god

ದೇವಿ ಕೈಗೆ ಕೋಳ ತೊಡಿಸಿ ಪೂಜೆ..!

ನಮ್ಮ ದೇಶದಲ್ಲಿ ಇಂತಹ ವಿಚಿತ್ರ ಮಂದಿರ ಇದೆ ಎಂದರೆ ನೀವು ನಂಬಲೇ ಬೇಕು. ಅದೇನೆಂದರೆ ದೇವಿಯ ಕೈಗೆ ಕೋಳ ಹಾಕಿ ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಬೇಡಿಕೊಳ್ಳುತ್ತಾರೆ. ಈ ಮಂದಿರ ರಾಜಸ್ಥಾನದ ಪ್ರತಾಪಗಡದಲ್ಲಿದೆ. ಈ ಮಂದಿರದ ಹೆಸರು ದಿವಾಕ್ ಮಂದಿರ. ದೇವಿಯ ಈ ದೇವಾಲಯ ಜೋಲರ್ ಗ್ರಾಮ ಪಂಚಾಯತ್ ಹೆಸರಿನ ಜಾಗದಲ್ಲಿದೆ.

ಈ ದಿವಾಕ್ ಮಂದಿರ ವೀಕ್ಷಣೆಗೆ ದೂರ ದೂರದಿಂದ ಹಲವಾರು ಜನರು, ಭಕ್ತಾದಿಗಳು ಬರುತ್ತಾರೆ. ದೇವಿಯನ್ನು ಖುಷಿಪಡಿಸಲು ಜನರು ಕೈಕೋಳ ಅಥವಾ ಬೇಡಿ ತೊಡಿಸುತ್ತಾರೆ.

ಈ ಮಂದಿರದ ಪರಿಸರದಲ್ಲಿ ಸುಮಾರು 200 ವರ್ಷ ಹಳೆಯದಾದ ಒಂದು ತ್ರಿಶೂಲ ಇದೆ. ಇದರ ಮೇಲೆ ಬೇಡಿ ಅಥವಾ ಕೈಕೋಲ ತೊಡಿಸಲಾಗುತ್ತದೆ. ಈ ತ್ರಿಶೂಲದ ಮೇಲೆ ಇಟ್ಟಿರುವಂತಹ ಕೈಕೋಳಗಳು ಸುಮಾರು 100 ವರ್ಷದಷ್ಟು ಹಳೆಯದಾಗಿವೆ ಎಂದು ಹೇಳಲಾಗುತ್ತದೆ. ಇಲ್ಲಿಗೆ ಹಲವಾರು ಜನ ಬಂದು ತಮ್ಮ ಸಂಬಂಧಿಕರನ್ನು ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಬಯಸಿ ದೇವರಲ್ಲಿ ಪ್ರಾರ್ಥನೆ ಮಾಡಿ ಕೈಕೋಳ ತೊಡಿಸುತ್ತಾರೆ.

ಡಕಾಯಿತರು ಬೇಡಿಕೆ ಈಡೇರುವಂತೆ ಪ್ರಾರ್ಥಿಸುತ್ತಾರೆ :
ಈ ಮಂದಿರಕ್ಕೆ ಸಂಬಂಧಿಸಿದಂತೆ ಒಂದು ಕತೆಯೇ ಇದೆ. ಈ ಹಿಂದೆ ಇಲ್ಲಿ ಕೇವಲ ಕಾಡು ಮಾತ್ರ ಇತ್ತು. ಆ ಸಮಯದಲ್ಲಿ ಇಲ್ಲಿ ಡಕಾಯಿತರು ವಾಸವಾಗಿದ್ದರು. ಆ ಡಕಾಯಿತರು ಇಲ್ಲಿ ಪೂಜೆ ಮಾಡುತ್ತಿದ್ದರು. ನಂತರ ಅವರು ತಾವು ಕಳ್ಳತನ ಯಶಸ್ವಿಯಾಗುವಂತೆ ಅಥವಾ ಜೈಲಿನಿಂದ ತಪ್ಪಿಸಿಕೊಂಡು ಬರುವಂತೆ ಆಗಲು ಪ್ರಾರ್ಥನೆ ಮಾಡುತ್ತಿದ್ದರು. ಒಂದು ವೇಳೆ ಅದು ಯಶಸ್ವಿಯಾದರೆ ದೇವಿಗೆ ಕೈಕೋಳ ತೊಡಿಸುತ್ತಿದ್ದರು. ಅದೆ ಸಂಪ್ರದಾಯ ಈಗ ಮುಂದುವರೆದುಕೊಂಡು ಬಂದಿದೆ.

Health Articles written here, are only a guideline. Please consult a doctor before adopting these changes.

ಈ ಅರೋಗ್ಯ ಮಾಹಿತಿಯು ನಿಮಗೆ ಒಂದು ಮಾರ್ಗದರ್ಶಿ ಮಾತ್ರ, ಇದನ್ನು ಪಾಲನೆ ಮಾಡುವ ಮುನ್ನ ವೈದ್ಯರನ್ನು ಸಂಪರ್ಕಿಸಿ..

Comments

comments

Click to comment

Leave a Reply

Your email address will not be published. Required fields are marked *

To Top