News

ಅವರೆಕಾಯಿಮೇಳ ಶುರುವಾಗಿದೆ ಕಣ್ರಪ್ಪ!!!

ಅವರೇಕಾಳು ಪ್ರಿಯರಿಗೆ ಸಿಹಿ ಸುದ್ಧಿ… ಉದ್ಯಾನ ನಗರಿ ಹೃದಯ ಭಾಗದಲ್ಲಿ ಮತ್ತೆ ಹಬ್ಬದ ವಾತಾವರಣ. ಕಡಲೆಕಾಯಿ ಪರಿಷೆ ಮುಗಿದು ಇನ್ನು ತಿಂಗಳು ಕಳೆದಿಲ್ಲ.. ಅದಾಗಲೆ ಅವರೆಕಾಳು ಮೇಳ ಆರಂಭವಾಗಿದೆ. ವಿ ವಿ ಪುರದ ಸಜ್ಜನ್ ರಾವ್ ವೃತ್ತದಲ್ಲಿಗ ಅವರೆಕಾಳಿನ ಬಗೆ ಬಗೆಯ ತಿಂಡಿಗಳದ್ದೇ ಘಮ. ಕೊಂಚ ತಡವಾಗಿ ಆರಂಭವಾಗಿರುವ ಮೇಳ ಜನವರಿ 7 ರಿಂದ 24ರ ತನಕ ನಡೆಯಲಿದೆ. ವಾಸವಿ ಕಾಂಡಿಮೆಂಟ್ಸ್‌ ನೇತೃತ್ವದಲ್ಲಿ ನಡೆಯುತ್ತಿರುವ ಅವರೆ ಮೇಳಕ್ಕೆ ಈ ಬಾರಿ 16 ರ ಹರೆಯ.ಚಳಿಗಾಲ ಬಂತೆಂದರೆ ಅವರೆಕಾಯಿಯದ್ದೇ ಸುಗ್ಗಿ. ಮುದ್ದೆಗೆ ಹಿತಿಕಿದ ಅವರೆಯ ಸಾಂಬಾರು, ಅವರೆಕಾಯಿ ಉಪ್ಪಿಟ್ಟು, ಉಸುಳಿ ಎಂತವರ ನಾಲಿಗೆಯಲ್ಲೂ ನೀರು ತರಿಸುತ್ತದೆ.

ಮೇಳದಲ್ಲಿ ಮಾಗಡಿ, ಹುಣಸೂರು, ಚಿಂತಾಮಣಿ, ಕೋಲಾರದ ರೈತರು ತಾವು ಸ್ವತಃ ಬೆಳೆದು ಹಲವಾರು ರೀತಿಯ ಅವರೆ ಬೇಳೆಗಳನ್ನು ವಾಸವಿ ಕಾಂಡಿಮೆಂಟ್ಸ್‌ಗೆ ಮಾರಾಟ ಮಾಡುತ್ತಾರೆ. ಅವರು ರೈತರು ಕೇಳಿದಷ್ಟು ಬೆಲೆಗೆ ಅವರೆಯನ್ನು ಖರೀದಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. 500 ಕ್ಕೂ ಹೆಚ್ಚು ರೈತರು ಈ ಮೇಳದಲ್ಲಿ ಪಾಲ್ಗೊಂಡಿದ್ದಾರೆ. ಮೇಳದಲ್ಲಿ 40 ಬಗೆಯ ಸಿಹಿ ತಿನಿಸುಗಳು, 30 ಬಗೆಯ ಖಾರ ತಿನಿಸುಗಳು, ಅವರೆ ಬೇಳೆಯಿಂದ ತಯಾರಿಸಿದ 30 ಬಗೆಯ ತಿನಿಸುಗಳು ಲಭ್ಯವಿದೆ.

Image result for avare mela

ಮೇಳದಲ್ಲಿ ಏನೇನು ತಿನಿಸು ಲಭ್ಯ?ಅವರೇಕಾಯಿ ಇಡ್ಲಿ, ದೋಸೆ, ಪಾಯಸ, ಚಕ್ಕುಲಿ, ನಿಪ್ಪಟ್ಟು, ಹಿತಕ ಬೇಳೆ ಹೋಳಿಗೆ, ಒತ್ತು ಶಾವಿಗೆ ಅವರೆಕಾಳು, ಅವಲಕ್ಕಿ ಮಿಕ್ಸ್, ರಾಗಿಮುದ್ದೆ ಅವರೆಕಾಳು ಸಾರು, ಹಿತಕಬೇಳೆ ಜಾಮೂನು, ಹೋಳಿಗೆ, ಮೊಸರು ವಡೆ, ಸೋನಾ ಕೇಕ್ಸ್, ಹಿತಕಬೇಳೆ ಹಲವಾ, ಪೆಪ್ಪರ್ ಹಿತಕ ಬೇಳೆ, ಅವರೆಕಾಳು ಉಪ್ಪಿಟ್ಟು ಸೇರಿದಂತೆ ನೂರಾರು ಬಗೆಯ ಸಿಹಿ ಹಾಗೂ ಖಾರ ಪದಾರ್ಥಗಳು ಲಭ್ಯವಿದೆ.

ಹೊಸ ತಿಂಡಿಗಳೇನು?

ಪುದೀನ ಹಿತಕಬೇಳೆ, ಮತ್ತು ಕಾರ ಹಿತಕ ಬೇಳೆ ಈ ಬಾರಿಯ ಹೊಸ ಐಟಂಗಳು. ಕೆಜಿಗೆ 600 ರು. ನಿಗದಿಪಡಿಸಿದ್ದರೂ ರುಚಿಯನ್ನು ಒಮ್ಮೆ ಸವಿಯಲೆಬೇಕು.

ಅವರೆಕಾಯಿಯ ವಿಧ ವಿಧ ವ್ಯಂಜನಗಳು ಹಾಗೂ ಅದನ್ನು ಮಾಡುವ ವಿಧಾನ ತಿಳಿಯಬೇಕಾದರೆ ಒಮ್ಮೆ ಇಲ್ಲಿಗೆ ಭೇಟಿ ಕೊಡಿ….

Image result for avare mela

Comments

comments

Amazon Big Indian Festival
Click to comment

Leave a Reply

Your email address will not be published. Required fields are marked *

Amazon Big Indian Festival
To Top