god

ವೈಕುಂಠ ಏಕಾದಶಿ ಪೂಜೆಯ ವಿಶೇಷ

ವೈಕುಂಠ ಏಕಾದಶಿ ಏಕಾದಶಿಗಳಲ್ಲಿ ವಿಶೇಷ ದಿನ.ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿಯೇ ಈ ವಿಶೇಷ ದಿನ. ಈ ದಿನ ವೆಂಕಟೇಶ್ವರ/ಶ್ರೀನಿವಾಸ/ವಿಷ್ಣು ದೇವಸ್ಥಾನಗಳಲ್ಲಿ ಜನಸಂದಣಿ ಹೆಚ್ಚು. ಈ ದಿನ ದೇವಸ್ಥಾನಗಳಲ್ಲಿ ನಿರ್ಮಿಸಿರುವ ವೈಕುಂಠ ದ್ವಾರದ ಒಳಗೆ ಹೋಗಿ ಬಂದರೆ ಮೋಕ್ಷ ಸಿಗುವುದೆಂಬ ಪ್ರತೀತಿಯಿದೆ..

ಭಗವಮತನ ಪೂಜೆಯಲ್ಲಿ ಪಾಲ್ಗೊಳ್ಳುವುದು

ಈ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಭಗವಮತನ ಪೂಜೆಯಲ್ಲಿ ಪಾಲ್ಗೊಳ್ಳುವುದು ಅತಿ ಮುಖ್ಯ. ಈ ದಿನ ತುಳಿಸಿಯ ಅರ್ಚನೆಯಿಂದ ಪರಮಾತ್ಮನನ್ನು ವಿಶೇಷವಾಗಿ ಸಂತೋಷಗೊಳಿಸಬಹುದು. ಇಂದ್ರಿಯಗಳಿಂದ ಮಾಡಿದ ಪಾಪ ಪರಿಹಾರವೇ ಉಪವಾಸದ ಮುಖ್ಯ ಉದ್ದೇಶ. ಅದರಲ್ಲೂ ಈ ವೈಕುಂಠ ಏಕಾದಶಿಯ ಉಪವಾಸ ಅತಿ ಮುಖ್ಯ.

ಈ ವೈಕುಂಠ ಏಕಾದಶಿಯಂದು ಉಪವಾಸ ಮಾಡಿದರೆ, ನಾವು ಇಡೀ ವರ್ಷ ಏನೇ ಪಾಪಗಳನ್ನು ಮಾಡಿದ್ದರೂ ಆ ಎಲ್ಲಾ ಪಾಪಗಳನ್ನು ಪರಿಹಾರವಾಗಿ ಮೋಕ್ಷ ನಿಶ್ಚಿತ ಎಂದುಕೊಂಡಿರುತ್ತೇವೆ. ಶಾಸ್ತ್ರಗಳಲ್ಲಿ ಹೇಳಿದ ವಿಧಿ ನಿಯಮಗಳಿಗೆ ಅನುಸರಿಸಿ ಸತ್ಕರ್ಮಗಳನ್ನಾಚರಿಸಿ ಎಚ್ಚರಿಕೆಯಿಂದ ಪ್ರಯತ್ನಪೂರ್ವಕವಾಗಿ ಕೆಟ್ಟ ಕೆಲಸಗಳನ್ನು ಮಾಡದೆ ಈ ವೈಕುಂಠ ಏಕಾದಶಿ ಮಾಡಿದರೆ ಮಾತ್ರ ಭಗವಂತನ ಅನುಗ್ರಹವಾಗುವುದು ಎಂದರ್ಥ.

ವೈಕುಂಠ ಏಕಾದಶಿ ದಿನದಂದು  ಸ್ವರ್ಗ ಪ್ರಾಪ್ತಿಯಾಗುತ್ತದೆ :

ವೈಕುಂಠ ಏಕಾದಶಿಯ ದಿನ ವೈಕುಂಠದ (ಸ್ವರ್ಗದ ಅಥವಾ ವಿಷ್ಣುಲೋಕದ) ಬಾಗಿಲು ತೆರೆದಿರುತ್ತದೆ ಎಂದು ಪ್ರತೀತಿ ಇದೆ. ಅಂದು ವೆಂಕಟೇಶ್ವರ/ಶ್ರೀನಿವಾಸ/ವಿಷ್ಣು ದೇವರ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಭಾವನೆಯು ಇದೆ.

 

Health Articles written here, are only a guideline. Please consult a doctor before adopting these changes.

ಈ ಅರೋಗ್ಯ ಮಾಹಿತಿಯು ನಿಮಗೆ ಒಂದು ಮಾರ್ಗದರ್ಶಿ ಮಾತ್ರ, ಇದನ್ನು ಪಾಲನೆ ಮಾಡುವ ಮುನ್ನ ವೈದ್ಯರನ್ನು ಸಂಪರ್ಕಿಸಿ..

Comments

comments

Click to comment

Leave a Reply

Your email address will not be published. Required fields are marked *

To Top