News

ಅವರೆಕಾಳಿನ ಅಷ್ಟ ಉಪಯೋಗಗಳು

ಡಿಸೆಂಬರ್ ಬಂತೆಂದರೆ  ಅವರೆಕಾಳಿನದೇ ಸುಗ್ಗಿ..ಎಲ್ಲರ ಮನೆಗಳಲ್ಲೂ ಅವರೆಕಾಳಿನ ಸಾರು, ಉಪ್ಪಿಟ್ಟು ಉಸುಳಿಗಳದ್ದೇ ಕಾರುಬಾರು… ಅವರೇಕಾಳು ಬಾಯಿಗೆ ಎಷ್ಟು ರುಚಿಯೂ ಅಷ್ಟೇ ಆರೋಗ್ಯಕ್ಕೂ ಉತ್ತಮ…

ಅದರ ಕೆಲವು ಉಪಯೋಗಗಳು ಇಲ್ಲಿವೆ ನೋಡಿ.

) ಮಿದುಳಿನ ಆರೋಗ್ಯಕ್ಕೆ:

ಅವರೆಕಾಳುಗಳಲ್ಲಿ ಕಾಪರ್ ಪ್ರಮಾಣವು ಅಧಿಕವಾಗಿದ್ದು ದೇಹದಲ್ಲಿ ಡೋಪಮೈನ್ ಅಂಶವನ್ನು ಉತ್ಪಾದಿಸುವಲ್ಲಿ ಸಹಾಯ ಮಾಡುತ್ತದೆ.

ಅವರೆಕಾಳಿನಲ್ಲಿರುವ ಆಂಟಿ ಆಕ್ಸಿಡಾಂಟ್ಸ್ ಗಳು ಮಿದುಳಿನ ಜೀವಕೋಶಗಳ ಹಾನಿಯನ್ನು ತಪ್ಪಿಸಿ ನರಸಂಬಂಧಿ ರೋಗಗಳನ್ನು ಹಾಗು ವೃದ್ಧಾಪ್ಯದ ಲಕ್ಷಣಗಳನ್ನು ತಡೆಗಟ್ಟುತ್ತದೆ.

Image result for brain

) ಹೃದ್ರೋಗವನ್ನು ನಿಯಂತ್ರಿಸುತ್ತದೆ:

ಅವರೆಕಾಳಿನಲ್ಲಿರುವ ವಿಟಮಿನ್ ಬಿ೧ ಅಸಿಟೈಲ್ ಕೊಲಿನ್ ಎಂಬ ನ್ಯೂರೋ ಟ್ರಾನ್ಸ್ಮಿಟರ್ ಅನ್ನು ಉತ್ಪಾದಿಸುತ್ತದೆ.ಅದು ನರ ಮತ್ತು ಮಾಂಸಖಂಡಗಳ ಕಾರ್ಯದ  ಮಧ್ಯೆ ನಿಯಂತ್ರಣವನ್ನು ಸ್ಥಾಪಿಸುತ್ತದೆ.

ವಿಟಮಿನ್ ಬಿ೧ ಹೃದಯದ ಅಪಧಮನಿಗಳ ಕಾರ್ಯ ದಕ್ಷತೆಯನ್ನು ಹೆಚ್ಚಿಸಿ ಹೃದಯದ ವೈಫಲ್ಯವನ್ನು ತಡೆಗಟ್ಟುತ್ತದೆ.

) ಕ್ಯಾನ್ಸರ್ ರೋಗಕ್ಕೆ ರಾಮಬಾಣ :

ಅವರೆಕಾಳಿನಲ್ಲಿರುವ ಜಿಂಕ್ ಅಂಶಗಳು ಜೀವಕೋಶಗಳ ಹಾಗು ಡಿಏನ್ಎ ಹಾನಿಯನ್ನು , ಅನಗತ್ಯ ಜೀವಕೋಶಗಳ ವಿಭಜನೆಯನ್ನು ತಡೆಗಟ್ಟಿ ಕ್ಯಾನ್ಸರ್ ಜೀವಕೋಶಗಳು ಬೆಳೆಯದಂತೆ ನಿಯಂತ್ರಿಸುತ್ತವೆ.

ಜಿಂಕ್ ಅಂಶವು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

)  ಉಸಿರಾಟ ಪ್ರಕ್ರಿಯೆಯನ್ನು ಉತ್ತಮಗೊಳಿಸುತ್ತದೆ:

ಸೆಲೆನಿಯಮ್ ,ಮ್ಯಾಂಗನೀಸ್ ಅಂಶಗಳು ಸಾದ್ ಎಂಬ ಕೆಮಿಕಲ್ ಅನ್ನು ಉತ್ಪಾದಿಸಿ ಶ್ವಾಸಕೋಶಗಳ  ಜೀವಕೋಶದ ಉರಿಯನ್ನು ಕಡಿಮೆ ಮಾಡಿ ಅವುಗಳ ಅರೋಗ್ಯ ಹಾಗು ಕಾರ್ಯದಕ್ಷತೆಯನ್ನು ಹೆಚ್ಚಿಸುತ್ತದೆ.

ಶ್ವಾಸಕೋಶ ಸಂಬಂಧಿ ಕಾಯಿಲೆಗಳಾದ ಅಸ್ತಮಾ, ದೀರ್ಘಕಾಲದ ಕೆಮ್ಮು, ಕಫ ಇತ್ಯಾದಿ ಕಡಿಮೆ  ಮಾಡುತ್ತದೆ.

Image result for breathing

) ನಿದ್ರಾಹೀನತೆ ಕಡಿಮೆ ಮಾಡುತ್ತದೆ:

ಅವರೆಕಾಳಿನಲ್ಲಿರುವ ಮೆಗ್ನೀಷಿಯಂ ಅಂಶವು ನಿದ್ದೆಯ ಪ್ರಮಣವನ್ನು, ಗುಣಮಟ್ಟವನ್ನು ಹೆಚ್ಚುಮಾಡುತ್ತದೆ.

ಮೆಗ್ನೀಷಿಯಂ ಅಂಶವು ದೇಹದ ಕಾರ್ಟಿಸೋಲ್ ಪ್ರಮಾಣವನ್ನು ಕಡಿಮೆಗೊಳಿಸಿ ಮೆಲಟೋನಿನ್ ಅಂಶವನ್ನು ಹೆಚ್ಚಿಸಿ ದೇಹದ ಒತ್ತಡವನ್ನು ಕಡಿಮೆ ಮಾಡುತ್ತದೆ.

Image result for sleep

೬) ದೇಹದ ಕಾರ್ಯ ಕ್ಷಮತೆಯನ್ನು ಹೆಚ್ಚಿಸುತ್ತದೆ:

ಅವರೆಕಾಳಿನಲ್ಲಿರುವ ಐರನ್ ಅಂಶವು ದೇಹದ ಕೆಂಪು ರಕ್ತಕಣಗಳನ್ನು ಹೆಚ್ಚು ಮಾಡಿ ಜೀವಕೋಶಗಳಿಗೆ ಆಮ್ಲಜನಕವನ್ನು ತಲುಪಿಸವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ.

-ಆಹಾರದಲ್ಲಿರುವ  ಪ್ರೊಟೀನ್ ಹಾಗು ಇತರ ಪೌಷ್ಟಿಕಾಂಶಗಳು ದೇಹಕ್ಕೆ ಸಮರ್ಪಕವಾಗಿ ಸೇರುವಂತೆ ಮಾಡುತ್ತವೆ.

– ಮಾನಸಿಕ ಒತ್ತಡ, ಸ್ನಾಯುಗಳ ಬಿಗಿತ, ಸುಸ್ತು, ನಿಶ್ಯಕ್ತಿ ಮುಂತಾದವುಗಳ್ನ್ನು ಕಡಿಮೆ ಮಾಡುತ್ತದೆ.

೭) ನೋವು ಶಮನ ಮಾಡುತ್ತದೆ:

ಅವೆರೆಯಲ್ಲಿರುವ ಪೊಟ್ಯಾಷಿಯಂ ಕಣಗಳು ಸ್ನಾಯುಗಳ ಬಿಗಿತವನ್ನು ಕಡಿಮೆ ಮಾಡಿ ಅವುಗಳ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

೮)ಪಚನ ಕ್ರಿಯೆಯನ್ನು ವೃದ್ಧಿಸುತ್ತದೆ:

ಅವರೆಕಾಳಿನಲ್ಲಿರುವ ಕರಗದ ನಾರಿನಂಶಗಳು ದೊಡ್ಡಕರುಳಿನಲ್ಲಿ  ಮಲದ ಚಲನೆಯನ್ನು ಅಧಿಕಗೊಳಿಸಿ ಮಲಬದ್ಧತೆ, ಹೊಟ್ಟೆ ಉಬ್ಬರ, ಅಜೀರ್ಣ ಮುಂತಾದ ಉದರ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟುತ್ತವೆ.

 

Comments

comments

Click to comment

Leave a Reply

Your email address will not be published. Required fields are marked *

To Top