಖಗಳ ರುದ್ರಾಕ್ಷಿ ಸಪ್ತನಿಧಿ, ಸಪ್ತಾಶ್ವ, ಸಪ್ತ ಮಾತೃಕೆಯ ಸಾನಿಧ್ಯ ಹೊಂದಿದೆ. ಎಂಟು ಮೊಗದ ರುದ್ರಾಕ್ಷಿಯು ಅಷ್ಟಮೂರ್ತಿ ಮತ್ತು ಅಷ್ಟವಸು ಸ್ವರೂಪಿ. ಒಂಭತ್ತು ಮುಖದ ರುದ್ರಾಕ್ಷಿ ಶಕ್ತಿಯ ಪ್ರತೀಕ. ಹತ್ತು ಮೊಗದ ರುದ್ರಾಕ್ಷಿಯು ಯಮದೇವಾತ್ಮಕವಾದುದು. ಹನ್ನೊಂದು ಮುಖಗಳ ರುದ್ರಾಕ್ಷಿ ಏಕಾದಶರುದ್ರ. ಹನ್ನೆರಡು ಮುಖಗಳ ರುದ್ರಾಕ್ಷಿಯು ದ್ವಾದಶಾದಿತ್ಯ ಸ್ವರೂಪಿ. ಹದಿಮೂರು ವದನ ರುದ್ರಾಕ್ಷಿಯು ಕಾಮನ ಪ್ರತೀಕ. ಹದಿನಾಲ್ಕು ವದನ ರುದ್ರಾಕ್ಷಿಯು ಕಾಮನ ಪ್ರತೀಕ. ಹದಿನಾಲ್ಕು ಕಣ್ಣುಗಳ ರುದ್ರಾಕ್ಷಿಯು ರುದ್ರನೇತ್ರ ಸ್ವರೂಪಿ. ಇದನ್ನು ಧರಿಸುವುದರಿಂದ ಸಮಸ್ತ ವ್ಯಾಧಿ ನಿವಾರಣೆ.
ಶಿವನು ಯೋಗಾಚಾರ್ಯ, ಸಂಗೀತ, ನೃತ್ಯ, ಕಲೆಯ ಮಹಾಗುರು ದಕ್ಷಿಣಾಮೂರ್ತಿ, ಪರಿಪೂರ್ಣ ಲೋಕ ಗುರುವಿನ ಆದರ್ಶರೂಪವೇ ದಕ್ಷಿಣಾಮೂರ್ತಿ.ಸುಂದರ್ ರಾಜ್, ದೂ: 9844101293 / 9902345293

Have been helping people with personal, official and financial problems for more than 30 years through the ancient wisdom of Astrology. Vijayashree Astro Research Center 174/1A Kumaraswamy Temple Road, I Phase, Banashankari, Bangalore, Karnataka 560050

Consulting Hours:

1 PM - 9 PM

10 AM -4 PM (Sunday)

Comments

comments

Click to comment

Leave a Reply

To Top