News

ತಾರತಮ್ಯ ಏತಕೆ?

ವಿವಿಧತೆಯಲ್ಲೂಏಕತೆಯ ನೆಲೆ ಎನಿಸಿರುವ ಭಾರತದಲ್ಲಿ ಯಾವುದೋ ಒಂದು ತರಹದ ಪಕ್ಷಪಾತ ಇಲ್ಲವೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ನಿಷ್ಪಕ್ಷಪಾತ ಎಂಬ ಶಬ್ದ ನೂರಕ್ಕೆ ನೂರರಷ್ಟು ಪ್ರತ್ಯಕ್ಷ ಎಂಬ ಮಾತು ಸತ್ಯವಲ್ಲ. ಲಿಂಗ ಪಕ್ಷಪಾತ ನೀಗುವ ನಿಟ್ಟಿನಲ್ಲಿ ಮಹಿಳೆಯರು ಬಹಳಷ್ಟು ಮುಂದುವರಿದಿದ್ದಾರೆ ಎಂದು ಹೇಳಬಹುದಷ್ಟೆ.

%e0%b2%a4%e0%b2%be%e0%b2%b0%e0%b2%a4%e0%b2%ae%e0%b3%8d%e0%b2%af

ಮಹಿಳಾ ಸಬಲೀಕರಣ, ವನಿತಾ ವಿಜಯ ಇಂಥವೆಲ್ಲ ತತ್ಕಾಲ ಸಮಾಧಾನ ಪಡಿಸುವ ಶಬ್ದಗಳು ಭುವಿಯಲ್ಲಿ, ಬಾನಿನಲ್ಲಿ ಪುರುಷರಿಗೆ ಸಮಾನ ಎಂಬಷ್ಟರ ಮಟ್ಟಿಗೆ ಪ್ರಮದೆಯರು ಸಾಧನೆ, ಸಾಹಸ ಮಾಡಿದ್ದು ನಿಜ. ಇದು ಮೆಚ್ಚತಕ್ಕ ವಿಚಾರ.

man-and-woman-struggling

ಮುಂಬೈನ ಹಾಜಿ ಅಲಿ ದರ್ಗಾ ಒಳಾಂಗಣ ಪ್ರವೇಶಕ್ಕೆ ಇದ್ದ ನಿರ್ಬಂಧ ಅಸಿಂಧು. ಅಲ್ಲಿ ಹೋಗುವ ಹಕ್ಕು ವನಿತೆಯರಿಗೆ ಇದ್ದೇ ಇದೆ ಎಂಬ ಬಾಂಬೆ ಹೈಕೋರ್ಟ್ ತೀರ್ಪಿನಿಂದ ಉಬ್ಬಿ ಹೋಗಿರುವ ಲಲನೆಯರು ಶಬರಿ ಮಲೆ ಅಯ್ಯಪ್ಪ ದರ್ಶನದ ಮಾರ್ಗವೂ ಸುಗಮವಾಗಿರುದು ಮಹಿಳೆಯರಿಗೆ ಆಕಾಶವೇ ಕೈಗೆಸಿಕ್ಕಂತಾಗಿದೆ.

 

ನಿಷ್ಟಕ್ಷಪಾತ, ಜಾತ್ಯತೀತ ಭಾರತದಲ್ಲಿ ಅಲ್ಲಿಷ್ಟು, ಇಲ್ಲಷ್ಟು ತಾರತಮ್ಯ, ಪಕ್ಷಪಾತ ನಿಚ್ಚಳವಾಗಿ ಕಾಣುತ್ತಿರುವುದು ಸುಳ್ಳಲ್ಲ. ಅರಿವಿಗೆ ಬಾರದ ಹಾಗೆ ಪಕ್ಷಪಾತವು ಮಹಿಳೆಯರ ಮೇಲೆ ಎರಗುವುದು, ಸಂವಿಧಾನಕ್ಕೆ ಅಪಚಾರ ಎಸಗುವುದು ಆತಂಕದ ವಿಚಾರ ಕೋರ್ಟು ಕಚೇರಿಗಳಲ್ಲಿ, ಖಾಸಗಿ ವಲಯದಲ್ಲಿ ಲಿಂಗ ಪಕ್ಷಪಾತ ಧಾಳವಾಗಿ ವಿಜೃಂಭಿಸುತ್ತಿರುವುದು ಬಲು ವ್ಯಸನದ ಸಂಗತಿ. ಈ ನಿಟ್ಟಿನಲ್ಲಿ ಮೂರು ಸಲ ತಲಾಖ್ ಉಚ್ಚರಿಸಿದ ಮಾತ್ರಕ್ಕೆ ಮುಸ್ಲಿಂ ಗಂಡಂದಿರು ಮದುವೆಯನ್ನು ಮುರಿದುಕೊಳ್ಳಬಹುದು ಎಂಬುದು ಲಿಂಗ ಪಕ್ಷಪಾತದ ನಿಚ್ಚಳ ಉದಾಹರಣೆ.

sabarimala_b_12012016

ಇದು ಏಕಪಕ್ಷೀಯ ನಡೆ. ಮುಗ್ಧ ಪತ್ನಿಯನ್ನು ವಿವಾಹ ಬಂಧನದಿಂದ ಹೊರಗೆ ಅಟ್ಟಿ ಅವಳನ್ನು, ಮಕ್ಕಳನ್ನು ಅನಾಥವಾಗಿಸುವ ತ್ರಿಪಲ್ ತಲಾಖ್ ಏಕಪಕ್ಷೀಯ, ಅಮಾನವೀಯ ಎಂಬ ಧ್ವನಿ ಭುಗಿಲೆಬ್ಬಿರುವುದು ದಿಟ. ಈ ಅವ್ಯವಸ್ಥೆಯ ವಿರುದ್ಧ ಮಾತನಾಡುವ ಅವಕಾಶ ಅವಳಿಗೆ ಇಲ್ಲವಲ್ಲ. ಇದು ಲಿಂಗ ತಾರತಮ್ಯವೇ ಹೌದು. ಪುರುಷ ಮಾಡಿದ್ದೆಲ್ಲ ಸರಿ ಎಂಬುದು ಸರಿಯಲ್ಲ. ಮಹಿಳೆಗೂ ಅವಕಾಶ ಬೇಕು. ಭಾರತದಲ್ಲಿ ಈ ವ್ಯವಸ್ಥೆ ಸಂವಿಧಾನ ಬಾಹಿರ ಎಂಬ ಅಸಮಾಧಾನದೊಂದಿಗೆ ಮಹಿಳೆಯರು ಸುಪ್ರೀಂ ಕೋರ್ಟ್ ಮೊರೆ ಹೊಕ್ಕದ್ದೇನೋ ನಿಜ.

ಈ ನಿಟ್ಟಿನಲ್ಲಿ ತಲಾಖ್ ಕುರಿತಂತೆ ಸಂವಿಧಾನವಾಗಲಿ, ಸುಪ್ರೀಂ ಕೋರ್ಟ್ ಆಗಲಿ ಹಸ್ತಕ್ಷೇಪ ಮಾಡಲು ಬರುವುದಿಲ್ಲ ಎಂದು ಅಖಿಲ ಭಾರತ ಮುಸ್ಲಿಂ ಕಾನೂನು ಮಂಡಳಿ ಸಮರ್ಥಿಸಿಕೊಳ್ಳುವುದು ಸಮಂಜಸವಲ್ಲವೆಂಬ ಅಭಿಪ್ರಾಯ ಇದ್ದೇ ಇದೆ. ಪವಿತ್ರ ಗ್ರಂಥ ಕುರಾನಿನಲ್ಲೂ ಈ ಕುರಿತು ಸಮರ್ಥನೆ ಇಲ್ಲವೆಂಬ ವಾದ ಉಂಟು. ಹೀಗಿರುವಾಗ ಇಂಥ ಏಕಪಕ್ಷೀಯ ನಡೆ ಪಕ್ಷಪಾತದ್ದು ಎಂಬುದರಲ್ಲಿ ಅನುಮಾನವಿಲ್ಲ.

divorce-islam

ಇಂತಹ ತಾರತಮ್ಯ ದೇಶದ ಮುನ್ನಡೆಗೆ ಅಡ್ಡಿ ಒಡ್ಡುವಂತಹದು. ಕೋಮು ಸೌಹಾರ್ದತೆ ಕದಡುವಂತಹದು. ಕೆಲವು ಮುಸ್ಲಿಂ ದೇಶಗಳು ತ್ರಿಪಲ್ ತಲಾಖ್ ಕುರಿತು ಮರು ಚಿಂತನೆ ಮಾಡುತ್ತಿರುವಾಗ ಭಾರತವೂ ಈ ಬಗ್ಗೆ ಒಲವು ತೋರಬಹುದಲ್ಲ.

 

ಲಿಂಗ ತಾರತಮ್ಯ ಸಂಪೂರ್ಣವಾಗಿ ನಿವಾರಿಸುವ ನಿಟ್ಟಿನಲ್ಲಿ ಭಾರತ ಸಂವಿಧಾನದ ಆಧಾರ ಸ್ಥಂಬಗಳೇನಿಸಿರುವ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಮತ್ತು ಸುದ್ದಿ ಮಾಧ್ಯಮಗಳು ಅನ್ಯಾಯ ಪರಿಹರಿಸಿ ನ್ಯಾಯ, ಸಮಾನತೆಯನ್ನು ಎತ್ತಿ ಹಿಡಿಯುವ ಪ್ರಯತ್ನ ಸಂಘಟಿತವಾಗಿ ಮಾಡಬಹುದು. ಈ ಮೂಲಕ ಮಹಿಳೆಯರ ಕಣ್ಣೀರು ಒರೆಸುವುದು ಸಾಧ್ಯವಾದೀತು. ಇದರಿಂದ ಮುಕ್ತ ಚಿಂತನೆಗೆ ಅವಕಾಶ ಒದಗಿಸುವ ಸಂದರ್ಭವೂ ಸದ್ಯಕ್ಕೆ ತೆರೆದುಕೊಂಡಂತಾದೀತು.

Amazon Big Indian Festival
Amazon Big Indian Festival

Copyright © 2016 TheNewsism

To Top